ಸಿಯುಕೆಯಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆ

0
12

ಕಲಬುರಗಿ: ನಾವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸಂಭ್ರಮಿಸಿದರೆ ಸಾಲದು, ಸಮಾಜಕ್ಕಾಗಿ ನಾವು ನಮ್ಮ ಕೆಲಸ ಮಾಡಬೇಕು. ನಮ್ಮದೇಶವುಅಭಿವೃದ್ಧಿಯತ್ತ ಸಾಗಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ನಮ್ಮದೇಶವುಇನ್ನೂ ಅಭಿವೃದ್ಧಿಶೀಲ ರಾಷ್ಟ್ರವಾಗಿಗುರುತಿಸಲ್ಪಟ್ಟಿದೆ.

ಭಾರತವನ್ನುಅಭಿವೃದ್ಧಿ ಹೊಂದಿದದೇಶವನ್ನಾಗಿ ಮಾಡಲು ಪ್ರತಿಯೊಬ್ಬರ ಶ್ರಮಅಗತ್ಯ. ಪ್ರತಿಯೊಂದು ಮನೆಯನ್ನು ನಿರ್ಮಿಸಲು ಪ್ರತಿಯೊಂದುಇಟ್ಟಿಗೆಯೂ ಮುಖ್ಯವಾಗಿದೆ, ಅದೇರೀತಿರಾಷ್ಟ್ರವನ್ನು ನಿರ್ಮಿಸಲು ಪ್ರತಿಯೊಂದು ಸಂಸ್ಥೆಯು ಕೆಲಸ ಮಾಡುವುದು ಅಗತ್ಯವಾಗಿರುತ್ತದೆಎಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಗೌರವಾನ್ವಿತ ಉಪಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯ ಣಅಭಿಪ್ರಾಯಪಟ್ಟರು.

Contact Your\'s Advertisement; 9902492681

ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ 73ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿಅವರು ಮಾತನಾಡಿದರು. ನಮ್ಮ ಪೂರ್ವಜರ ಕನಸುಗಳನ್ನು ನನಸು ಮಾಡಲು ನಾವು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಭಂದಿಗಳು ಒಟ್ಟಾಗಿ ಕೆಲಸ ಮಾಡಬೇಕುಎಂದುಅವರು ಹೇಳಿದರು.

ಕಾರ್ಯಕ್ರಮದಲ್ಲಿಕರ್ನಾಟಕಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಸಚಿವ ಪೆÇ್ರ.ಬಸವರಾಜ ಪಿ ಡೋಣೂರ, ಪರೀಕ್ಷಾ ನಿಯಂತ್ರಕ ಬಸವರಾಜಕೆರೂರ, ಹಣಕಾಸುಅಧಿಕಾರಿ ಶವಾನಂದಂ, ಕಾರ್ಯಕ್ರಮದ ಸಂಯೋಜಕರುಡಾ.ಬಸವರಾಜಕುಬಕಡ್ಡಿ, ಡೀನ್‍ಗಳು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here