ಕಲಬುರಗಿ: ರಾವೂರ ಗ್ರಾಮದ ವಾರ್ಡ ಸಂಖ್ಯೆ 01ರ ವಾಡಿ ರಸ್ತೆಯಿಂದ ಕನಕ ನಗರಕ್ಕೆ ಹೋಗುವ ಮುಖ್ಯ ರಸ್ತೆ ಹದೆಗೆಟ್ಟಿದು ಕೊಚ್ಚೆಯಲ್ಲಿ ಜನ ಬಿಳುವುದು ಆಸ್ಪತ್ರೆ ಸೇರುವುದು ಸಾಮಾನ್ಯದ್ದು, ಬಡಾವಣೆಯ ಸಮಸ್ಯೆ ನಿವಾರಿಸಲು ಆಗ್ರಹಿಸಿ ಗ್ರಾಮದ ನಿವಾಸಿ ಜಗದೇಶ ಪೂಜಾರಿ ರಾವೂರ ಅವರು ಗ್ರಾಮ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಾರ್ಡ್ ನಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಜನರು ಚರಂಡಿಗೆ ಬೀಳುವುದು ಸಮಾನ್ಯವಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ಬೀದಿ ದೀಪಗಳು ಇಲ್ಲದಿರುವುದರಿಂದ ಜನ ರಾತ್ರಿ ಹೊತ್ತು ರಸ್ತೆಯಲ್ಲಿ ಜಾರಿ ಬಿದ್ದು ಕೈ ಕಾಲು ಮುರಿದುಕೊಳ್ಳುವ ಹಂತ ತಲುಪುವಂತಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದರು.
ತಕ್ಷಣ ಬಡಾವಣೆಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಹಾಗೂ ಬೀದಿ ದೀಪಗಳನ್ನು ಅಳವಡಿಸಲು ಸೂಕ್ತ ಕ್ರಮಗಳನ್ನು ಕೈ ಗೊಳ್ಳಬೇಕೆಂದು ಬಡವಾಣೆಯ ನಿವಾಸಿಗಳು ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಲ್ಲಾಲಿಂಗ, ರಾಮಲಿಂಗ, ಭೀಮಶಂಕರ, ಭೀಮರಾಯ ಎಮ್, ಭೀಮಶಂಕರ, ಸಾಬಣ್ಣ ಇದ್ದರು.