ಹಲ್ಲೆಕೋರರನ್ನು ಬಂಧಿಸಿ, ಗಡಿ ಪಾರು ಮಾಡಿ’

0
22

ಹುಮನಾಬಾದ್: ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಘಟಕದಿಂದ ಶನಿವಾರ ಪಟ್ಟಣದ ಹಳೇ ತಹಶೀಲ್ ಕಚೇರಿಯಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಂತರ ಗ್ರೇಡ್ 2 ತಹಶೀಲ್ದಾರ್ ಜೈಶ್ರೀ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ಪ್ರಮುಖರು ಮಾತನಾಡಿ, ಬಿ.ಎಸ್.ಪಿ. ಮುಖಂಡ ಮತ್ತು ಕೆಲ ಕಾರ್ಯಕರ್ತರು ಏಕಾಏಕಿಯಾಗಿ ತಹಶೀಲ್ ಕಚೇರಿಗೆ ನುಗ್ಗಿ ಅಧಿಕಾರಿಗಳ ಸಭೆಯಲ್ಲಿದ್ದ ತಹಶೀಲ್ದಾರ್ ಡಾ.ಪ್ರದೀಪಕುಮಾರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ ಕಚೇರಿಯ ಪೀಠೋಪಕರಣ ಧ್ವಂಸ ಮಾಡಿರುವುದು ಖಂಡನೀಯವಾಗಿದೆ ಎಂದರು.

Contact Your\'s Advertisement; 9902492681

ಸರ್ಕಾರಿ ನೌಕರರ ಮೇಲೆ ಇತ್ತಿಚೆಗೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದು ಹೀಗೆ ಮುಂದುವರಿದರೆ. ನೌಕರರು ಭಯದ ಆತಂಕದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಹೀಗಾಗಿ ನೌಕರರಿಗೆ ಸೂಕ್ತ ರಕ್ಷಣೆ ನೀಡಿ ಹಲ್ಲೆಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣಿ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಮಠಪತಿ, ಮಲ್ಲಿಕಾರ್ಜುನ ಸಂಗಮಕರ್, ಸಂಗಮೇಶ ಜಂಬಗಿ, ಶರದಕುಮಾರ್ ನಾರಾಯಣಪೇಟ್, ಗೋರಕನಾಥ, ಈಶ್ವರ ತಡೋಳ, ಸುರೇಶ, ಮುರುಗೇಂದ್ರ ಸಜ್ಜನಶೆಟ್ಟಿ, ಶ್ರೀಕಾಂತ ಪಾಟೀಲ, ಸಾರಿಕಾ ಗಂಗಾ, ಶ್ರೀಕಾಂತ ಸೋಗಿ, ಭಕ್ತಿರಾಜ, ಅಲಿಮ್, ರಾಜೇಂದ್ರ ಇದ್ದರು.

ಹುಮನಾಬಾದ್: ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ತಾಲ್ಲೂಕು ಘಟಕದಿಂದ ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ಶನಿವಾರ ಗ್ರೇಡ್ 2 ತಹಶೀಲ್ದಾರ್ ಜೈಶ್ರೀ ಅವರಿಗೆ ಸಲ್ಲಿಸಲಾಯಿತು.

ನಂತರ ಪ್ರಮುಖರು ಮಾತನಾಡಿ, ಕರ್ತವ್ಯದಲ್ಲಿದ್ದ ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಹಲ್ಲೆ ಮಾಡಿದ್ದವರನ್ನು, ಗೂಂಡಾ ಕಾಯ್ದೆಯಡಿ ಬಂಧಿಸಿ ಕನಿಷ್ಠ 5 ವರ್ಷ ಗಡಿಪಾರು ಮಾಡಬೇಕು ಎಂದರು.

ಸಂಘದ ತಾಲ್ಲೂಕು ಅಧ್ಯಕ್ಷ ಧರ್ಮಣ್ಣ ಹಂಜಗಿ, ಗೌರವಾಧ್ಯಕ್ಷ ಹಣಮಂತಪ್ಪಾ ಬಿರಾದರ್, ಉಪಾಧ್ಯಕ್ಷ ಕೃಷ್ಣ ಡಿ., ಪ್ರಧಾನ ಕಾರ್ಯದರ್ಶಿ ಮಾಹಾಂತೇಶ, ಮಹೇಶ ಇದ್ದರು.

ಹುಮನಾಬಾದ್: ಕರ್ತವ್ಯದಲ್ಲಿದ್ದ ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅವರ ಮೇಲೆ ಬಿಎಸ್.ಪಿ ಮುಖಂಡ ಅಂಕುಶ್ ಗೋಖಲೆ ಹಾಗೂ ಇತರರು ಸೇರಿ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಜಂಗಮ ಅಭಿವೃದ್ಧಿ ಸಂಸ್ಥೆಯ ತಾಲ್ಲೂಕು ಘಟಕದಿಂದ ಶನಿವಾರ ಪಟ್ಟಣದ ಥೇರ ಮೈದಾನದಿಂದ ತಹಶೀಲ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್ 2 ತಹಶೀಲ್ದಾರ್ ಜೈಶ್ರೀ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಂತರ ಪ್ರಮುಖರು ಮಾತನಾಡಿ, ಬಿ.ಎಸ್.ಪಿ. ಮುಖಂಡ ಹಾಗೂ ಇತರರು ಸೇರಿ ತಹಶೀಲ್ದಾರ್ ಡಾ.ಪ್ರದೀಪಕುಮಾರ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಾಲಿನಿಂದ ಗುಪ್ತಾಂಗಕ್ಕೆ ಒದ್ದಿರುವುದಲ್ಲದೇ ಜೀವ ಬೇದರಿಕೆ ಹಾಕಿರುವುದು ಖಂಡನೀಯವಾಗಿದೆ. ಹಲ್ಲೆಕೋರರನ್ನು ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸಯ್ಯಾ ಸ್ವಾಮಿ, ಶಿವಲಿಂಗ ಸ್ವಾಮಿ, ಸಚಿನ್ ಮಠಪತಿ, ರವಿ ಸ್ವಾಮಿ ನಿರ್ಣಾ, ಸಿದ್ದು ಹಿರೇಮಠ, ಸಿದ್ದು ಚಕಪಳ್ಳಿ, ಸುನೀಲ ಪತ್ರಿ, ಸುಭಾಷ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here