ಸುರಪುರ:ಅಖಿಲ ಕರ್ನಾಟಕ ಕುಡ ಒಕ್ಕಲಿಗ ಸಮಾಜ ಸಂಘದಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶಿರಸಂಗಿ ಲಿಂಗರಾಜ ಅರಸರ ೧೬೧ನೇ ಜಯಂತಿ ಆಚರಿಸಲಾಯಿತು.ರುಕ್ಮಾಪುರ ಹಿರೇಮಠದ ಗುರು ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಪಾಟೀಲ್ ಗದಗ ಮಾತನಾಡಿ,ನಮ್ಮ ಸಮಾಜದ ಮಾಣಿಕ್ಯದಂತಿದ್ದವರು ಶಿರಸಂಗಿ ಲಿಂಗರಾಜ ಅರಸರು,ಅವರನ್ನು ನಾವೆಲ್ಲರು ನಿತ್ಯವು ಸ್ಮರಿಸಬೇಕು.ಅವರು ನೀಡಿದ ಕೊಡುಗೆಯಿಂದ ಇಂದು ನಾಡಿನ ಹೆಸರಾಂತ ಶಿಕ್ಷಣ ಸಂಘಗಳು ಉದಯಿಸಲು ಕಾರಣವಾಗಿದೆ, ನಾಡಿನ ಲಿಂಗಾಯತ ಸಮುದಾದ ಅಭಿವೃಧ್ಧಿಗೂ ಲಿಂಗರಾಜ ಅರಸರ ಕೊಡುಗೆ ಇದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.ಅಲ್ಲದೆ ಇಂದು ನಾಡಿನ ಎಲ್ಲಾ ಕುಡ ಒಕ್ಕಲಿಗರು ಸಂಘಟಿತರಾಗಬೇಕಿದೆ ಅಂದಾಗ ಮಾತ್ರ ನಮ್ಮ ಸಮುದಾಯದ ಅಭಿವೃಧ್ಧಿ ಸಾಧ್ಯವಿದೆ,ಆ ನಿಟ್ಟಿನಲ್ಲಿ ತಾವೆಲ್ಲರು ಸಂಘಟಿತರಾಗಿ ಏಳಿಗೆಗೆ ಹೆಗಲು ನೀಡುವಂತೆ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶಿರಸಂಗಿ ಲಿಂಗರಾಜ ಅರಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯಕ ಕುಡ ವಕ್ಕಲಿಗ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ಹೆಬ್ಬಾಳ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ,ಮಲ್ಲಾ ಗ್ರಾ.ಪಂ ಸದಸ್ಯ ರಮೇಶಗೌಡ,ಶ್ರೀಗುರು ಸೇವಾ ಸಂಸ್ಥೆ ಅಧ್ಯಕ್ಷ ಮಲ್ಲು ಬಾದ್ಯಾಪುರ ವೇದಿಕೆ ಮೇಲಿದ್ದರು.ಆದಿಶೇಷ ಪಾಟೀಲ್ ಹೆಮನೂರ,ರವಿಗೌಡ ಪಾಟೀಲ್ ಹೆಮನೂರ,ಚಂದ್ರು ಹೆಮ್ಮಡಗಿ,ಸಂತೋಷ ಕನ್ನೆಳ್ಳಿ ಸೇರಿದಂತೆ ಅನೇಕರಿದ್ದರು.