ಕಲಬುರಗಿ: ನಗರದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಛೇರಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡಾ ಎಸ್.ಎಚ್ ಅವರು ಅವರ ನೇತೃತ್ವದಲ್ಲಿ ಭುದವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಭೆ ನಡೆಸಿ ಸಭೆಯಲ್ಲಿ ನೂತನ ಜೇವರಗಿ ತಾಲೂಕ ಅಧ್ಯಕ್ಷರಾಗಿ ಪ್ರಕಾಶ ದೋಡಮನಿ, ಅಫಜಲಪುರ ತಾಲೂಕ ಅಧ್ಯಕ್ಷರಾಗಿ ದಯಾನಂದ ಪಾಟೀಲ ಇವರನ್ನು ಆಯ್ಕೆ ಮಾಡಲಾಯಿತು.
ನಂತರ ಲಿಂಗೇಗೌಡಾ ಎಸ್.ಎಚ್ ಮಾತನಾಡುತ್ತಾ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮತ್ತು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯುವಕರು ಮುಂದಾಗಬೇಕು ಸ್ವಚ್ಛ ಪ್ರಮಾಣಿಕ ಜನಪರ ರಾಜಕಾರಣಕ್ಕಾಗಿ ವಿದ್ಯಾವಂತರು, ಬುದ್ದಿ ಜೀವಿಗಳು ಮುಂದಾಗಿ ಕರ್ನಾಟಕ ರಾಜ್ಯವನ್ನು ಲಂಚ ಮುಕ್ತ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸೈಬಣ್ಣಾ ಜಮಾದಾರ, ಜ್ಞಾನ ಸಿಂಧು ಸ್ವಾಮಿ, ಶಿವಕುಮಾರ ಕೊಡ್ಲಿ, ವಿಜಯ ಜಾಧವ, ಅಶೋಕ ಸಿಂಗೆ, ಚನ್ನವಿರ ತಂಗಾ, ಸಚಿನ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.