ಎಲ್ಲವನ್ನೂ ಎದುರಿಸಿ ಗೆದ್ದ ಪ್ರೇಮಿಗಳು

0
29

ಅವರಿಬ್ಬರೂ ಮೂಗರು, ಜೊತೆಗೆ ಕಿವುಡುತನ. ಶಾಲೆಯ ಅಂಗಳದಲ್ಲಿ ಸ್ನೇಹಿತರಾಗಿದ್ದ ಅವರು, ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತಿಯೇ ಅವರಿಬ್ಬರ ಮಧ್ಯದಲ್ಲಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಅವರ ಮಧ್ಯೆ ಆರಂಭದಲ್ಲಿ ಇದ್ದದ್ದು ಕೇವಲ ಕೈಸನ್ನೆ, ಕಣ್ಸನ್ನೆ ಮಾತ್ರ.

ನಂತರ ಅವರಿಗೆ ವರದಾನವಾಗಿದ್ದು ವಾಟ್ಸಾಪ್. ಇದೀಗ ಅದೇ ವಾಟ್ಸಾಪ್ ಮೂಲಕ ಅವರ ಪ್ರೀತಿ ಮದುವೆವರೆಗೂ ತಲುಪಿದೆ. ಹರಪನಹಳ್ಳಿ ತಾಲ್ಲೂಕಿನ ಕಡಬಗೇರಿ ಗ್ರಾಮದ ಅಕ್ಷತಾ ಬಿ . ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಮೇಡೇರಿ ಗ್ರಾಮದ ಕೆ . ಸಂಜು ವಾಲ್ಮೀಕಿ ದಾಂಪತ್ಯಕ್ಕೆ ಕಾಲಿರಿಸಿದ ಈ ವಿಶೇಷ ಜೋಡಿ .

Contact Your\'s Advertisement; 9902492681

ದಾವಣಗೆರೆ ಸಂಜು ಕೆ. ವಾಲ್ಮೀಕಿ ಹಾಗೂ ಅಕ್ಷತಾ ಇಬ್ಬರು ನಗರದ ಡಿಸಿಎಂ ಟೌನ್‌ಶಿಪ್ ಬಡಾವಣೆಯಲ್ಲಿರುವ ಮೌನೇಶ್ವರ ಕಿವುಡ ಮತ್ತು ಮೂಗರ ವಸತಿಯುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಅದೇ ಶಾಲೆಯಲ್ಲಿ 10 ನೇ ತರಗತಿಯವರೆಗೂ ವ್ಯಾಸಂಗ ಮಾಡಿದ್ದಾರೆ. ಆರಂಭದಲ್ಲಿ ಸಂಜು ಹಾಗೂ ಅಕ್ಷತಾ ನಡುವಿನ ಸ್ನೇಹ, ಪ್ರೀತಿಗೆ ತಿರುಗಿದೆ . 10 ನೇ ತರಗತಿ ವ್ಯಾಸಂಗದ ನಂತರ ಇಬ್ಬರೂ ದೂರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ನಂತರ ಸಂಜು ಕೆ . ವಾಲ್ಮೀಕಿ ಬೆಂಗಳೂರು ನಗರದಲ್ಲಿ ಐಟಿಐ ವ್ಯಾಸಂಗ ಮಾಡಿ, ಖಾಸಗಿ ಕಂಪೆನಿ ಒಂದರಲ್ಲಿ ಉದ್ಯೋಗ ಸೇರಿದ್ದಾನೆ. ಇವರಿಬ್ಬರ ನಡುವಿನ ಪ್ರೀತಿಗೆ ಮೊಬೈಲ್ ವಾಟ್ಸಪ್ ಆಪ್ ವರದಾನವಾಗಿದೆ ಪರಸ್ಪರರು ತಮ್ಮ ಪ್ರೀತಿಯ ಭಾವನೆ, ಪ್ರೇಮದ ಕನಸು, ಕನವರಿಕೆಗಳನ್ನು ವಾಟ್ಸಪ್ ಸಂದೇಶದ ಮೂಲಕವೇ ವಿನಿಮಯ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೇಮಸೌಧ ಕಟ್ಟಿದ್ದಾರೆ.

ಸಂಜು ತನ್ನ ತಂದೆ- ತಾಯಿಗೆ ತಾನು ಪ್ರೀತಿಸುತ್ತಿರುವ ಅಕ್ಷತಾಳನ್ನು ಮದುವೆಯಾಗುವುದಾಗಿ ಸನ್ನೆ ಹಾಗೂ ಬರವಣಿಗೆ ಮೂಲಕ ವ್ಯಕ್ತಪಡಿಸಿದ್ದಾನೆ . ಇದಕ್ಕೆ ಸಂಜು ವಾಲ್ಮೀಕಿ ಪೋಷಕರು, ಸಂತೋಷದಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಯಾವಾಗ ತನ್ನ ಹಾಗೂ ಅಕ್ಷತಾಳ ಪ್ರೀತಿಗೆ ಪೋಷಕರು ಒಪ್ಪಿಗೆಯ ಮುದ್ರೆ ಒತ್ತಿದರೋ, ಅಲ್ಲಿಗೆ ಸಂಜು ತನ್ನ ಪೋಷಕರ ನಿರ್ಧಾರವನ್ನು ಅಕ್ಷತಾಳಿಗೂ ಮುಟ್ಟಿಸಿದ್ದಾನೆ. ಕೊನೆಗೆ ಇಬ್ಬರೂ, ದಾವಣಗೆರೆ ನಗರದ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ತೆರಳಿ, ನೋಂದಣಿ ಮಾಡಿಸುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಸಂಜು ಹಾಗೂ ಅಕ್ಷತಾಳ ಮದುವೆಯ ಸುದ್ದಿ ದಾಂಪತ್ಯಕ್ಕೆ ಕಾಲಿಟ್ಟ ಅಕ್ಷತಾ-ಸಂಜು ಹರಡುತ್ತಿದ್ದಂತಿಯೇ ಕುಪಿತಗೊಂಡ ಅಕ್ಷತಾ ಪೋಷಕರು, ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ . ನವ ದಂಪತಿಯನ್ನು ಠಾಣೆಗೆ ಕರೆತಂದ ಪೊಲೀಸರು ಇಬ್ಬರನ್ನು ಬರವಣಿಗೆಯ ಮೂಲಕವೇ ವಿಚಾರಣೆಗೆ ಒಳಪಡಿಸಿದರು . ನವಜೋಡಿ , ಪೋಷಕರ ಆರೋಪವನ್ನು ಅಲ್ಲಗಳೆಯುವ ಮೂಲಕ , ತಮ್ಮ ದಶಕದ ಪ್ರೀತಿ , ಪ್ರೇಮವನ್ನು ಎಳೆಎಳೆಯಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ .

ಇದರಿಂದ ಪೊಲೀಸರು , ದೂರುಕೊಟ್ಟ ಪೋಷಕರು ಹಾಗೂ ಸೊಸೆಯಾಗಿ ಸ್ವೀಕರಿಸಿದ ಸಂಜು ಪೋಷಕರನ್ನು ಕೂಡಿಸಿಕೊಂಡು ಬುದ್ಧಿ ಮಾತು ಹೇಳಿದ್ದಾರೆ. ನವದಂಪತಿಗೆ ಯಾರಿಂದಲೂ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದ ಹೇಳಿದ್ದಾರೆ .

ಹರಪನಹಳ್ಳಿ ಪಟ್ಟಣದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿರುವ ಸಂಜು ತಂದೆ , ಅಕ್ಷತಾ ನಮ್ಮ ಮನೆಯ ಸೊಸೆ ಅಲ್ಲ . ಆಕೆ , ನಮ್ಮ ಮನೆಯ ನಂದಾದೀಪ . ಆಕೆಯನ್ನು ಸೊಸೆಯ ರೂಪದಲ್ಲಿ ಮಗಳಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ . ಅದನ್ನು ಪರಿಪಾಲಿಸುತ್ತೇವೆ ಎಂದು ಠಾಣೆಯಲ್ಲಿ ವಾಗ್ದಾನ ಮಾಡುವ ಮೂಲಕ ಸೊಸೆ ಅಕ್ಷತಾಳನ್ನು ಮನೆಗೆ ಕರೆದೊಯ್ದಿದ್ದಾರೆ .ಅಲ್ಲಿಗೆ ವಿಶೇಷ ಚೇತನರ ಪ್ರೀತಿ ಫಲಿಸಿದೆ. ಇದೀಗ ಸಂಜು ಹಾಗೂ ಅಕ್ಷತಾ ದಂಪತಿ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here