ಹೋರಾಟ ಚಿತ್ರಕ್ಕೆ ಪೂಜಾ ಕೋಪ್ರೆಕರ್ ನಾಯಕಿ

0
15

ಕಲಬುರಗಿ: ಬೆಂಗಳೂರಿನ ಜೆ.ಮಂಜುನಾಥ ನಿರ್ಮಾಣದ, ಭಗವಾನ್ ದಾಸ್ ಅವರ ನಿರ್ದೇಶನದ ಬಹು ನಿರೀಕ್ಷಿತ ‘ಹೋರಾಟ’ ಚಲನಚಿತ್ರಕ್ಕೆ ಕುಂದಾನಗರಿ ಬೆಳಗಾವಿಯ ಪ್ರತಿಭಾನ್ವಿತೆ ಪೂಜಾ ಕೋಪ್ರೆಕರ್ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇವರೊಂದಿಗೆ ನಾಯಕ ನಟರಾಗಿ ಕಲ್ಯಾಣ ಕರ್ನಾಟಕದ ಕೇಂದ್ರ ಜಿಲ್ಲೆ ಕಲಬುರಗಿಯ ಸಿದ್ದು ಎನ್.ಆರ್ ಅವರು ನಟಿಸಲಿದ್ದಾರೆ.

Contact Your\'s Advertisement; 9902492681

ಪ್ರತಿಭಾನ್ವಿತ ನಟಿ ಪೂಜಾ ಕೋಪ್ರೆಕರ್ ಅವರು ಈ ಹಿಂದೆ ರಾಗಿಣಿ ಅವರ ಸಾರಿ ಸಿನೆಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ಸಂಹಾರಕ ಮತ್ತು ಅಪಾರ್ಥ ಚಲನಚಿತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರ ಮನಗೆದ್ದಿದ್ದಾರೆ.

ಹೀಗಾಗಿ ನಟಿ ಪೂಜಾ ಕೋಪ್ರೆಕರ್ ಅವರನ್ನು ಹೋರಾಟ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಚಿತ್ರದ ನಾಯಕ ನಟ ಸಿದ್ದು ಎನ್.ಆರ್. ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here