ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶ ನೀಡಿ-ಶಿವರಾಜ ಕಲಕೇರಿ

0
9

ಸುರಪುರ: ತಾಲೂಕಿನ ತಿಂಥಣಿಯಲ್ಲಿ ನಡೆಯುವ ಜಗದ್ಗುರು ಮೌನೇಶ್ವರ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶ ನೀಡುವಂತೆ ಶರಣ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವರಾಜ ಕಲಕೇರಿ ಮನವಿ ಮಾಡಿದರು.

ಶರಣ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಅನೇಕ ಜನ ವ್ಯಾಪಾರಸ್ಥರು ನಗರದ ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ವೇಳೆ ಭಾಗವಹಿಸಿ ಮಾತನಾಡಿ,ಈಗಾಗಲೇ ಮಾನ್ಯ ತಹಸೀಲ್ದಾರರು ಜಾತ್ರೆ ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ.

Contact Your\'s Advertisement; 9902492681

ಈಗಾಗಲೇ ಕಳೆದ ಎರಡು ವರ್ಷಗಳಿಂದ ತಾಲೂಕಿನ ವ್ಯಾಪಾರಸ್ಥರು ತೀವ್ರ ತೊಂದರೆಗೆ ಒಳಗಾಗಿದ್ದು,ಜಾತ್ರೆ,ಸಂತೆಯಂತಹ ಸಂದರ್ಭದಲ್ಲಿಯೇ ಮಿಠಾಯಿ,ಬಳೆ,ಮಕ್ಕಳ ಆಟಿಕೆಯಂತಹ ಸಾಮಾನುಗಳ ಮಾರಾಟದಿಂದಲೇ ಜೀವನ ನಡೆಸುವ ಸಣ್ಣ ಸಣ್ಣ ವ್ಯಾಪಾರಸ್ಥರು ಜೀವನ ನಡೆಸುವುದೇ ದುಸ್ತರವಾಗಿದೆ.

ಈ ಎಲ್ಲಾ ವ್ಯಾಪಾರಸ್ಥರ ಬದುಕಿನ ಆಸರೆ ಎಂದರೆ ಜಾತ್ರೆಗಳು.ಆದ್ದರಿಂದ ಈಗ ಮೌನೇಶ್ವರ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶ ಮಾಡಿಕೊಟ್ಟರೆ ಅವರ ಹೊಟ್ಟೆಗೆ ಅನ್ನ,ಇಲ್ಲವಾದಲ್ಲಿ ಜೀವನ ತುಂಬಾ ತೊಂದರೆಗೆ ಸಿಲುಕಲಿದೆ.ಆದ್ದರಿಂದ ಸರಳವಾಗಿ ಜಾತ್ರೆ ಆಚರಿಸುವ ಸಂದರ್ಭದಲ್ಲಿ ತಮ್ಮ ಜೀವನೊಪಾಯಕ್ಕಾಗಿ ಸಣ್ಣ ಸಣ್ಣ ಅಂಗಡಿಗಳು ಹಾಕುವ ಅನಿವಾರ್ಯತೆಯಲ್ಲಿದ್ದಾರೆ.ಆದ್ದರಿಂದ ಈ ಎಲ್ಲಾ ವ್ಯಾಪಾರಸ್ಥರ ಬದುಕಿಗಾಗಿ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಶರಣ ಸೇವಾ ಸಂಸ್ಥೆಯ ಮೂಲಕ ಎಲ್ಲಾ ವ್ಯಾಪಾರಸ್ಥರು ತಮ್ಮಲ್ಲಿ ವಿನಂತಿಸುವುದಾಗಿ ತಿಳಿಸಿದರು.

ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ವ್ಯಾಪರಸ್ಥರಾದ ಗುರುನಾಥ ಸತ್ಯಂಪೇಟೆ,ಶರಣಪ್ಪ ಮಜ್ಜಿಗಿ,ದೇವಿಂದ್ರಪ್ಪ ಮಿಠಾಯಿ,ಶ್ರೀಮಂತ ಮಿಠಾಯಿ,ಆಕಾಶ ಕಟ್ಟಿಮನಿ,ವಾಸುದೇವ ನಾಯಕ,ವೈಜನಾಥ ಹೊಸ್ಮನಿ, ಸೈಯ್ಯಪ್ಪ ಮಿಠಾಯಿ,ನೀಲಪ್ಪ ಮಿಠಾಯಿ,ಶರಣಪ್ಪ ಮಿಠಾಯಿ,ಭೀಮಣ್ಣ ಸ್ಟೇಷನರಿ,ಅರುಣ ಸ್ಟೇಷನರಿ,ಮಲ್ಲು ಬಳಿಗಾರ,ಮೌನುದ್ದೀನ್ ಬಳಿಗಾರ,ಪ್ರಭು ಬಳಿಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here