ನವದೆಹಲಿ: ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಟೊಳ್ಳು ಘೋಷಣೆ ಎಂಬುದು ಸಾಬೀತಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಬಿಜೆಪಿ ಸರಕಾರವನ್ನು ಟೀಕಿಸಿದ್ದಾರೆ.
ಉಡುಪಿಯ ಕುಂದಾಪುರದ ಕಾಲೇಜೊಂದಕ್ಕೆ ಹಿಜಾಬ್ ಧರಿಸಿದ ಮುಸ್ಲಿಂ ಯುವತಿಯರಿಗೆ ತರಗತಿ ನಿರಾಕರಿಸುತ್ತಿರುವ ವಿಡಿಯೋ ಶೇರ್ ಮಾಡಿರುವ ಅವರು, ಉಡುಪಿನ ಕಾರಣಕ್ಕೆ ಇಸ್ಲಾಂ ಯುವತಿಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲಾಗುತ್ತಿದೆ ಎಂದು ಉಡುಪಿ ಹಿಜಾಬ್ ಪ್ರಕರಣಕ್ಕೆ ತನ್ನ ಪ್ರತಿಕ್ರಿಸಿದ್ದಾರೆ.