ಶಹಾಬಾದ: ತಾಲೂಕಿನ ದೇವನತೆಗನೂರ ಗ್ರಾಮದ ಶ್ರೀ ಶಿವಯೋಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ವಾದ್ಯಮೇಳ ಮತ್ತು ಸಾವಿರಾರು ಭಕ್ತಾಧಿಗಳ ಮಧ್ಯೆ ಅದ್ಧೂರಿಯಾಗಿ ಪಲ್ಲಕ್ಕಿ ಉತ್ಸವ ಜರುಗಿತು.
ಶ್ರೀ ಶಿವಯೋಗೇಶ್ವರ ಮೂರ್ತಿಗೆ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ಮಂದಿರದಿಂದ ಗ್ರಾಮದ ಹೊರವಲಯದಲ್ಲಿರುವ ಸುಮಾರು ನಾಲ್ಕು ಕಿಮೀ ದೂರದಲ್ಲಿರುವ ತೆಗ್ಗಿನ ಗುಂಡ ಶಿವಯೋಗೇಶ್ವರ ಮಂದಿರಕ್ಕೆ ಹೋಗಿ ಗಂಗಾಸ್ನಾನ, ಪೂಜೆ ಸಲ್ಲಿಸಿ ನಂತರ ಮಂದಿರಕ್ಕೆ ತರಲಾಯಿತು.ಪಲ್ಲಕ್ಕಿ ಉತ್ಸವ ನೋಡಲು ಸುತ್ತ ಮುತ್ತಲಿನ ಹಾಗೂ ಹೊರ ರಾಜ್ಯದ ಸೇರಿದಂತೆ ಅಪಾರ ಜನಸ್ತೋಮ ನೆರೆದಿತ್ತು.
ಶ್ರೀ ಶಿವಯೋಗಿಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧಕ್ಷರಾದ ಶಂಕರಬಾಬು ಕಣಕಿ, ಶಿವಶರಣಪ್ಪ ಕಣಕಿ, ವಿಶ್ವನಾಥ ಗೌಡ ಧರ್ಮಾನಂದ, ಸಿದ್ದಲಿಂಗಶೆಟ್ಟಿ ಶಿರವಾಳ,ವಿಜಯಕುಮಾರ ಹುಡಗಿ, ಜಗನ್ನಾಥ ಸರಡಗಿ,ದತ್ತು ದೇವಣಿ, ಸೋಮಶೇಖರ್ ಮಕಾಶಿ, ಸರವೇಶ್ ಪಾಟೀಲ, ಶರಣಪ್ಪ ಮಲಕೂಡ, ಕಾಶಿರಾಯ ಪೂಜಾರಿ, ಕಾಂತು ಪಾಟೀಲ, ಕಾಂತು ಮಕಾಶಿ, ಶಂಕರಗುರು ಮಜ್ಜಗಿ, ಶಿವಕುಮಾರ್ ಪಾಟೀಲ, ಮಹಾದೇವ ಬಡಿಗೇರ್, ಶಿವಜಾತ ಮಕಾಶಿ, ಶಿವಕುಮಾರ್ ಮಕಾಶಿ, ಶಿವಾನಂದ ಮಕಾಶಿ, ಶಿವು ಮಲಕೂಡ, ಅರವೀಂದ ಪಾಟೀಲ, ನಿಂಗಣ್ಣ ಪಾಟೀಲ, ಚಂದು ಸಾಹುಕಾರ್ ಕಣಕಿ, ಮಂಜು ಪಾಟೀಲ, ಶಿವು ಬಬಲಾದಿ, ಮಹೇಶ್ ದೇವಣಿ ಸೇರಿದಂತೆ ಅನೇಕರು ಇದ್ದರು.