ಕಲಬುರಗಿ: ಪ್ರಸಕ್ತ 2021-22ನೇ ಸಾಲಿಗೆ ಹೊಸದಾಗಿ ಮತ್ತು ನವೀಕರಣಕ್ಕೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ಈಗಾಗಲೇ ಎನ್.ಎಸ್.ಪಿ. ಪೋರ್ಟ್ಲ್ನಲ್ಲಿ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳು ಕಡ್ಡಾಯವಾಗಿ ಎಸ್.ಎಸ್.ಪಿ. https://ssp.postmatric.karnataka.gov.in ಪೆÇೀರ್ಟಲ್ದಲ್ಲಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2022ರ ಏಪ್ರಿಲ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಲಬುರಗಿ ಜಿಲ್ಲಾ ಅಧಿಕಾರಿಗಳಾದ ಮಹಿಮೂದ್ ಅವರು ತಿಳಿಸಿದ್ದಾರೆ.
ಎನ್.ಎಸ್.ಪಿ. ಪೋರ್ಟಲ್ನಲ್ಲಿ ಸಲ್ಲಿಕೆಯಾದ ಗುರಿಗೆ ತಕ್ಕಂತೆ ಎಸ್.ಎಸ್.ಪಿ ಪೋರ್ಟಲ್ನಲ್ಲಿಯು ಅರ್ಜಿಗಳು ಸಲ್ಲಿಕೆಯಾಗುವಂತೆ ಜಿಲ್ಲೆಯ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಅಗತ್ಯಕ್ರಮ ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 24×7 ಇಲಾಖಾ ಸಹಾಯವಾಣಿ ಸಂಖ್ಯೆ 8277799990 ಗೆ ಸಂಪರ್ಕಿಸಲು ಕೋರಲಾಗಿದೆ.