ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷರಾಗಿ ರವಿ ಬಿರಾದಾರ ಆಯ್ಕೆ

0
331

*ಕಲಬುರಗಿ ಜಿಲ್ಲಾ ಬಸವ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷರಾದ ರವಿ ಬಿರಾದಾರ ಕಮಲಾಪುರ ಆಯ್ಕೆ
ಶುದ್ಧ ತದಿಗೆಯಂದು,  ಲಿಂಗಾಯತ ಧರ್ಮದ ಸ್ಥಾಪಕರಾದ ಬಸವಣ್ಣನವರ ಜನ್ಮದಿನವಾದ ಬಸವ ಜಯಂತಿಯನ್ನು ಕಲಬುರಗಿಯಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಬಸವ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರವಿ ಬಿರಾದಾರ ಕಮಲಾಪುರ ಹೇಳಿದರು.

ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ.ಕರ್ನಾಟಕದಾದ್ಯಂತ ಇದನ್ನು ಬಹಳ ವೈಭವ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ.

Contact Your\'s Advertisement; 9902492681

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ,ಉರಿಲಿಂಗಪೆದ್ದಿ, ಮಾದಾರ,ಚೆನ್ನಯ್ಯ,ಸಮಗಾರ ಹರಳಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ.

ಹೀಗಾಗಿ ಈ ವರ್ಷದ ಜಯಂತ್ಯುತ್ಸವವನ್ನೂ ಬಹಳ ವಿಶಿಷ್ಟ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಮಾಡಲಾಗುವದೇಂದು ರವಿ ಬಿರಾದಾರ ಕಮಲಾಪುರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪ್ರೊ.ಯಶವಂತರಾಯ ಅಷ್ಠಗಿ ಹಾಗೂ ಎಪಿಎಂಸಿ ಉಪಾಧ್ಯಕ್ಷರಾದ ರಾಜಕುಮಾರ ಕೋಟೆ ಆಧ್ಯಕ್ಷರಾಗಿ ಆಯ್ಕೆಯಾದ ರವಿ ಬಿರಾದಾರ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಂಗಮೇಶ ನಾಗನಳ್ಳಿ ಅರುಣಕುಮಾರ ಪಾಟೀಲ , ಶರಣು ಭುಸನೂರ, ಮಚೆಂದ್ರನಾಥ ಮುಲಗೆ, ಮಂಜುರೆಡ್ಡಿ ,ಸಿದ್ದುಗೌಡ ಅಫಝಲಪೂರ ಶಾಂತರೆಡ್ಡಿ ಪೇಠಶಿರೂರ ಸೇರಿದಂತೆ ವೀರಶೈವ -ಲಿಂಗಾಯತ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here