ಪುರಾಣ ಪ್ರವಚನಗಳು ಮನಸ್ಸಿಗೆ ಶಾಂತಿ ನೀಡುತ್ತವೆ: ನಿತೀನ ಗುತ್ತೇದಾರ

0
75

ಅಫಜಲಪುರ: ಪುರಾಣ ಪ್ರವಚನಗಳಲ್ಲಿ ಶರಣರ, ಮಹಾತ್ಮರ, ಹಾಗೂ ಸಾಧನೆ ಮಾಡಿದ ಸಾಧಕರ ಜೀವನ ಚರಿತ್ರೆ ಒಳಗೊಂಡಿರುತ್ತದೆ ಹೀಗಾಗಿ ಪುರಾಣ ಪ್ರವಚನ ಕೇಳುವದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ  ಎಂದು ಮಾಜಿ ಜಿಪಂ ಅಧ್ಯಕ್ಷ ನಿತೀನ ಗುತ್ತೇದಾರ ಹೇಳಿದರು.

ತಾಲೂಕಿನ ಸುಕ್ಷೇತ್ರ ಹಿಂಚಗೇರಾ ಗ್ರಾಮದ ಶ್ರೀ ಶಿವಯೋಗೇಶ್ವರ  36ನೇ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಹೃದಯ ಭಾಗದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಶ್ರೀ ಜಗದ್ಗುರು ಶಿರಹಟ್ಟಿಯ ಫಕೀರೇಶ್ವರ ಮಹಾ ಪುರಾಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಹಿಂಚಗೇರಿ ಶ್ರೀ ಶಿವಯೋಗೇಶ್ವರ ಬ್ರಹನ್ಮಠದ  ಶ್ರೀ ಶಂಭುಲಿಂಗ ಶಿವಾಚಾರ್ಯರು ಸಮಾರಂಭದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಅವರು  ದ್ವೇಷ ಬಿಡು ಪ್ರೀತಿ ಮಾಡು ಎಂಬ ಸಂದೇಶ ಸಾರಿ, ನೂರಾರು ಪವಾಡ ಮಾಡಿ ಹಿಂದೂ-ಮುಸ್ಲಿಮರಲ್ಲಿ ಸಹೋದರತೆ, ಸಹಬಾಳ್ವೆಯ ಬೀಜ ಬಿತ್ತಿದ ಶಿರಹಟ್ಟಿ ಫಕೀರೇಶ್ವರಾಗಿದ್ದಾರೆ ಅಂತಹ ಮಹಾತ್ಮರ ಪುರಾಣ ಇಂದು ಶ್ರೀ ಕ್ಷೇತ್ರದಲ್ಲಿ ಪ್ರಾರಂಭವಾಗಿದೆ ಈ ಮಹಾನ ಪುರಾಣ ಕೇಳಿದರೆ ಬದುಕು ಸುಂದರವಾಗಲಿದೆ ಎಂದು ಹೇಳಿದರು.

ವೇ.ದ.ಮೂರ್ತಿ ಪಂಡಿತ ರತ್ನ ಬಂಡಯ್ಯ ಶಾಸ್ತ್ರೀಗಳು ಸಂಸ್ಥಾನ ಹಿರೇಮಠ ಸುಂಟನೂರವರು ಶ್ರೀ ಜಗದ್ಗುರು ಶಿರಹಟ್ಟಿ ಫಕೀರೇಶ್ವರ ಮಹಾ ಪುರಾಣವನ್ನು ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದದಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿದ್ಯ ವಹಿಸಿದರು. ಮುಖಂಡರಾದ ಗುರು ಸಾಲಿಮಠ, ಭಾಗಪ್ಪಗೌಡ ಬಿರಾದಾರ, ಶಿವರಾಯಗೌಡ ಮಾಲೀಪಾಟೀಲ,ಸುಭಾಷ ರೂಗಿ, ಈರಣ್ಣ ಸುತಾರ, ಸುನೀಲ ಶೆಟ್ಟಿ, ಧಾನು ಪತಾಟೆ, ರಾಚಯ್ಯ ಮಠ, ನಾನಗೌಡ ಪಾಟೀಲ, ಕಲ್ಯಾಣಿ ಸಿಂದಗೇರಿ, ಸಿದ್ದು ತೊನಶ್ಯಾಳ, ಭೀಮರಾಯ ತಳವಾರ, ನಂದಪ್ಪ ದಿಡ್ಡಿಮನಿ,  ಭಾಗೇಶ ಬೊರೆಗಾಂವ್,ಸಂತೋಷ ಕಾಮಶೆಟ್ಟಿ, ಶ್ರೀಮಂತ ಪತ್ತಾರ, ಮುಕ್ತಮ ಪಟೇಲ, ವಿಠಲ ಬನ್ನಟ್ಟಿ,ಈರತಯ್ಯ ಮಠ,ಈರಣ್ಣ ಕುಂಬಾರ, ಪರಮೇಶ್ವರ ಯರಗಲ್ಲ, ಸುರೇಶ ರೂಗಿ, ಕರೆಪ್ಪ ಜೇವರ್ಗಿ, ರಾಹುಲ್ ಸುತಾರ, ಪ್ರಕಾಶ ಜಮಾದಾರ,ರಮೇಶ ಹಂಚನಾಳ, ಶೇಖರ ಬನ್ನಟ್ಟಿ, ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here