ಮಳೆ-ಗಾಳಿಗೆ ಧರ್ಮಪುರ ಗ್ರಾಮದಲ್ಲಿ ಭಾರಿ ನಷ್ಟ ನೆರವಿಗೆ ಗ್ರಾಮಸ್ಥರ ಆಗ್ರಹ

0
37
  • ರಾಜು ವ್ಹಿ ಮುದ್ದಡಗಿ.

ಕಲಬುರ್ಗಿ: ಇಲ್ಲಿನ ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲೂಕಿನಿಂದ 13 ಕಿಲೋಮೀಟರ್ ದೂರದಲ್ಲಿರುವ ಧರ್ಮಪುರ ಗ್ರಾಮದಲ್ಲಿ ದಿನಾಂಕ 4 ರಂದು ರಾತ್ರಿ 7.30 ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಬಿರುಗಾಳಿಗೆ ಕೊಚ್ಚಿಹೋದ ಮನೆ ಮೇಲ್ಛಾವಣಿ: ಬಿರುಗಾಳಿ ಹಾಗೂ ಮಳೆಯ ರಭಸಕ್ಕೆ ಸುಮಾರು 20 ಮನೆಗಳು ಹಾಳಾಗಿದ್ದು ಇವುಗಳ ಮೇಲಿನ ಕುರುಗೋಡು ಸೇರಿದಂತೆ ಪತ್ರಾಸಗಳು ಹಾರಿಹೋಗಿದ್ದು ಮನೆಯಲ್ಲಿರುವ ಬೆಳೆಗಳಾದ ಜೋಳ, ತೊಗರಿ ಹಾಗೂ ದವಸಧಾನ್ಯಗಳು ಕೊಚ್ಚಿಕೊಂಡು ಹೋಗಿವೆ.

Contact Your\'s Advertisement; 9902492681

ಸುಮಾರು ಎರಡು ಲಕ್ಷ ರೂಪಾಯಿ ನಷ್ಟವಾಗಿದ್ದು, ಜೀವನೋಪಾಯಕ್ಕಾಗಿ ಸಂಗ್ರಹಿಸಿಟ್ಟಿದ್ದ ದವಸಧಾನ್ಯಗಳು ಹಾಳಾಗಿವೆ. ಅಲ್ಲದೆ ಮನೆಯಲ್ಲಿದ್ದ ವಸ್ತುಗಳು ಗಾಳಿಗೆ ಹಾರಿ ಹೋಗಿವೆ.

ಧರ್ಮಪುರ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ಪಂಗಡದ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಜನರ ಜೀವನ ಸ್ಥಿತಿ ದುಸ್ತರವಾಗಿದೆ. ಹಾಗೂ

ಕೂಡಲೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ತಾಲೂಕ ದಂಡಾಧಿಕಾರಿಗಳ ಸದರಿ ಧರ್ಮಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಗ್ರಾಮದ ಜನರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here