ಮಹಿಳೆಯರು ಆರ್ಥಿಕ ಸಬಲರಾಗಲಿ: ಶಾಸಕ ಡಾ.ಅಜಯಸಿಂಗ್

0
6

ಜೇವರ್ಗಿ: ಮಹಿಳೆಯರು ಶಿಕ್ಷಣಿಕ ಜೊತೆಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು. ಆಗ ಮಾತ್ರ ಮಹಿಳೆಯರ ಸವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ಪ್ರಗತಿ ಏಜ್ಯುಕೇಶನ್ ಆಂಡ್ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷೆ ಶೋಭಾ ಬಾಣಿ ಮಾತನಾಡಿ, ಸಮಾಜದಲ್ಲಿನ ಮಹಿಳೆಯರ ಬಗೆಗಿನ ಕೆಲವು ಅನಿಷ್ಠ ಪದ್ಧತಿ ಬದಲಾಗಬೇಕು.

Contact Your\'s Advertisement; 9902492681

ಮಹಿಳೆ ಬದಲಾದಾಗ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷೆ ಅಂಜನಾಬಾಯಿ ರಾಠೋಡ ಮುತ್ತಕೋಡ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಡಾ. ಕಿರಣ ಜಾರ್ಜ್, ಡಾ. ಆಮೀರಸಾಬ್ ಚಿತ್ತಾಪೂರ, , ಮೊಹ್ಮದ ಇಸ್ಮಾಯಿಲ್, ಶಾಂತಪ್ಪ ಕೂಡ್ಲಗಿ, ಬಾಲು ಆರ್. ಚವ್ಹಾಣ, ಅಮರನಾಥ ಪಿ. ಚವ್ಹಾಣ, ಲಕ್ಷ್ಮಣ ಖೇಮು ರಾಠೋಡ, ವಿಶ್ವೇಶ ಡಿ. ಚವ್ಹಾಣ, ಬಹಾದ್ದೂರ ರಾಠೋಡ, ತುಕಾರಾಮ ಚವ್ಹಾಣ, ಶಂಕರ ಕಟ್ಟಿಸಂಗಾವಿ, ರುಕುಮ ಪಟೇಲ್, ಇಶಾರಖಾನ, ರಾಜಶೇಖರ ಸಿರಿ, ತುಳಜಾರಾಮ ಟಿ. ರಾಠೋಡ, ಚಂದ್ರಶೇಖರ ಹರನಾಳ, ಜಾನು ರಾಠೋಡ, ಉಮಾಜಿ ರಾಠೋಡ ಹಾಗೂ ಟ್ರಸ್ಟ್ ಸದಸ್ಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here