ವಿವಿಧ ಮಹತ್ವದ ವ್ಯವಹಾರಗಳಿಗೆ ಎಲ್ & ಟಿ ಕನ್ ಸ್ಟ್ರಕ್ಷನ್ ನಿಂದ ಗುತ್ತಿಗೆ ಒಪ್ಪಂದ

0
22

ಬೆಂಗಳೂರು: ಲಾರ್ಸನ್ & ಟ್ಯೂಬ್ರೊ ಕಂಪನಿಯ ನಿರ್ಮಾಣ ವಿಭಾಗವು ತನ್ನ ವಿವಿಧ ವ್ಯವಹಾರಗಳಿಗೆ ಆರ್ಡರ್ ಗಳನ್ನು (ಆದೇಶ) ಪಡೆದುಕೊಂಡಿದೆ.

ಎಲ್ & ಟಿ ನಿರ್ಮಾಣ ವಿಭಾಗದ ನೀರು ಮತ್ತು ತ್ಯಾಜ್ಯ ಸಂಸ್ಕರಣಾ ವ್ಯವಹಾರವು ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಗುತ್ತಿಗೆ ಪಡೆದುಕೊಂಡಿದೆ. ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ 396 ಗ್ರಾಮೀಣ ವಾಸಸ್ಥಳಗಳಿಗೆ ರೇಣುಕಾಸಾಗರ ಜಲಾಶಯದಿಂದ (ನವಿಲುತೀರ್ಥ ಅಣೆಕಟ್ಟು) ಕುಡಿಯುವ ನೀರು ಪೂರೈಕೆ ಸೌಲಭ್ಯಗಳನ್ನು ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ ಮಾದರಿಯ ಅಭಿವೃದ್ಧಿ ಮತ್ತು ನಿರ್ಮಾಣ ಒಪ್ಪಂದ ಇದಾಗಿದೆ.

Contact Your\'s Advertisement; 9902492681

ಕುಡಿಯುವ ನೀರು ಪೂರೈಕೆ ಯೋಜನೆಯ ವಿನ್ಯಾಸ ಮತ್ತು ನಿರ್ಮಾಣ, ಕಚ್ಚಾ ನೀರು ಮೇಲೆತ್ತುವ ಕಾರ್ಯ, ಜಲ ಸಂಸ್ಕರಣಾ ಘಟಕ, ಶುದ್ಧ ನೀರಿನ ಜಲಾಶಯ ಮತ್ತು ಪಂಪ್ ಹೌಸ್ ನಿರ್ಮಾಣ, ಪ್ರಮುಖ ಜಲಾಶಯಗಳ ನಿರ್ಮಾಣ, ವಲಯವಾರು ಟ್ಯಾಂಕ್ಗಳ ನಿರ್ಮಾಣ, ಮಧ್ಯಂತರ ಸಂಪ್/ಪಂಪ್ ಹೌಸ್ ಮತ್ತು ನೀರೆತ್ತುವ ಕೇಂದ್ರಗಳ ನಿರ್ಮಾಣ, ಪೈಪ್ ಗಳ ಮೂಲಕ ನೀರು ಹರಿಸುವುದು, ಓವರ್ಹೆಡ್ ಟ್ಯಾಂಕ್ಗಳು ಮತ್ತು ಸಂಬಂಧಿತ ವಿದ್ಯುತ್-ಯಾಂತ್ರೀಕೃತ ಮತ್ತು ಸಾಧನ ಸಲಕರಣೆಗಳು ಮತ್ತು ಉಪಕರಣಗಳ ಅಳವಡಿಕೆ ಕೆಲಸಗಳು ಈ ಯೋಜನಾ ವ್ಯಾಪ್ತಿಗೆ ಒಳಪಡುತ್ತವೆ. ಈ ಯೋಜನೆಯು ಸೂಕ್ತವಾದ ಉಪಕರಣಗಳ ಮೂಲಕ ನೀರಿನ ಒಳಹರಿವು ಮತ್ತು ಹೊರಹರಿವಿನ ಪ್ರಮಾಣ ಮತ್ತು ಗುಣಮಟ್ಟ ಅಳೆಯುವುದನ್ನು ಒಳಗೊಂಡಿದೆ. ಈ ಯೋಜನೆಯು ಒಟ್ಟು 11.96 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಿದೆ.

ಎಲ್ & ಟಿ ಉದ್ಯಮವು ಈಗಾಗಲೇ ಗದಗ ನೀರು ಸರಬರಾಜು ಯೋಜನೆಯನ್ನು ಪೂರ್ಣಗೊಳಿಸಿದೆ. ಪ್ರಸ್ತುತ ಕರ್ನಾಟಕ ಸರ್ಕಾರದ ಕೊಪ್ಪಳ ನೀರು ಸರಬರಾಜು ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ.

ಎಲ್&ಟಿ ಜಿಯೋಸ್ಟ್ರಕ್ಚರ್: ಎಲ್&ಟಿ ಜಿಯೋಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ (ಎಲ್ ಟಿ ಜಿ ಎಸ್) ಟಾಟಾ ಕೆಮಿಕಲ್ಸ್ ಲಿಮಿಟೆಡ್ನಿಂದ ಕಾರ್ಯತಂತ್ರ ಆರ್ಡರ್ ಪಡೆದುಕೊಂಡಿದೆ. ಸಾಗರ ಪ್ರದೇಶದಲ್ಲಿ ಜೆಟ್ಟಿ-ಆಧಾರಿತ ಮೆರೈನ್ ಔಟ್ಫಾಲ್ ಸಿಸ್ಟಮ್ ಮತ್ತು ಎಚ್ ಟಿ ಪಂಪ್ಹೌಸ್ ನಿರ್ಮಾಣ, ಸಂಗ್ರಹಣೆ ಮತ್ತು ಸ್ಥಾಪನೆ, ಜೆಟ್ಟಿ ಮೌಂಟೆಡ್ ಪೈಪಿಂಗ್ ಸಿಸ್ಟಮ್ (ಅಂದಾಜು 3.5 ಕಿಮೀ) ಸೇರಿದಂತೆ ಅದರ ಸಂಬಂಧಿತ ಕೆಲಸಗಳ ನಿರ್ವಹಣೆ ಮತ್ತು ನಿಯುಕ್ತಿ ಆದೇಶ ಇದಾಗಿದೆ. ಅಲ್ಲದೆ, ಗುಜರಾತಿನ ಮಿಥಾಪುರ್ನಲ್ಲಿರುವ ಕಚ್ ಕೊಲ್ಲಿಯಲ್ಲಿ ಡಿಫ್ಯೂಸರ್ ವ್ಯವಸ್ಥೆ ಸ್ಥಾಪನೆಯೂ ಇದರಲ್ಲಿ ಸೇರಿದೆ.

ಎಲ್&ಟಿ ಜಿಯೋಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎಲ್&ಟಿಯ ಅಂಗಸಂಸ್ಥೆ. ಇದು ನೆಲದಾಳದ ಎಂಜಿನಿಯರಿಂಗ್ ವ್ಯವಹಾರದ ಮೇಲೆ ಗಮನ ಮತ್ತು ಕಾರ್ಯ ಕೇಂದ್ರೀಕರಿಸಿದೆ, ಸಾಗರ ಪ್ರದೇಶಗಳಲ್ಲಿ ಬೃಹತ್ ಪೈಲಿಂಗ್, ಡಯಾಫ್ರಾಮ್ ಗೋಡೆಗಳು ಮತ್ತು ಕಟ್-ಆಫ್ ಗೋಡೆಗಳಂತಹ ಆಳವಾದ ಅಡಿಪಾಯಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸುವ ಪರಿಣತಿ ಹೊಂದಿದೆ. ನೀರು ಮತ್ತು ಭೂಮಿಯನ್ನು ಉಳಿಸಿಕೊಳ್ಳುವ ಕಟ್ಟಡಗಳು ಮತ್ತು ಸೇತುವೆಗಳ ನಿರ್ಮಾಣದಲ್ಲೂ ಈ ಕಂಪನಿ ತೊಡಗಿಸಿಕೊಂಡಿದೆ.

ವಿದ್ಯುತ್ ಪ್ರಸರಣ ಮತ್ತು ವಿತರಣೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಎಲ್&ಟಿ, ಫಿಲಿಪ್ರೀನ್ಸ್ ನಲ್ಲಿ 500 ಕೆವಿ ಪ್ರಸರಣ ಮಾರ್ಗ ಯೋಜನೆಯ ಗುತ್ತಿಗೆ ಪಡೆದುಕೊಂಡಿದೆ. ಇದನ್ನು ಸಾಗರೋತ್ತರ ಪಾಲುದಾರರೊಂದಿಗೆ ಕಾರ್ಯಗತಗೊಳಿಸಲಾಗುವುದು. ಇದು ಫಿಲಿಪ್ಪೀನ್ಸ್ ನ ಲುಜಾನ್ ಪಶ್ಚಿಮ ಭಾಗಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಪ್ರಸರಣ ಮಾರ್ಗ ಯೋಜನೆ ಸಹಾಯವಾಗಲಿದೆ.

ಹಿನ್ನೆಲೆ: ಲಾರ್ಸೆನ್ & ಟ್ಯೂಬ್ರೊ ಇಂಜಿನಿಯರಿಂಗ್ ಖರೀದಿ ಮತ್ತು ನಿರ್ಮಾಣ ಯೋಜನೆಗಳ ಪ್ರಾಜೆಕ್ಟ್ಗಳು, ಹೈ-ಟೆಕ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಬಹುರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ವಿಶ್ವಾದ್ಯಂತ 50 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಲಿಷ್ಟವಾದ, ಗ್ರಾಹಕ-ಕೇಂದ್ರಿತ ವಿಧಾನ ಮತ್ತು ಉನ್ನತ ದರ್ಜೆಯ ಗುಣಮಟ್ಟಕ್ಕಾಗಿ ನಿರಂತರ ಅನ್ವೇಷಣೆಯ ಉದಾತ್ತ ಚಿಂತನೆಯು 8 ದಶಕಗಳ ಕಾಲದಿಂದ ಎಲ್&ಟಿಗೆ ತನ್ನ ಪ್ರಮುಖ ನಾಯಕತ್ವ ಸಾಧಿಸಲು ಮತ್ತು ಉಳಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here