ಆಳಂದ: ತಾಲೂಕಿನ ಗಡಿಗ್ರಾಮ ತಡೋಳಾ ಗ್ರಾಮದಲ್ಲಿ ವಿವಿಧ ಯೋಜನೆಗಳಲ್ಲಿ ಮಂಜೂರಿಯಾದ ೧೧ ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು.
ಶನಿವಾರ ಆಳಂದ ತಾಲೂಕಿನ ತಡೋಳಾ ಗ್ರಾಮದಲ್ಲಿ ಕೃಷಿ ಇಲಾಖೆಯಡಿ ಮಂಜೂರಾದ ರೂ. ೧೧ ಕೋಟಿಗಳ ಕೇಂದ್ರ ಮತ್ತು ರಾಜ್ಯ ಸಂಯೋಜಿತ ಜಲಾನಯನ, ಆರ್‌ಡಬ್ಲ್ಯೂಎಸ್ ಯೋಜನೆಯಡಿ ಮಂಜೂರಾದ ರೂ. ೧೫ ಲಕ್ಷಗಳ ಕುಡಿಯುವ ನೀರಿನ ಯೋಜನೆ, ೨೦೨೧-೨೨ನೆ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಮಂಜೂರಾದ ರೂ. ೧೦ ಲಕ್ಷಗಳ ಸಾಮಾನ್ಯ ಮತ್ತು ರೂ. ೧೦ ಲಕ್ಷಗಳ ಎಸ್.ಸಿ.ಪಿ ಸಿ.ಸಿ ರಸ್ತೆಗಳು, ರೂ. ೧೦ ಲಕ್ಷಗಳ ಕನಕ ಭವನ ಹಾಗೂ ರೂ. ೧೯ ಲಕ್ಷಗಳ ಕಸ ವಿಲೇವಾರಿ ಘಟಕ ಕಾಮಗಾರಿಗಳ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದೆ ಅಲ್ಲದೇ ಆಳಂದ ಮತಕ್ಷೇತ್ರಕ್ಕೂ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಿದ್ದಾರೆ ಮುಂದೆಯೂ ನೀಡುವ ವಿಶ್ವಾಸವಿದೆ ಎಂದರು.