ಶರಣಕುಮಾರ ಮೋದಿ ಚವದಾಪುರಿ ಹಿರೇಮಠಕ್ಕೆ ಭೇಟಿ

0
14

ಕಲಬುರಗಿ: ನಿಕಟಪೂರ್ವ ಮಹಾಪೌರರಾದ  ಡಾ.ಶರಣಕುಮಾರ ಮೋದಿಯವರ ಜನ್ಮದಿನದ ಪ್ರಯುಕ್ತ ನಗರದ ಬ್ರಹ್ಮಪುರ ಬಡಾವಣೆಯಲ್ಲಿರುವ ಚವದಾಪುರಿ ಹಿರೇಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪರಮಪೂಜ್ಯ ಶ್ರೀ ರಾಜಶೇಖರ ಶಿವಾಚಾರ್ಯರ ಆಶೀರ್ವಾದ ಪಡೆದರು. ಪೂಜ್ಯರು ಮೋದಿ ದಂಪತಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮೋದಿ ದಂಪತಿಗಳು ಮಠದ ಕಲ್ಯಾಣ ಮಂಟಪದ ಕಟ್ಟಡ ನಿರ್ಮಾಣಕ್ಕೆ ರೂ. ಎರಡು ಲಕ್ಷ ನೀಡಿದರು. ಈ ಸಂದರ್ಭದಲ್ಲಿ ಜಾಹ್ನವಿ ಮೋದಿ, ಚಿ.ತ್ರಿಶಾಲಾ ಮೋದಿ,  ದೇವೇಂದ್ರ ಪಾಟೀಲ, ಗೋಪಾಲ ಬುಚನಳ್ಳಿ, ಈರಣ್ಣ ಗೋಳೆದ, ಸೋಮಶೇಖರ ಹಿರೇಮಠ, ಭೀಮಾಶಂಕರ ಮೀಟೇಕಾರ, ಶರಣಗೌಡ, ಸಿದ್ದಣ್ಣಗೌಡ ಇನ್ನಿತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here