ಜಾತಿ ಹೆಸರಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡಿಸುವುದು ಸಲ್ಲದು: ನಾಡೋಜ ಕೃಷ್ಣ

0
7

ಬೆಂಗಳೂರು: ಜಾತಿ ಮತ ಅನ್ನೋದು ಬೀದಿಗೆ ಎಳೆದು ತರಬಾರದು‌. ಆಗ ಮಾತ್ರ ಸಮಾಜದಲ್ಲಿ ಸ್ವಾಸ್ಥ ಉಳಿಯುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಜಾತಿ ಹೆಸರಲ್ಲಿ ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡುವ ಸ್ಥಿತಿ ನಿರ್ಮಾಣವಾಗ್ತಿದೆ ಇದು ಸಲ್ಲದು ಎಂದು ನಾಡೋಜ ಡಾ.ವೂಡೇ ಪಿ. ಕೃಷ್ಣ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ಹಮ್ಮಿಕೊಂಡಿದ್ದ ಪುಸ್ತಕ ಪ್ರಧಾನ ಸಮಾರಂಭದಲ್ಲಿ ಲೇಖಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತಾಡಿದ ನಾಡೋಜ ಕೃಷ್ಣ, ಸಮಾಜದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ನಾವು ದಿಟ್ಟ ನಿಲುವು ತಾಳುವ ಅಗತ್ಯವಿದೆ ಎಂದು ಹೇಳಿದರು.

Contact Your\'s Advertisement; 9902492681

ಇನ್ನು ಕ್ಷುಲ್ಲಕ ಕಾರಣದಿಂದ ಶಾಂತಿ ಸೌಹಾರ್ದತೆ ಹಾಳು ಮಾಡುವ ಕೆಲಸ ಕೈ ಬಿಡಬೇಕೆಂದರು. ಒಳ್ಳೆಯ ಮನಸ್ಸಿರುವ ಕನ್ನಡಿಗರು ಶಾಂತಿಪ್ರೀಯರು. ಸದ್ಯದ ಸ್ಥಿತಿಯಲ್ಲಿ ಯುವಕರು ದಾರಿ ತಪ್ಪದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಈ ವಿಚಾರದಲ್ಲಿ ವಿದ್ಯಾವಂತರು ಮೌನವಹಿಸಬಾರದು. ಇಂತಹ ಸಂದಿಗ್ದ ಪರಿಸ್ತಿತಿಯಲ್ಲಿ ಬುದ್ದಿಜೀವಿಗಳು ಮೌನ ತೊರೆದು ಸಮಾಜವನ್ನ ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸ ಮಾಡುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಶ್ರಿಮಂತಿಕೆಯಾಗಲು ಎಲ್ಲಾ ವೈದ್ಯಕಿಯ, ಇಂಜನಿಯರಿಂಗ್ ವಿಭಾಗದವರು ಸೇರಿ ಎಲ್ಲಾ ವರ್ಗದವರು ಸಾಹಿತ್ಯವನ್ನ ಬರೆಯಬೇಕು ಎಂದು ಹೇಳಿದರು.

ಇನ್ನು ಕಾವ್ಯ ವಿಭಾಗದಲ್ಲಿ ಡಾ. ಮುಮ್ತಾಜ್ ಬೇಗಂ ರಚಿಸಿದ ಕೊಂದ ಕನಸುಗಳ ಕೇಸು ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದ್ದರ ಹಿನ್ನೆಲೆಯಲ್ಲಿ ಡಾ.ಮುಮ್ತಾಜ್ ಬೇಗಂ ಅವರಿಗೆ ನಗದು ಪುರಸ್ಕಾರ ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಸನ್ಮಾಯಿಸಲಾಯಿತು. ಇದೇ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಅವರ ಆತ್ಮಕಥೆ ಕುರಿತಾದ ಪ್ರತಿಬಿಂಬ ಪುಸ್ತಕವು ಪ್ರಶಸ್ತಿಗೆ ಆಯ್ಕೆಯಾಗಿತ್ತು ಈ ಹಿನ್ನೆಲೆಯಲ್ಲಿ ಸತೀಸ ಹೊಸಮನಿ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾಯಿಸಲಾಯಿತು. ಇದೇ ರೀತಿ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಡಾ.ಎಚ್.ಎಸ್. ಅನುಮಪ ಸೇರಿ ಹಲವು ಲೇಖಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here