ಬೆಂಗಳೂರು: ಪೊಲೀಸ್ ಇಲಾಖೆಯ 545 ಸಬ್ ಇನ್ಸ್‌ಪೆಕ್ಟರ್(PSI) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನೆಲೆ ಪ್ರಕರಣ ಸಮಗ್ರ ತನಿಖೆಗೊಳಪಡಿಸಿ, ಪರೀಕ್ಷೆ ಮರು ನಿಗದಿ ಮಾಡುವಂತೆ ಆಗ್ರಹಿಸಿ ನಾಳೆ (ಏ.13) ಬೆಳಿಗ್ಗೆ 9ಗಂಟೆಗೆ ಬೆಂಗಳೂರಿನ ಫ್ರೀಡ್ಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ವಂಚಿತ ಅಭ್ಯರ್ಥಿಗಳು ಧರಣಿಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರ ಪರವಾಗಿ ಸಲ್ಮಾನ್ ಆಳಂದ ಅವರು ಕರೆ ನೀಡಿದ್ದಾರೆ.