ಕಲಬುರಗಿಯಲ್ಲಿ ಏಪ್ರಿಲ್ 18 ರಿಂದ 30ವರೆಗೆ ಆರೋಗ್ಯ ಮೇಳ: ಡಾ. ಉಮೇಶ ಜಿ ಜಾಧವ

0
331

ಕಲಬುರಗಿ: ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಏಪ್ರಿಲ್ 18 ರಿಂದ 30ರ ವರೆಗೆ ಆರೋಗ್ಯ ಮೇಳ ಆಯೋಜಿಸಲಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ ಜಿ ಜಾಧವ ಅವರು ತಿಳಿಸಿದರು.

ಇದನ್ನೂ ಓದಿ: ಬೆಲೆ ಏರಿಕೆಯನ್ನು ಖಂಡಿಸಿ ಎಸ್‍ಯುಸಿಐ (ಕಮ್ಯುನಿಸ್ಟ್) ಪ್ರತಿಭಟನೆ

Contact Your\'s Advertisement; 9902492681

ಮಂಗಳವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಮೇಳದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಆರೋಗ್ಯ ಮೇಳಾ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಮೇಳದ ಕುರಿತಾಗಿ ಹೆಚ್ಚಿನ ಪ್ರಚಾರ ಮಾಡಿ ಜನರು ಭಾಗವಹಿಸುವಂತೆ ಮಾಡಬೇಕು ಕೆಲವರಿಗೆ ತಮಗೆ ಇರುವ ಖಾಯಿಲೆ ಬಗ್ಗೆ ಅರಿವು ಇರುವುದಿಲ್ಲ. ಅಂತವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಮೇಳದಲ್ಲಿ ಡಾಕ್ಟರ, ನರ್ಸ್‍ಗಳು ಹಾಗೂ ಆಶಾ ಕಾರ್ಯಕರ್ತೆಯರು ಸ್ಥಳದಲ್ಲಿ ಇದ್ದು ಜನರಿಗೆ ಮೇಳದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ತಾಲೂಕಿಗೆ ಒಂದರಂತೆ, ಆರೋಗ್ಯ ಮೇಳ ಯಶಸ್ವಿಗೊಳಿಸಲು ಕಂದಾಯ ಇಲಾಖೆ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಂಚಾಯತ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇತರೆ ಇಲಾಖೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಗಳು ಒಳಗೊಂಡ ಒಂದು ಸಮಿತಿ ರಚಿಸಿ ಆರೋಗ್ಯ ಮೇಳ ಯಶಸ್ವಿಗೊಳಸುವಂತೆ ಸೂಚಿಸಿದರು.

ಇದನ್ನೂ ಓದಿ: ಜನವಿರೋಧಿ, ಭ್ರಷ್ಟ ಸರಕಾರ, ನೀತಿಗೆಟ್ಟ ಸರ್ಕಾರವೇ ಬಿಜೆಪಿ ಸರ್ಕಾರ: ಪ್ರಿಯಾಂಕ್ ಖರ್ಗೆ

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮಾತನಾಡಿ, ಏ.18 ರಿಂದ ಈ ಮೇಳ ಅಯೋಜಿಸುತ್ತಿದ್ದು, ಇದನ್ನು ಪ್ರತಿಯೊಬ್ಬರ ಆರೋಗ್ಯ ದೃಷ್ಠಿಯಿಂದ ಆಯೋಜನೆ ಮಾಡಲಾಗುತ್ತಿದೆ. ಇದರ ಉಪಯುಕ್ತತೆಯನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ಆರೋಗ್ಯ ಮೇಳದ ಮಾರ್ಗಸೂಚಿಯ ಡಾ|| ಶಿವಕುಮಾರ ದೇಶಮುಖರವರು ಪಿಪಿಟಿ ಮುಖಾಂತರ ಸಮಗ್ರವಾಗಿ ಮಾಹಿತಿ ನೀಡಿದರು.

ಆರೋಗ್ಯ ಮೇಳದಲ್ಲಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ತಪಾಸಣೆ, ಸಾಂಕ್ರಾಮಿಕ ರೋಗಗಳಾದ ಕುಷ್ಠರೋಗ, ಕ್ಷಯರೋಗ, ಮಲೇರಿಯಾ, ಕೋವಿಡ್-19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಕುರಿತು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವುದು. ಇ.ಎನ್.ಟಿ ಸ್ಕ್ರೀನಿಂಗ್ ನಡೆಸಲಿದ್ದು, ಮಾನಸಿಕ ಆರೋಗ್ಯ ಕುರಿತು ಸೇವೆ ನೀಡಲಾಗುವುದು, ನೇತ್ರ ತಪಾಸಣೆ, ಕ್ಯಾಟರಾಕ್ಟ್ ಸ್ಕ್ರೀನಿಂಗ್. ದಂತ ತಪಾಸಣೆ, ಆಯುಷ್ಮಾನ ಭಾರತ – ಆರೋಗ್ಯ ಕರ್ನಾಟಕ ಕಾರ್ಡ ನೀಡಲಿದ್ದು, ಟೆಲಿ ಮೆಡಿಸನ್ ಸರ್ವಿಸ್ ಹಾಗೂ ರೆಫರಲ್ ಕುರಿತು ಮಾಹಿತಿ ನೀಡಲಾಗುವುದು. ಎನ್.ಸಿ.ಡಿ ಸ್ಕ್ರೀನಿಂಗ್, ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ, ಲ್ಯಾಬ್ ಟೆಸ್ಟ್, ಹದಿಹರೆಯದವರಿಗೆ ಆರೋಗ್ಯ ತಪಾಸಣೆ ಹಾಗೂ ಉಚಿತವಾಗಿ ಔಷಧಗಳ ವಿತರಣೆ ಮಾಡಲಾಗುವುದು. ಸ್ಥಳದಲ್ಲಿ ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ, ಆರೋಗ್ಯ ಕ್ಷೇಮ ಕೇಂದ್ರ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ವಸ್ತು ಪ್ರದರ್ಶನ ಮಾಡಿ ಜನರಿಗೆ ಮಾಹಿತಿ ನೀಡಲಾಗುವುದು.

ಇದನ್ನೂ ಓದಿ: ಉದ್ಯೋಗ ಮೇಳಕ್ಕೆ ಅಲಮಪ್ರಭು ಪಾಟೀಲ ಚಾಲನೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಶರಣಬಸಪ್ಪಾ ಗಣಜಲಖೇಡ, ಜಿಲ್ಲಾ ಕುಷ್ಠ ರೋಗ ಕಾರ್ಯಕ್ರಮ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ, ಕುಟಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ, ಆರೋಗ್ಯ ತಾಲ್ಲೂಕು ಅಧಿಕಾರಿಗಳು, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here