ರೈತರು ವಿಮಾ ಮೊತ್ತ ಪಾವತಿಸಿ ನೋಂದಣಿಗೆ ಸೂಚನೆ

0
132

ಕಲಬುರಗಿ: ಪ್ರಸಕ್ತ ೨೦೧೯-೨೦ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಲಾಭ ಪಡೆಯಲು ರೈತರು ತಮ್ಮ ಸಮೀಪದ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಸಂಘಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನಿಗದಿತ ಅವಧಿಯೊಳಗಾಗಿ ವಿಮಾ ಮೊತ್ತ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಈ ಯೋಜನೆಯಡಿ ತಾಲೂಕಿನ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಕಲಬುರಗಿ ಮತ್ತು ಕಮಲಾಪೂರ ತಾಲೂಕುಗಳಿಗೆ ೨೦೧೯-೨೦ನೇ ಸಾಲಿಗೆ ಈ ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರಿನ ಫ್ಯೂಚರ್ ಜನರಲ್ ಇನ್ಸುರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದೆ.

Contact Your\'s Advertisement; 9902492681

ಮಳೆಯಾಶ್ರಿತ ಜೋಳ, ಸಜ್ಜೆ, ಉದ್ದು, ಹೆಸರು, ಸೋಯಾ, ಅವರೆ, ಎಳ್ಳು, ಹತ್ತಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ೨೦೧೯ರ ಜುಲೈ ೩೧ ಕೊನೆಯ ದಿನವಾಗಿದೆ ಮಳೆಯಾಶ್ರಿತ ಸೂರ್ಯಕಾಂತಿ ಬೆಳೆಗೆ ವಿಮಾ ಮೊತ್ತ ಪಾವತಿಸಲು ೨೦೧೯ರ ಆಗಸ್ಟ್ ೧೪ ಕೊನೆಯ ದಿನವಾಗಿದೆ. ಮಳೆಯಾಶ್ರಿತ ಮುಸುಕಿನ ಜೋಳ, ತೊಗರಿ ಹಾಗೂ ನೀರಾವರಿ ತೊಗರಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ೨೦೧೯ರ ಆಗಸ್ಟ್ ೧೬ ಕೊನೆಯ ದಿನವಾಗಿದೆ. ನೀರಾವರಿ ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ೨೦೧೯ರ ಆಗಸ್ಟ್ ೨೨ ಕೊನೆಯ ದಿನವಾಗಿದೆ.

ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕು. ಇದಲ್ಲದೇ ಬೆಂಗಳೂರಿನ ಫ್ಯೂಚರ್ ಜನರಲಿ ಜನರಲ್ ಇನ್ಸುರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆಯ ಪ್ರತಿನಿಧಿಯ ಮೊಬೈಲ್ ಸಂಖ್ಯೆ 6362954334 ಅಥವಾ 9892402175 ಹಾಗೂ ಸಹಾಯವಾಣಿ ಸಂಖ್ಯೆ 18004257919 ಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here