ಕವನ ಕಾಸಾರ ಕೃತಿ ಲೋಕಾರ್ಪಣೆ ನಾಳೆ

0
30

ಕಲಬುರಗಿ: ಸಾಹಿತಿ, ಆಧ್ಯಾತ್ಮಾನುಭಾವಿ ದಿ. ತಿರುಮಲಾಚಾರ್ಯ ನವಲಿ ಇವರು ರಚಿಸಿರುವ ಕವನ ಕಾಸಾರ ಕತಿ ಸಂಚಯದ ಲೋಕಾರ್ಪಣೆ ಸಮಾರಂಭ ಏ. ೧೮ ರ ಸೋಮವಾರ ಸಂಜೆ ೭ ಗಂಟೆಗೆ ಬ್ರಹ್ಮಪುರ ಬಡಾವಣೆಯ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀ ಲಕ್ಷ್ಮೀ ನಾರಸಿಂಹ ಮಂದಿರದ ಅಂಗಳದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ: ವಿವಿಧ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

Contact Your\'s Advertisement; 9902492681

ಈ ಅರ್ಥಪೂರ್ಣ ಸಮಾರಂಭದಲ್ಲಿ ಗುಲಬರ್ಗಾ ವಿವಿ ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ಗುವಿವಿ ವಿದ್ಯಾ ಮಂಡಲದ ವಿಶೇಷ ಆಡಲಿತಾಧಿಕಾರಿಗಳಾಗಿರುವ ಡಾ. ಪರಿಮಳಾ ಅಂಬೇಕರ್, ನಾಡಿನ ಖ್ಯಾತ ಸಾಹಿತಿಗಳು, ಕನಕಶ್ರೀ ಪ್ರಶಸ್ತಿ ಪುರಸ್ಕೃತ ದಾಸ ಸಾಹಿತ್ಯ ಚಿಂತಕರಾದಂತಹ ಡಾ. ಸ್ವಾಮೀರಾವ ಕುಲಕರ್ಣಿ, ನಾಡಿನ ಖ್ಯಾತ ಪತ್ರಕರ್ತರಾದಂತಹ ಡಾ. ಶ್ರೀನಿವಾಸ ಸಿರನೂರಕರ್ ಅವರು ಕವನ ಕಾಸಾರ ಕೃತಿ ಸಂಚಯವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ನಿವೃತ್ತ ಪ್ರಾಚಾರ್ಯ, ಸ್ವಾತಂತ್ರ್ಯ ಸೇನಾನಿ ಹಾಗೂ ಸಂಸ್ಕೃತ- ಕನ್ನಡ ವಿದ್ವಾಂಸರಾಗಿರುವ ರಾಮಾಚಾರ್ಯ ನವಲಿ ವಹಿಸಿಕೊಳ್ಳಲಿದ್ದಾರೆ. ನಾಡಿನ ಉದಯೋನ್ಮುಖ ಸಂಗೀತಗಾರ ವಿದ್ಯಾಧೀಶ ಆದ್ಯ ಇವರು ಕವನ ಕಾಸಾರ ಕೃತಿ ಸಂಚಯದಲ್ಲಿರುವ ಕವಿತೆಗಳನ್ನು ಸಗೀತಕ್ಕೆ ಅಳವಡಿಸಿ ಪ್ರಸ್ತುತ ಪಡಿಸುವ ಮೂಲಕ ಲಘು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡು ರಸಸ್ವಾದ ಮಾಡಬೇಕೆಂದು ನವಲಿ ತಿರುಮಲಾಚಾರ್ಯರ ಶಿಷ್ಯ ವರ್ಗದವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹಿಂದೂ ಕಾರ್ಯಕರ್ತೆ ದಿವ್ಯ ಹಾಗರಗಿ ಮನೆ ಮೇಲೆ ಸಿಐಡಿ ದಾಳಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here