ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ನಾಳೆವರಗೆ ಸುಪ್ರಿಂ ಕೋರ್ಟ್​ ಮುಂದೂಡಿಕೆ

0
93

ನವದೆಹಲಿ: ಕರ್ನಾಟಕ ರಾಜ್ಯ ಸಭೆಯಲ್ಲಿ ಇಂದೇ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಯಬೇಕು ಎಂದು ಪಕ್ಷೇತರ ಶಾಸಕರು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ನಾಳೆ ವರೆಗೆ ಮುಂದೂಡಿದೆ ಎನ್ನಲಾಗಿದೆ.

ಅತೃಪ್ತ ಶಾಸಕರ ಪರ ವಕೀಲ ಮುಕುಲ್​ ರೋಹ್ಟಗಿ, ನ್ಯಾಯಲದಲ್ಲಿ ವಾದಮಂಡಿಸಿ, ಸುಮ್ಮನೆ ಕಾಲಹರಣ ಮಾಡ್ತಿದ್ದಾರೆ ಆರೋಪಿಸಿ. ಇಂದು ಸಂಜೆ 6 ರೊಳಗೆ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ಅವಕಾಶಕ್ಕೆ ಆದೇಶ ವದಗಿಸಬೇಕೆಂದು ಸೂಚಿಸಿ ಎಂದು ಮನವಿ ಮಾಡಿದರು.

Contact Your\'s Advertisement; 9902492681

ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಜುಲೈ 18ಕ್ಕೆ ಕಲಾಪ ಆರಂಭಗೊಂಡಿದ್ದು ಹಲವು ಮಂದಿ ಮಾತನಾಡಬೇಕಿದೆ. ಇತಿಹಾಸವನ್ನು ನೋಡಿದರೆ ಸುದೀರ್ಘ ಚರ್ಚೆ ನಡೆದಿದೆ. ಸದನದಲ್ಲಿ ಅಭಿಪ್ರಾಯ ಮಂಡನೆ ಆಗುತ್ತಿರುವಾಗ ರಾಜ್ಯಪಾಲರು ಸಮಯ ನಿಗದಿ ಮಾಡಿರುವುದು ಸರಿಯಲ್ಲ. ಚರ್ಚೆ ಮಧ್ಯೆ ಮತಕ್ಕೆ ಹಾಕುವುದು ಹೇಗೆ ಎಂದು ಪ್ರಶ್ನಿಸಿದರು.

ಇಂದು ಯಾವುದೇ ಆದೇಶ ಪ್ರಕಟಿಸದ ಸುಪ್ರೀಂ ಕೋರ್ಟ್ ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮತ್ತೊಂದು ಅವಕಾಶ ನೀಡಿದೆ ಎಂದೆ ಹೇಳಲಾಗುತ್ತಿದ್ದು, ಅತೃಪ್ತ ಶಾಸಕರ ರಾಜೀನಾಮೆ ಅಂಗಿಕಾರ ವಿಚಾರದಲ್ಲಿ ನಾವು ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಲಯ ಹೇಳಿತ್ತು.

ವಿಶ್ವಾಸ ಮತಯಾಚನೆ ವಿಚಾರದಲ್ಲಿ ಸ್ಪೀಕರ್ ನಡೆಯನ್ನು ಆಶಾಭಾವದಿಂದ ಕಾದು ನೋಡುತ್ತೇವೆ ಎಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here