ಹೊನ್ನ ಕಿರಣಗಿಯಲ್ಲಿ ಜಂಗಮ ವಟುಗಳಿಗೆ ಹದಿನಾಲ್ಕನೇ ವರ್ಷದ ಸಂಸ್ಕಾರ ಶಿಬಿರ

0
32

ಫರತಾಬಾದ: ನಮ್ಮ ಸನಾತನ ಸಂಸ್ಕೃತಿ ಉಳಿಸಲು ಇಂದೇ ಪಣತೊಡಿ, ನೀವೆಲ್ಲ ನಮ್ಮ ಸಂಸ್ಕೃತಿಯನ್ನು ಇನ್ನೊಂದು ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ, ಕಸವನ್ನು ರಸವಾಗಿಸುವ ಶಕ್ತಿ ನಮ್ಮ ದೇಶದ ಸನಾತನ ಸಂಸ್ಕೃತಿಗಿದೆ, ಮಂತ್ರ, ವೇದಗಳು ಋಷಿಗಳಿಂದ ಬಂದಿದ್ದು ಸರ್ವರಿಗೂ ಕಲಿಯುವ ಹಕ್ಕಿದೆ ಇವು ಯಾವುದೇ ಸಿಮೀತ ಜನರಿಗೆ ಮೀಸಲಿಲ್ಲ ಈ ಮಂತ್ರಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಸಿಗಲಿ, ವೇದ ಮಂತ್ರಗಳು ಸರ್ವತೋಮುಖ ಬೆಳವಣಿಗೆಗೆ ಸಹಾಕಾರಿಯಾಗಲಿ, ತಾಯಿಯ ಎದೆಹಾಲು ಆರು ತಿಂಗಳವರೆಗೆ ನಮ್ಮನ್ನು ಪೋಷಿಸಿದರೆ ಗೋವಿನ ಹಾಲು ನಮ್ಮ ಜೀವನ ಪರ್ಯಂತ ನಮ್ಮನ್ನು ಸಲಹುತ್ತದೆ ಹಾಗಾಗಿ ಗೋಮಾತೆಗೆ ನಾವು ಚಿರಋಣಿಯಾಗಿರಬೇಕು ಎಂದು ಹೊನ್ನ ಕಿರಣಗಿಯ ಶ್ರೀ ಷ.ಬ್ರ.ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು ಶಿಬಿರಾರ್ಥಿಗಳಿಗೆ ಸಂಸ್ಕಾರ ದೀಕ್ಷೆಯನ್ನು ನೀಡಿದರು.

ಕಲಬುರಗಿ ತಾಲೂಕಿನ ಹೊನ್ನ ಕಿರಣಗಿಯ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಸತತ ಹದಿನಾಲ್ಕು ವರ್ಷಗಳಿಂದ ನಡೆಸುತ್ತಿರುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯೊಂದಿಗೆ ವೈದಿಕ ಸಂಸ್ಕಾರ ಶಿಬಿರ ಈ ವರ್ಷದ ಬೇಸಿಗೆ ರಜೆ ಶಾಲಾ ಬಿಡುವಿನ ಸಮಯದಲ್ಲಿ ದಿ ಎಪ್ರೀಲ್ ೧೭ ರಿಂದ ಮೇ ೨೨ ರವರೆಗೆ ಸುಮಾರು ೫೦ ದಿನಗಳವರೆಗೆ ವೇದ, ಪಂಚಾಂಗ ಮಾಹಿತಿ, ಪೂಜಾ ವಿಧಾನ, ಜೋತಿಷ್ಯ ಮೊದಲಾದ ಜೀವನದ ಮಹತ್ವ ತಿಳಿಸಿ ಕೊಡಲು ಪುರಾತನ ಸಂಸ್ಕೃತಿ ಉಳಿಸುವ ವೈದಿಕ ಸಂಸ್ಕಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ವೇದಿಕೆಯ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ತಾಲೂಕ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ, ವೇದಮೂರ್ತಿ ಶ್ರೀ ಅಮ್ಮಯ್ಯ ಶಾಸ್ತ್ರಿಗಳು, ಗ್ರಾಮದ ಹಿರಿಯ ಮುಖಂಡ ಸಿದ್ರಾಮಪ್ಪ ಯಳಮೇಲಿ ವೇದಿಕೆಯ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ವೇದಮೂರ್ತಿ ವೀರೇಶ ಸಗರ ಶಾಸ್ತ್ರಿಗಳು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜಂಗಮ ವಟುಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಭಗವಂತರಾಯ ಕಾಬಾ, ಮುನಯ್ಯ ಸ್ವಾಮಿ ಮಠ, ಶಂಕರ ಗೊಬ್ಬುರ, ಶ್ರೀಶೈಲ ಬೂಸಾ, ದಾನಯ್ಯ ಸ್ವಾಮಿ ಕಡಿಹಳ್ಳಿ, ಬಸಯ್ಯ ಹಿರೇಮಠ, ರಾಜು ಮಠ, ಮಲ್ಲಿಕಾರ್ಜುನ ಮಠ, ಇನ್ನಿತರರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಗ್ರಾಮದ ಯುವ ಮುಖಂಡರಾದ ಬಸವರಾಜ ಚೆಟ್ಟಿ, ವೇದ ಘೋಷವನ್ನು ಮುರುಗೇಶ, ಪ್ರಾರ್ಥನೆಯನ್ನು ದಾನಯ್ಯ, ಸ್ವಾಗತವನ್ನು ಗುರು, ವಂದನಾರ್ಪಣೆಯನ್ನು ಸೃಜಲ ನೆರವೇರಿಸಿದರು.

ಇದನ್ನೂ ಓದಿ: ಕೃಷಿಕರ ನೂರೆಂಟು ಸಮಸ್ಯೆಗಳ ಪರಿಹಾರಕ್ಕೆ ‘ರೈತ ನ್ಯಾಯ ಮಂಡಳಿ’ ರಚನೆಯ ಅತ್ಯವಶ್ಯಕತೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here