ವೈಜ್ಞಾನಿಕ ಮನೋಭಾವ ಉಳ್ಳವರು ಮಾತ್ರ ಉತ್ತಮ ಸಂಶೋಧಕರಾಗಲು ಸಾಧ : ಪ್ರೊ ಎ.ಎಚ್.ರಾಜಾಸಾಬ

0
24

ಕಲಬುರಗಿ: ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸಿದ್ದರಿರುವ ಯುವ ವಿಜ್ಞಾನಿಗಳ ಅಗತ್ಯತೆ ದೇಶಕ್ಕೆ ಇದೆ. ವಿಜ್ಞಾನ ಕ್ಷೇತ್ರದಲ್ಲಿ ಮಾನವೀಯತೆ, ಅನ್ವೇಷಣಾ ಸ್ವಭಾವ, ಸುಧಾರಣಾ ಪ್ರವೃತ್ತಿ ಹಾಗೂ ವೈಜ್ಞಾನಿಕ ಮನೋಭಾವ ಉಳ್ಳವರು ಮಾತ್ರ ಉತ್ತಮ ಸಂಶೋಧಕರಾಗಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ಎ. ಎಚ್. ರಾಜಾಸಾಬ ಅಭಿಪ್ರಾಯಪಟ್ಟರು. ಅವರು ಭಾನುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಎನ್.ಒ.ಎಸ್.ಟಿ.ಸಿ. ಇವರ ಸಹಯೋಗದೊಂದಿಗೆ ಜರುಗಿದ ಭಾರತೀಯ ಯುವ ಸಂಶೋಧಕರ ಮತ್ತು ಆವಿಷ್ಕಾರರ ಸ್ಪರ್ಧೆಯಲ್ಲಿ ವಿಜೇತರಾದ ಸಂಶೋಧಕರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಇದನ್ನೂ ಓದಿ: ಮಮಿತ್ ಗಾಯಕ್ವಾಡ್ ಆಯ್ಕೆ

Contact Your\'s Advertisement; 9902492681

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರಾವಿಪ ಅಧ್ಯಕ್ಷ ಗಿರೀಶ ಕಡ್ಲೇವಾಡ ಮಾತನಾಡಿ sದೇಶದ ಸಂಶೋಧನಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಯುವ ಸಂಶೋಧಕರು ಅದರತ್ತ ಆಸಕ್ತಿ ತೋರಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸ್ಪರ್ಧೆಯಲ್ಲಿ ಕರ್ನಾಟಕ, ಆಂದ್ರಪ್ರದೇಶ, ಕೇರಳ, ತಮಿಳನಾಡು ಹಾಗೂ ತೆಲಂಗಾಣ ರಾಜ್ಯಗಳ ಸಂಶೋಧಕರು ಭಾಗವಹಿಸಿ ತಮ್ಮ ಸಂಶೋಧನಾ ವರದಿಗಳನ್ನು ಮಂಡಸಿದರು. ಪ್ರಾದೇಶಿಕ ಮಟ್ಟದ ಈ ಸ್ಪರ್ಧೆಯಿಂದ ೧೮ ಸಂಶೋಧಕರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಕರ್ನಾಟಕದ ವಿಜಯಲಕ್ಷ್ಮಿ ಬಿರಾದಾರ, ಅಣಿರುದ್ದ ಕುಲಕರ್ಣಿ, ಮೋನೇಶ, ಪ್ರಗತಿ ಘಟನೂರ, ಅಕುಲ ಬದ್ರಶೆಟ್ಟಿ, ತಳವಾರ ಕೊಟ್ರೇಶ, ದೀಪಾ ಉಳ್ಳೆಗಡ್ಡಿ, ಮೀನಾ, ಕಾರ್ತಿಕ್ ಕುಮಾರ್, ಆಂದ್ರಪ್ರದೇಶದಿಂದ ಜೆ. ಉಮಾಶ್ರೀ ವರ್ಷಿಣಿ, ಚರಣ ಸುಂದರ, ಶಿವಹರ್ಷಾ ವಿಗ್ನೇಶ, ಕೇರಳದಿಂದ ಮೇಘಾ ಮೋಹನ ಹಾಗೂ ತಮಿಳುನಾಡಿನಿಂದ ಮಣಿಕಂಠ ಎಸ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.

ಇದನ್ನೂ ಓದಿ: ಹಕ್ಕ-ಬುಕ್ಕ, ಇತರೆ ಮಹಾರಾಜರಗಳ ಬಗ್ಗೆ ಹೆಚ್ಚು ಸಂಶೋಧನೆ ನಡೆಯಲಿ: ಪ್ರಕಾಶ ದೊರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here