ಚಿಂಚೋಳಿ: ಸಾಂಬಾರು, ಔಷದಿ, ಧಾರ್ಮಿಕ ಕಾರ್ಯಗಳಲ್ಲಿ ಸಹಾಯಕಾರಿಯಾಗುವ ಅರಷಿಣ ಚಿಂಚೋಳಿ ಭಾಗದಲ್ಲಿ ಉತ್ತಮ ಇಳುವರಿ ಕಂಡಿದ್ದು ದೇಗಲಮಡಿ, ಐನೊಳ್ಳಿ, ಚಿಮ್ಮನಚೋಡ ಭಾಗದಲ್ಲಿ ಹೆಚ್ಚಿನ ರೈತರು ಈ ಬೆಳೆಯನ್ನು ಬೆಳೆದು ಸಾಂಗ್ಲಿ, ನಿಜಾಮಬಾದ್, ಪಂಡರಾಪೂರ ಮಾರುಕಟ್ಟೆಗೆ ನೀಡುತ್ತಿದ್ದಾರೆ.
ಚಿಂಚೋಳಿ ರೈತರಾದ ಶ್ರೀ ನಾರಾಯಣ ಕೊಟ್ರಕಿ ತನ್ನ ಮೂರು ಎಕರೆ ಜಮೀನಿನಲ್ಲಿ 100 ಕ್ವಿಂಟಲ್ ಅರಷಿಣ ಬೆಳೆದು ಮಾದರಿಯಾಗಿದ್ದಾರೆ. ಮುಂಗಾರು ಸಮಯದಲ್ಲಿ ನಾಟಿಮಾಡಿ ಹಿಂಗಾರು ಮಂಜು ಬೀಳುವ ಹಂತದಲ್ಲಿ ಎಲೆ ಸುಡದಂತೆ ನೋಡಿಕೊಂಡಲ್ಲಿ ಉತ್ತಮ ಇಳುವರಿ ಪಡೆಯಬಹುದು. ಪೋಟ್ಯಾಷ್‍ಯುಕ್ತ ಗೊಬ್ಬರ, ಜೀವಾಮೃತ ಗಡ್ಡೆಗಳ ಬೆಳವಣಿಗೆಗೆ ಉತ್ತಮ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜಹೀರ್ ಅಹಮದ ತಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಹೆಚ್.ಡಿ.ಕುಮಾರಸ್ವಾಮಿ ನಾಲ್ಕು ಪ್ರಶ್ನೆ