ಕಲಬುರಗಿ: ನಗರದ ಎನ್.ವಿ.ಕನ್ಯಾ ಪ್ರೌಢ ಶಾಲೆಯ ಹತ್ತಿರದ ಇಂದರದಾಸ್ ಅಪಾರ್ಟಮೆಂಟನಲ್ಲಿ ಶ್ರೀ ಅಮರನಾಥ ರಾಮತೀರ್ಥ ಸೇವಾ ಸಮಿತಿಯ ವತಿಯಿಂದ ಸಾರ್ವಜನಿಕರಿಗೆ ಉಚಿತ ತಂಪಾದ ಕುಡಿಯುವ ನೀರಿನ ಮಹಾನಗರ ಪಾಲಿಕೆ ಸದಸ್ಯರಾದ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ಹಾಗೂ ವಿಜಯಕುಮಾರ ಸೇವಲಾನಿ ಜಂಟಿಯಾಗಿ ಉದ್ಘಾಟಿಸಿದರು.
ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ
ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದ್ದು,ಬೇಸಿಗೆ ಬೀಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸೇವಾ ಸಮಿತಿ ಅವರು ಸಾರ್ವಜನಿಕರಿಗೆ ಉಚಿತ ತಂಪಾದ ಕುಡಿಯುವ ನೀರಿನ ಸೌಲಭ್ಯ ಒದಗಿಸಿರುವುದು ಅಭಿನಂದನಾರ್ಹ ಕಾರ್ಯವೆಂದು ಪಾಲಿಕೆ ಸದಸ್ಯರು ಶ್ಲಾಘೀಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶ್ರೀ ಅಮರನಾಥ ರಾಮತೀರ್ಥ ಸೇವಾ ಸಮಿತಿ ಆಡಳಿತ ಮಂಡಳಿ ಸದಸ್ಯರಾದ ಸುಹಾಸ ಖಣಗೆ, ಸುನೀಲ ಬುದ್ವಾನಿ, ದಿಗಂಬರ್ ನಾಯಕ, ನಳಿನ ಚಾವ್ಡಾ, ಹರೀಶ್ ಚಾವ್ಡಾ, ರವಿಚಂದ್ರ ಪ್ರಕಾಶ, ಚಂದ್ರ ಬೆಣ್ಣೂರ, ಪ್ರದೀಪ್ ಚಾವ್ಡಾ, ಚಂದ್ರಶೇಖರ್ ಬೊಮಮ್ಮನಳ್ಳಿ, ಸಂಜಯ ಗೀಲ್ಡಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆಯಲ್ಲಿ ಆಕ್ರಮ: 8 ಜನರ ಜಾಮೀನು ಅರ್ಜಿ ವಜಾ