ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರಗಳು: ಡಾ. ಮೇಧಾವಿನಿ ಕಟ್ಟಿ

0
171

ಕಲಬುರಗಿ : ನಿಮ್ಮ ಸಾಧನೆಯ ಹೆಜ್ಜೆ ಹಿಂದಿನವರಿಗೆ ಪ್ರೇರಣೆ ಆಗಬೇಕು ಆ ನಿಟ್ಟಿನಲ್ಲಿ ಸಾಧನೆ ಮಾಡಿ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ. ಮೇಧಾವಿನಿ ಕಟ್ಟಿ ಅವರು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಎಂ. ಎ ಕನ್ನಡ ಮತ್ತು ಕನ್ನಡ ಜಾನಪದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಮತ್ತು ಕನ್ನಡ ಸಾಹಿತ್ಯ ಸಂಘದ ಕಾರ್ಯಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಪದವಿಯಲ್ಲಿ ಅಲ್ಪ ಸ್ವಲ್ಪ ಓದಿರುತ್ತಿರಿ ಆದರೆ ಸ್ನಾತಕೋತ್ತರ ಪದವಿಯಲ್ಲಿ ಸಂಪೂರ್ಣವಾಗಿ ವಿಷಯದ ಬಗ್ಗೆ ಓದಬೇಕು ಆಗುತ್ತದೆ.

Contact Your\'s Advertisement; 9902492681

ನೀವು ನಿಮ್ಮ ಊರು ಕೇರಿಗಳು ಬಿಟ್ಟು ಅಧ್ಯಯನ ಮಾಡುವುದಕ್ಕೆ ವಿಶ್ವವಿದ್ಯಾಲಯಕ್ಕೆ ಬಂದು ಎರಡು ವರ್ಷಗಳ ಕಾಲ ಪರಿಶ್ರಮದಿಂದ ಅಧ್ಯಯನ ಮಾಡಿ ಮರಳಿ ಊರಿಗೆ ಹೋಗುವಾಗ ಅಪಾರ ಜ್ಞಾನವನ್ನು ಸಂಪಾದಿಸಿಕೊಂಡು ಹೋಗಬೇಕು. ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರಗಳು ಇವೆ. ಇಲ್ಲಿ ಸಿಗುವ ಮೌಲ್ಯವರ್ಧಿತ ಜ್ಞಾನ ಬೇರೆಲ್ಲೂ ಸಿಗುವುದಿಲ್ಲ ಎಂದು ಅವರು ಹೇಳಿದರು.

ಕಲಾ ನಿಕಾಯದ ಡೀನ ಡಾ. ರಮೇಶ್ ರಾಠೋಡ ಅತಿಥಿಯಾಗಿ ಮಾತನಾಡಿ ಕನ್ನಡ ವಿಭಾಗಕ್ಕೆ ಬರೋದು ನನಗೆ ಸಂತಸ ತಂದಿದೆ ವಿದ್ಯಾರ್ಥಿಗಳು ಕನ್ನಡ ಭಾಷೆ ಜೊತೆಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನ ಕೂಡ ಪಡೆಯಲು ಅವಶ್ಯಕತೆ ಇದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡ ವಿಭಾಗದ ನಿರ್ದೇಶಕ ಪ್ರೊ. ಎಚ್. ಟಿ ಪೋತೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಕನ್ನಡ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳು ಪ್ರಜ್ಞಾಪೂರ್ವಕವಾಗಿ ಪದಗಳನ್ನು ಬಳಸಬೇಕು. ಪಡೆದಿರುವ ಪದವಿಗೆ ಗೌರವ ಮತ್ತು ನ್ಯಾಯವನ್ನು ಒದಗಿಸಬೇಕು ಆಗ ಆ ಪದವಿಗೆ ಅರ್ಥ ಬರುತ್ತದೆ ಹಿಂದಿನ ಶ್ರಮ ನೆನೆದುಕೊಳ್ಳಿ ನಿಮಗೆ ವಿದ್ವತವಲಯದ ಜ್ಞಾನ ಸಿಗಲಿ ಎನ್ನುವ ಉದ್ದೇಶದಿಂದ ಕನ್ನಡ ವಿಭಾಗದಲ್ಲಿ ಬಹಳಷ್ಟು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತೇವೆ ಎಂದ ವಿದ್ಯಾರ್ಥಿಗಳಿಗೆ ಓದು ಬರಹದ ಬಗ್ಗೆ ಕುಲಂಕುಶವಾಗಿ ಮಾತನಾಡಿದರು.

ಡಾ. ಶ್ರೀಶೈಲ ನಾಗರಾಳ, ಡಾ. ಎಂ. ಬಿ ಕಟ್ಟಿ, ಡಾ. ಸಂತೋಷ ಕಂಬಾರ, ಡಾ. ವಿಜಯಕುಮಾರ ಬಿಳಗಿ, ಡಾ. ಹಣಮಂತ ಮೇಲಕೇರಿ, ಡಾ. ಪರಮೇಶ್ವರ್ ಜಾನೆ, ಡಾ. ವಸಂತ ನಾಶಿ, ಡಾ. ಪ್ರಕಾಶ ಸಂಗಮ, ಡಾ. ಶಿವಪುತ್ರ ಮಾವಿನ, ಇತರರು ಇದ್ದರು. ಅರುಣ್ ನಿರೂಪಿಸಿದರು ಭೀಮಾಶಂಕರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here