ಕಲಬುರಗಿ: ನಗರದ ಎಸ್ ಎಸ್ ತೆಗನೂರ್ ಪದವಿ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಬಿಸಿಎ ವಿಭಾಗದಲ್ಲಿ ಬಂಗಾರದ ಪದಕದೊಂದಿಗೆ ರಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
೨೦೧೯-೨೦ ನೆ ಸಾಲಿಗೆ ಕು. ಪ್ರೇರಣಾ ಮಣ್ಣುರೆ ಹಾಗೂ ೨೦೨೦-೨೧ ನೇ ಪ್ರಸಕ್ತ ಸಾಲಿಗೆ ಕು. ನಾಗರತ್ನ ಬಸವರಾಜ್ ಕ್ರಮವಾಗಿ ಮೊದಲ ರಾಂಕ್ ಗಳಿಗೆ ಬಂಗಾರ ಪದಕ ಪಡೆದಿದ್ದಾರೆ.
ಈ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿಗಳಾದ ರವೀಂದ್ರ ಎಸ್.ತೆಗನೂರ್ ಸದಸ್ಯರು ಟ್ರಸ್ಟಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ. ಜ್ಯೋತಿ ಆರ್.ತೆಗನೂರ್ ಹಾಗೂ ಸಂಸ್ಥೆಯ ಬೋಧಕ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.