ಸುರಪುರ: ನಗರದ ರಂಗಂಪೇಟ-ತಿಮ್ಮಾಪುರನ ಸವಿತಾ ಸಮಾಜ ಸಮುದಾಯ ಭವನದಲ್ಲಿ ರವಿವಾರದಂದು ಸುರಪುರ ಮತ್ತು ಹುಣಸಗಿ ತಾಲೂಕುಗಳ ಹಿಂದುಳಿದ ವರ್ಗಗಳ ಎಲ್ಲಾ ಜಾತಿ ಮತ್ತು ವರ್ಗಗಳ ಸಂಘಗಳ ಪದಾಧಿಕಾರಿಗಳು, ಹಿರಿಯರ ಹಾಗೂ ಯುವಕರ ಪೂರ್ವಭಾವಿ ಸಭೆ ನಡೆಯಿತು.
ಇದನ್ನೂ ಓದಿ: ಭಂಕೂರಿನಲ್ಲಿ ಕೋಮು ಸಾಮರಸ್ಯ ಸಾರುವ ಇಫ್ತಾರ್ ಕೂಟ
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಮಾತನಾಡಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಬಹಳಷ್ಟು ಹಿಂದುಳಿದಿರುವ ಹಿಂದುಳಿದ ವರ್ಗಗಳ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಿಂದುಳಿದ ವರ್ಗಗಳ(ಓಬಿಸಿ) ಒಕ್ಕೂಟ ಸಂಘಟನೆ ತುಂಬಾ ಅವಶ್ಯ ಎಂದು ಹೇಳಿದರು, ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ಒಕ್ಕೂಟ ಘಟಕ ರಚನೆ ಕೈಗೊಳ್ಳುವ ಮೂಲಕ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.
ಸಭೆಯಲ್ಲಿ ಮೇ೧೫ ರಂದು ಎರಡೂ ತಾಲೂಕುಗಳ ಹಿಂದುಳಿದ ಜಾತಿ ಮತ್ತು ವರ್ಗಗಳ ಸಭೆಯನ್ನು ಕರೆಯಲು ತೀರ್ಮಾನಿಸಲಾಯಿತು, ಸಭೆಯಲ್ಲಿ ತಾಲೂಕು ಹಾಲುಮತ(ಕುರುಬ) ಸಂಘದ ಅಧ್ಯಕ್ಷ ಕೆ.ಎಮ್.ಕವಾತಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಮಡಿವಾಳಪ್ಪ, ತಾಲೂಕು ಅಧ್ಯಕ್ಷ ವೀರಘಂಟೆಪ್ಪ, ವಿ.ಎಸ್.ಎಸ್. ಕಬ್ಬಲಿಗ ಸಮಾಜದ ಮುಖಂಡ ಮಲ್ಲಪ್ಪ, ಈಡಿಗ ಸಮಾಜದ ಮುಖಂಡ ಮುರುಳೀಧರ, ಸವಿತಾ ಸಮಾಜದ ಮುಖಂಡ ಮಹೇಶ ಗೋಗಿ, ತಾಲೂಕು ಕುಂಬಾರ ಸಂಘದ ಅಧ್ಯಕ್ಷ ನಿಂಗಣ್ಣ ಕುಂಬಾರ, ಅಮರೇಶ ಕುಂಬಾರ, ಕ್ಷತ್ರಿಯ ಸಮಾಜದ ಅಧ್ಯಕ್ಷ ರಾಜು ಪುಲ್ಸೆ, ಸವಿತಾ ಸಮಾಜದ ಗೋಪಾಲ ಚಿನ್ನಾಕಾರ, ಮಂಜುನಾಥ ಅನವಾರ ಇತರರು ಉಪಸ್ಥಿತರಿದ್ದರು. ಯಾದವ್(ಗೊಲ್ಲ) ಸಮಾಜದ ಅಧ್ಯಕ್ಷ ರಮೇಶ ಯಾದವ್ ಸ್ವಾಗತಿಸಿದರು ಮಹೇಶ ಗೋಗಿ ವಂದಿಸಿದರು.