ಸೇಡಂ: ಕಾಡು ಹಂದಿ ದಾಳಿಗೆ ರೈತನ್ನೋಬ್ಬ ಮೃತಪಟ್ಟ ಘಟನೆ ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ನಡೆದಿದೆ. ಭೀಮಶಪ್ಪ ಕಡತಾಲ (48) ಎಂಬಾತ ಮೃತಪಟ್ಟ ದುರ್ದೈವಿ. ಭೀಮಶಪ್ಪ ಮುನಕನಪಲ್ಲಿ ಗ್ರಾಮದ ನಿವಾಸಿಯಾಗಿದ್ದು, ಕೂಲಿ ಕಾರ್ಮಿಕನಾಗಿದ್ದ ಭೀಮಶಪ್ಪನಿಗೆ ಕಾಡುಹಂದಿ ಒಮ್ಮೆಲೆ ದಾಳಿ ನಡೆಸಿದ ಪರಿಣಾಮ ಮೃತಪಟ್ಟಿದ್ದಾರೆ.
ಕಾಡು ಹಂದಿಯ ಕೋರೆ ಹಲ್ಲು ಗಳಿಂದ ತಿವಿದ ಪರಿಣಾಮ ಗಂಭೀರ ಗಾಯಗಳಾಗಿವೆ. ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ರಸ್ತೆ ಮಾರ್ಗದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಭೀಮಶಪ್ಪ ನ ಮೇಲೆ ದಾಳಿ ಮಾಡಿದ ನಂತರ ದಾಳಿ ಮಾಡುವಾಗ ಕೂಗು ಹಾಕಿ ಹಂದಿಯನ್ನು ಓಡಿಸಲು ಯತ್ನಿಸಿದ ಇನ್ನಿಬ್ಬರ ಮೇಲೂ ದಾಳಿ ಮಾಡಿದೆ. ಆದರೆ ಅವರಿಬ್ಬರಿಗೂ ಸಣ್ ಪುಟ್ಟ ಗಾಯಗಳಾಗಿವೆ.
ಈ ಸಂಬಂಧ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಪರಿಶೀಲಿಸಿದರು.
ಮಾಜಿ ಸಚಿವರಿಂದ ಪರಿಹಾರ: ಕಾಡು ಹಂದಿಯ ದಾಳಿಗೆ ಮೃತನಾದ ಭೀಮಶಪ್ಪ ಅವರ ಮನೆಗೆ ತೆರಳಿದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ.