ಸುರಪುರ:ವಿಶ್ವಗುರು ಬಸವಣ್ಣನವರ ೮೮೯ನೇ ಜಯಂತಿ ಅಂಗವಾಗಿ ನಗರದಲ್ಲಿ ಬೃಹತ್ ಕಾರ್ ಮತ್ತು ಬೈಕ್ ರ‍್ಯಾಲಿ ನಡೆಸಲಾಯಿತು.ಸೋಮವಾರ ನಡೆದ ಕಾರ್ ಮತ್ತು ಬೈಕ್ ರ‍್ಯಾಲಿಗೆ ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್,ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಭಾಗವಹಿಸಿ ಚಾಲನೆ ನೀಡಿದರು.ಅಲ್ಲದೆ ಮೆರವಣಿಗೆಯುದ್ಧಕ್ಕೂ ಡಾ:ಸುರೇಶ ಸಜ್ಜನ್ ಅವರು ಸ್ವತಃ ತಾವೇ ಬೈಕ್ ಚಲಾಯಿಸಿಕೊಂಡು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನಗರದ ವಿರಶೈವ ಕಲ್ಯಾಣ ಮಂಟಪ ಬಳಿಯಲ್ಲಿನ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ರ‍್ಯಾಲಿಗೆ ಚಾಲನೆ ನೀಡಲಾಯಿತು.ಮೊದಲಿಗೆ ತಿಮ್ಮಾಪುರ ಬಸ್ ನಿಲ್ದಾಣ ಮಾರ್ಗವಾಗಿ ರಂಗಂಪೇಟೆಯ ಬಜಾರ ಮಾರ್ಗವಾಗಿ ಸುರಪುರ ನಗರಕ್ಕೆ ಆಗಮಿಸಿ ಮಹಾತ್ಮ ಗಾಂಧಿ ವೃತ್ತದ ಮೂಲಕ ದರಬಾರ ರಸ್ತೆ,ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ,ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಶರಣಬಸವ ಕೆಂಗೂರಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಶ್ರೀ ಮಹರ್ಷೀ ವಾಲ್ಮೀಕಿ ವೃತ್ತದ ಮೂಲಕ ಕುಂಬಾರಪೇಟೆ ವೃತ್ತದ ಮೂಲಕ ಎಪಿಎಮ್‌ಸಿ ಗಂಜ್ ವೆಂಕಟಾಪುರ ಮಾರ್ಗವಾಗಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಹೊರಟು ರಂಗಂಪೇಟೆಯಿಂದ ಪುನಃ ವೀರಶೈವ ಕಲ್ಯಾಣ ಮಂಟಪಕ್ಕೆ ಆಗಮಿಸಿ ರ‍್ಯಾಲಿ ಸಮಾಪ್ತಿಗೊಳಿಸಲಾಯಿತು.
ರ‍್ಯಾಲಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಮಂಜುನಾಥ ಎಮ್.ಜಾಲಹಳ್ಳಿ,ಯುವ ಘಟಕದ ಅಧ್ಯಕ್ಷ ಶಿವರಾಜ ಕಲಕೇರಿ,ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಪ್ರದೀಪ ಕದರಾಪುರ,ಮುಖಂಡರಾದ ಮಲ್ಲಣ್ಣ ಸಾಹು ಮುಧೋಳ,ಚಂದ್ರಶೇಖರ ದಂಡಿನ್,ಶಿವು ಸಾಹುಕಾರ ರುಕ್ಮಾಪುರ,ಪ್ರಕಾಶ ಸಜ್ಜನ್,ಸೂಗುರೇಶ ವಾರದ್,ಜಯಲಲಿತಾ ಪಾಟೀಲ್, ಪ್ರಕಾಶ ಅಂಗಡಿ,ಚಂದ್ರಶೇಖರ ಡೋಣೂರ,ಮಂಜುನಾಥ ಗುಳಗಿ,ವೀರಭದ್ರಪ್ಪ ಕುಂಬಾರ,ಜಗದೀಶ ಪಾಟೀಲ್,ಸೂಗರೇಶ ಮಡ್ಡಿ,ಚನ್ನಪ್ಪಗೌಡ ದೇವಾಪುರ,ರವಿಕುಮಾರಗೌಡ ಹೆಮನೂರ,ಸಿದ್ದನಗೌಡ ಹೆಬ್ಬಾಳ,ಶರಣಯ್ಯಸ್ವಾಮಿ ಲಕ್ಷ್ಮೀಪುರ,ಭೀಮು ಹಳ್ಳದ, ಮಲ್ಲು ಬಾದ್ಯಾಪುರ,ಪ್ರಕಾಶ ಹೆಮ್ಮಡಗಿ,ಗುರು ಕಲ್ಮನಿ ಸೇರಿದಂತೆ ಅನೇಕರಿದ್ದರು.ನೂರಕ್ಕೂ ಹೆಚ್ಚು ಕಾರ್‌ಗಳು ಏಕಕಾಲಕ್ಕೆ ರಸ್ತೆಗಿಳಿದಿದ್ದರಿಂದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.ಪೊಲೀಸರು ಎಲ್ಲೆಡೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.