ನಕಲಿ ಹೂಡುವಳಿ ತೆರಿಗೆ ಪಡೆದು ವಂಚಿಸುತ್ತಿದ್ದ ಜಾಲದ ಪತ್ತೆ ಹಾಗೂ ಲೆಕ್ಕಪರಿಶೋಧಕನ ಬಂಧನ

0
16

ಬೆಂಗಳೂರು: ರಾಜ್ಯದ ವಾಣಿಜ್ಯ ತೆರಿಗೆಗಳ ಇಲಾಖೆಯ ದಕ್ಷಿಣ ವಲಯ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಜಿ.ಎಸ್.ಟಿ. ಲೆಕ್ಕಪರಿಶೋಧಕರೊಬ್ಬರ ವ್ಯವಹಾರ ಸ್ಥಳ ಹಾಗೂ ನಿವಾಸದ ಮೇಲೆ ದಾಳಿ ಮಾಡಿ, ಅವರು ನಡೆಸುತ್ತಿದ್ದ ನಕಲಿ ಹೂಡುವಳಿ ತೆರಿಗೆಯ ಜಾಲವನ್ನು ಪತ್ತೆ ಹಚ್ಚಲಾಗಿದೆ.

ಲೆಕ್ಕಪರಿಶೋಧಕರು ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ ನೊಂದಣಿಯಾದ ತೆರಿಗೆದಾರರಿಂದ ಅವರು ಪಾವತಿಸಬೇಕಾದ ತೆರಿಗೆ ಮೊತ್ತವನ್ನು ಪಡೆದು, ಅದನ್ನು ಅವರ ತೆರಿಗೆ ಬಾಧ್ಯತೆಗೆ ಪಾವತಿ ಮಾಡದೇ, ನಕಲಿ ಹೂಡುವಳಿ ತೆರಿಗೆ ಮೂಲಕ ಸಂದಾಯ ಮಾಡಿ ವಂಚಿಸಿ, ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟು ಮಾಡಿರುತ್ತಾರೆ.  ಇಲಾಖಾ ಅಧಿಕಾರಿಗಳು ಹೆಚ್ಚುವರಿ ಹೂಡುವಳಿ ತೆರಿಗೆ ಕ್ಲೇಮು ಮಾಡಿರುವ ಪ್ರಕರಣಗಳ ಪರಿಶೀಲನೆ ಮಾಡುತ್ತಿದ್ದ ಸಮಯದಲ್ಲಿ ಈ ಪ್ರಕರಣವು ಬೆಳಕಿಗೆ ಬಂದಿರುತ್ತದೆ.

Contact Your\'s Advertisement; 9902492681

ಇದನ್ನೂ ಓದಿ: ಸಂಸದ ಡಾ.ಉಮೇಶ ಜಾಧವ್‌ಗೆ ಗಡುವು

ಕ್ಷೇತ್ರ ಗುಪ್ತಚರ ಮಾಹಿತಿ ಹಾಗೂ ಇಲಾಖೆಯ ತಂತ್ರಾಂಶದಲ್ಲಿ ಲಭ್ಯವಿರುವ ವಿವರಗಳು ಈ ಪ್ರಕರಣವನ್ನು ಭೇದಿಸುವಲ್ಲಿ ಸಹಕಾರಿಯಾಗಿದ್ದು, ಈ ಲೆಕ್ಕಪರಿಶೋಧಕರು ಇದೇ ರೀತಿ ಸುಮಾರು 12 ಪ್ರಕರಣಗಳಲ್ಲಿ ತೆರಿಗೆದಾರರನ್ನು ವಂಚಿಸಿ ಸುಮಾರು ರೂ.10 ಕೋಟಿಗಳಷ್ಟು ನಕಲಿ ಹೆಚ್ಚುವರಿ ಹೂಡುವಳಿ ತೆರಿಗೆಯನ್ನು ಪಡೆದಿರುವುದು ಕಂಡುಬಂದಿರುತ್ತದೆ.  ಈ ಪೈಕಿ ಇಲಾಖಾ ಅಧಿಕಾರಿಗಳು ಇದುವರೆವಿಗೂ ರೂ. 5.31 ಕೋಟಿಗಳಷ್ಟು ಮೊತ್ತವನ್ನು ವಸೂಲು ಮಾಡುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣದ ತನಿಖೆಯು ಮುಂದುವರೆದಿರುತ್ತದೆ.

ಈ ಪ್ರಕರಣದ ಪರಿಣಾಮವಾಗಿ ಕೆಲವು ಬಾದಿತ ತೆರಿಗೆದಾರರು ಬೆಂಗಳೂರಿನಾದ್ಯಂತ ಆರಕ್ಷಕ ಠಾಣೆಗಳಲ್ಲಿ ಅನೇಕ ದೂರುಗಳನ್ನು ಸಲ್ಲಿಸಿದ್ದು, ತತ್ಪರಿಣಾಮವಾಗಿ ಪೋಲೀಸರು ಸದರಿ ಲೆಕ್ಕಪರಿಶೋಧಕರನ್ನು ಬಂಧಿಸಿ ವಶಕ್ಕೆ ಪಡೆದಿರುತ್ತಾರೆ.

ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ನೇ ಸಂಸ್ಥಾಪನಾ ದಿನಾಚರಣೆ

ಆದ್ದರಿಂದ ತೆರಿಗೆದಾರರು ತಮ್ಮ ತೆರಿಗೆ ಬಾಧ್ಯತೆಯನ್ನು ಮೂರನೇ ವ್ಯಕ್ತಿಗಳ ಮೂಲಕ ಮಾಡುವ ಸಂದರ್ಭಗಳಲ್ಲಿ ಸಾಕಷ್ಟು ಜಾಗರೂಕರಾಗಿ ವ್ಯವಹರಿಸಬೇಕೆಂದು ಹಾಗೂ ಈ ಬಗ್ಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಇಲಾಖೆಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿಗಳಲ್ಲಿ ಲಭ್ಯವಿರುವ ಸಹಾಯ ಪೀಠಗಳ ಸೇವೆಯನ್ನು ಪಡೆಯಬೇಕೆಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here