ಕಲಬುರಗಿ: ಪಿಎಸ್‌ಐ ಹಗರಣ ಮುಚ್ಚಿ ಹಾಕಲು ಮಧ್ಯ ರಾತ್ರಿ ಕಲಬುರಗಿ ಕಡೆ ಬಂದ ಗೃಹ ಸಚಿವ ಅರಗಜ್ಞಾನೆಂದ್ರ ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ನೇತೃತ್ವದಲ್ಲಿ ಕಾರಿಗೆ ಮುತ್ತಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡುವ ಮೂಲಕ ಕೆಟ್ಟ ಸರ್ಕಾರದ ಅವಧಿಯಲ್ಲಿ ಭೃಷ್ಟಚಾರ ದಲ್ಲಿ ತೊಡಗಿದವರಿಗೆ ರಕ್ಷಣೆ ಮಾಡುವ ಸರ್ಕಾರದ ಧೋರಣೆ ಖಂಡಿಸಿ ಗೃಹ ಸಚಿವರಿಗೆ ಕಪ್ಪು ಬಾವುಟ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್ಐ ಹಗರಣ ಬೈಲಿಗೆ ತಂದ ಮಾಜಿ ಸಚಿವರು ಕೆಪಿಸಿಸಿ ವಕ್ತಾರರು ಶಾಸಕರಾದ ಪ್ರಿಯಾಂಕ್ ಖರ್ಗೆ ರವರಿಗೆ ನೊಟೀಸ್ ನೀಡುವ ಮೂಲಕ ಸರ್ಕಾರ ತನ್ನ ಭೃಷ್ಟಚಾರ ಮುಚ್ಚಿ ಹಾಕಲು ಪ್ರಯತ್ನ ಮಾಡಿದ್ದಾರೆ. ಇದನ್ನು ಖಂಡಿಸಿ ನಗರದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡುವ ಮೂಲಕ ಗೃಹ ಸಚಿವರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈರಣ್ಣ ಪಾಟೀಲ್ ಝಳಕಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ, ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ಪಾಟೀಲ್ ಸರಡಗಿ, ದಕ್ಷೀಣ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಪರಶುರಾಮ ನಾಟಿಕಾರ್, ಪಾಲಿಕೆ ಸದಸ್ಯೆ ರೇಣುಕಾ ಹೋಳಕರ್, ಮುಖಂಡರಾದ ಅಮರ್ ಶಿರವಾಳ, ಅಶೋಕ ಕಪನೂರ, ಗೌತಂ, ಮಹಿಂದ್ರ ನಾಯ್ಡು, ಸಂತೋಷ ಯಾದವ್, ವಿಘ್ನೇಶ, ಕುಮಾರ್, ಗೀತಾ ಮುದುಗಲ್, ಶರಣು ಕಲಶೆಟ್ಟಿ, ಮಂಜುಳಾ ಪಾಟೀಲ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.