18 ಜನ ಸಾಹಿತಿಗಳಿಗೆ ಬಸವ ಪುರಸ್ಕಾರ

0
148

ಕಲಬುರಗಿ: 12 ನೇ ಶತಮಾನದಲ್ಲಿ ಅಶಾಂತಿ ಅಧರ್ಮ, ಮೌಢ್ಯತೆ, ಕಂದಾಚಾರಗಳು ವಿಜೃಂಭಿಸುತ್ತಿದ್ದವು ಆಗ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಶರಣ ರನ್ನು ಒಂದು ಗೂಡಿಸಿ ಸಮ ಸಮಾಜದ ನಿರ್ಮಾಣ ಮಾಡಿದರು ಎಂದರು.

ಇಂದು ಬಸವ ಪುರಸ್ಕಾರ ಪಡೆದ 18 ಸಾಹಿತಿಗಳಿಗೆ ಜವಾಬ್ದಾರಿ ಹೆಚ್ಚಿಸಿದೆ ಪ್ರತಿಭೆಗಳನ್ನು ಅರಿಸಿಕೊಂಡು ಹೋಗಬೇಕು ಆಗ ಮಾತ್ರ ಪ್ರಶಸ್ತಿಗಳ ಮೌಲ್ಯ ಹೆಚ್ಚುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ ದಯಾನಂದ್ ಅಗಸರ್ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯ ಪಾಳಾ ಗ್ರಾಮದ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ 4ನೇ ವರ್ಷದ ಬಸವ ಜಯಂತಿ ಪ್ರಯುಕ್ತ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ 18 ಜನ ಸಾಹಿತಿಗಳಿಗೆ 2022ನೇ ಸಾಲಿನ ರಾಜ್ಯಮಟ್ಟದ ಬಸವ ಪ್ರಶಸ್ತಿ ಪುರಸ್ಕಾರ ಪ್ರಧಾನ ಸಂದರ್ಭದಲ್ಲಿ ಚಿಗರಹಳ್ಳಿ ಮರುಳಸಿದ್ದೇಶ್ವರ ದೇವರ ಗುರುಪೀಠದ ಸಿದ್ಧಬಸವ ಕಬೀರ ಮಹಾ ಸ್ವಾಮಿಗಳು ಮಾತನಾಡುತ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿವೆ . ಮೌಲ್ಯಗಳನ್ನು ರೂಪಿಸಲು ಬಸವ ಪುರಸ್ಕಾರದ ಮೂಲಕ ಶರಣಗೌಡ ಪಾಟೀಲ ಪಾಳಾ ಅವರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಗ್ರಂಥಗಳು ಮಾನವನ ವಿಕಾಸಕ್ಕೆ ದಾರಿ ದೀಪಗಳು ಇದ್ದಂತೆ ಒಬ್ಬ ಲೇಖಕ ಎಷ್ಟು ಕೃತಿಗಳು ರಚಿಸಿದ ಎನ್ನುವುದಕ್ಕಿಂತಲೂ ಎಷ್ಟು ಗಟ್ಟಿತನ ಸಾಹಿತ್ಯ ನೀಡಿದ್ದಾನೆ ಎಂಬುವುದು ಮುಖ್ಯ ಎಂದು ಸಾರ್ವಜನಿಕ ಇಲಾಖೆ ಗ್ರಂಥಾಲಯ ನಿರ್ದೇಶಕ ಡಾ ಸತೀಶ್ ಕುಮಾರ್ ಹೊಸಮನಿ ಹೇಳಿದರು.

ಪ್ರಶಸ್ತಿ ಪುರಸ್ಕೃತರು: ಸತೀಶಕುಮಾರ ಹೊಸಮನಿ (ಕಾವ್ಯಧಾರೆ), ಬಸವರಾಜ ಪೊಲೀಸ್ ಪಾಟೀಲ್ (ಜಾನಪದ ಸಂಪದ), ಶಿವಕವಿ ಹಿರೇಮಠ ಜೋಗೂರು (ಮಹಾತಪಸ್ವಿ), ಡಾ. ಕೆ.ವಿ. ರಾಜೇಶ್ವರಿ (ಅಪರೂಪದ ರಾಜಕಾರಣಿರಿ-ಲಾಲ್ ಬಹಾದ್ದೂರ ಶಾಸ್ತ್ರೀ), ಬಸವರಾಜ ಕಡ್ಡಿ (ಅರಿವಿನ ಬೆಳಕು), ಕಾವ್ಯಶ್ರೀ ಮಹಾಗಾಂವಕರ್ (ಬಟ್ಟೆಯೊಳಗಿನ ಚಿತ್ತಾರ), ಶೈಲಜಾ ಎನ್. ಬಾಗೇವಾಡಿ (ಅಂತರಂಗದ ಅಕ್ಷರ ಲೋಕ), ತಯಬಲಿ ಹೊಂಬಳ (101ಮಕ್ಕಳ ಕಥೆಗಳು-3), ಶಿವಪುತ್ರ ಕಂಠಿ ಚಿಂಚನಸೂರ್‌ (ಶರಣರ ಜೀವನ ದರ್ಶನ ಮತ್ತು ವಚನಾಂತರಾಳ), ಸಹನಾ ಕಾಂತಬೈಲು (ಇದು ಬರೀ ಮಣ್ಣಲ್ಲ), ಸಂಗಮೇಶ ಉಪಾಸೆ (ದೇವರುಗಳಿವೆ ಎಚ್ಚರಿಕೆ), ಸನಾವುಲ್ಲಾ ನವಿಲೆಹಾಳು (ಪಂಜು), ಬನ್ನಪ್ಪ ಬಿ.ಕೆ. (ನೈತಿಕ ಶಿಕ್ಷಣ), ಮಧುರಾ ಮೂರ್ತಿ (ಮಧುರ ಗಝಲ್), ಅನನ್ಯ ತುಷಿರಾ (ಅರ್ಧ ನೆನಪು ಅರ್ಧ ಕನಸು) ಮಕರಂದ ಮನೋಜ್ (ಮನೋಜ್ಞ ಹೈಕುಗಳು),ಸಂಕಲ್ಪ (ಅನಂದ ಪುಷ್ಪ)

ಗುಲಬರ್ಗಾ ವಿಶ್ವವಿದ್ಯಾಲಯದ ಡೀನ್ (ಕಲಾನಿಕಾಯ) ಪ್ರೊ. ರಮೇಶ ರಾಠೋಡ್ ಅಧ್ಯಕ್ಷತೆವಹಿಸಿದ್ದರು. ಗುಲಬರ್ಗಾ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯ ರಾಜೇಂದ್ರ ಕಗ್ಗನಮಡಿ ಅತಿಥಿಗಳಾಗಿದ್ದರು. ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ, ಪಾಳಾ ಅವರು ಸ್ವಾಗತಿಸಿದರು, ಬಿ ಎಚ್ ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು ಡಾ ಶರಣಬಸವ ವಡ್ಡಕೇರಿ ನಿರೂಪಿಸಿದರು. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಡಾ. ಶಿವಶಂಕರ ಬಿರಾದಾರ, ಹಾಗೂ ಕಿರಣ್ ಪಾಟೀಲ ಅವರ ತಂಡದಿಂದ ಜರುಗಿದ ವಚನಗಳ ಗಾಯನ ಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಡಾ ವಿಜಯಕುಮಾರ್ ಪರುತೆ, ಡಾ ಆನಂದ್ ಸಿದ್ದ ಮಣಿ, ಸಂತೋಷ್ ತೊಟ್ನಳ್ಳಿ, ಮಂಗಲಾ ಕಪರೆ, ನಾಗರಾಜ್ ಕಲ್ಲಾ, ಜಗದೀಶ್ ಪಾಟೀಲ್ ಸಣ್ಣೂರ, ಡಾ ಚಿ ಸಿ ನಿಂಗಣ್ಣ, ಸುರೇಶ ಬಡಗೇರ,ಡಾ ಶಿವರಂಜನ್ ಸತ್ಯಂಪೇಟೆ, ಪ್ರೊ ಬಿ ಅರ್ ಅಣ್ಣಾ ಸಾಗರ್,ಬಿಎ ಮಾಲಿಪಾಟೀಲ, ಬಿ ಆರ್ ಪಾಟೀಲ ಎಮ್ ಮಠಪತಿ, ಲವಕುಸ, ಬನ್ನೂರ, ಪೊಲೀಸ್ ಪಾಟೀಲ್, ಮಾಲಿಪಾಟೀಲ್ ಆಲೂರ್ ಖೇಣಿ, ಡಾ ಸಂಗಮೇಶ ಹಿರೇಮಠ್ ಮುಂತಾದವರು ಉಪಸ್ಥಿತಿ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here