ಕಲಬರುಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬರುಗಿ ಮಹಾನಗರದ ಗಾಜೀಪೂರ ಬಡಾವಣೆಯಲ್ಲಿ ಜೀರ್ಣೋದ್ಧಾರವಾದ ನೂತನ ಜಿನ ಮಂದಿರದಲ್ಲಿ ಶ್ರೀ ಮದ್ ದೇವಾದಿದೇವ ಶ್ರೀ 1008 ಭಗವಾನ್ ಅದಿನಾಥ ತೀರ್ಥಂಕರ ಪಂಚ ಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ನೂತನ ಶಿಖರಸ್ಥ ಶ್ರೀ 1008 ಭಗವಾನ್ ಪಾರ್ಶ್ವನಾಥ ತೀರ್ಥಂಕರ ಜಿನಬಿಂಬ ವೇದಿ ಪ್ರತಿಷ್ಠಾ ಹಾಗೂ ವಿಶ್ವ ಶಾಂತಿ ಮಹಾಯಾಗ ಸಮಾರಂಭ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಾಳೆ 9 ರಿಂದ 13ರ ತನಕ ಐದು ದಿನಗಳ ಧಾರ್ಮಿಕ ಕಾರ್ಯಕ್ರಮ ಜೀರ್ಣೋದ್ಧಾರ ಶಿರೋಮಣಿ ಶ್ರೀ 108 ಶೃತು ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಜರುಗಲಿದೆ ಎಂದು ಪಂಚ ಕಲ್ಯಾಣ ಸಮಿತಿ ವತಿಯಿಂದ ವೈಭವದಿಂದ ಜರುಗಲಿದೆ ಎಂದು ದೇವಾಲಯ ಟ್ರಸ್ಟ ಅಧ್ಯಕ್ಷರಾದ ನಾಗನಾಥ ಚಿಂದೆ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಸುರೇಶ ತಂಗಾ ತಿಳಿಸಿದ್ದಾರೆ.
ಟ್ವೀಟರ್ ನಲ್ಲಿ ಟ್ರೆಂಡ್ ಆದ ಅಮೃತ್ ನೋನಿ ಕಿರುಚಿತ್ರ
ಈ ಕುರಿತು ಹೇಳಿಕೆ ನೀಡಿರುವ ತಂಗಾ ಅವರು ಎರಡು ದಶಕಗಳ ನಂತರ ಕಲಬರುಗಿ ಮಹಾನಗರದಲ್ಲಿ ಜೈನ್ ಸಮುದಾಯದ ಅತ್ಯಂತ ಧಾರ್ಮಿಕ ಕಾರ್ಯಕ್ರಮ ಜರುಗುತ್ತಿದ್ದು ಪಂಚ ಕಲ್ಯಾಣ ಯಶಸ್ವಿಗೊಳಿಸಲು ಕಲ್ಯಾಣ ಕರ್ನಾಟಕ ಪ್ರೇದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರುರಾಗಿರುವ ಕಲಬರುಗಿ ದಕ್ಷಿಣ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಶ್ರೀ ದತ್ತಾತ್ರೇಯ ಸಿ ಪಾಟೀಲ ರೇವೂರ ಅವರ ನೇತೃತ್ವದಲ್ಲಿ ಅನೇಕ ಕಾರ್ಯಗಳು ಭರದಿಂದ ನಡೆದಿದ್ದು ರಾಜ್ಯ ಹಾಗೂ ರಾಷ್ಟ್ರದ ವಿವಿಧಡೆಯಿಂದ ಸಾವಿರಾರು ಜೈನ ಶ್ರಾವಕ ಶ್ರಾವಕಿಯರು ಭಾಗವಹಿಸಲಿದ್ದಾರೆ.