ಕಲಬುರಗಿ: 12 ಮೇ ಶುಶ್ರೂಷಕರ ಮಹಾತಾಯಿ ಫ್ಲಾರೆನ್ಸ್ ನೈಟಿಂಗಲ್ ಇವರ ಜನ್ಮ ದಿನದ ನಿಮಿತ್ಯ ಜಿಮ್ಸ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಸರಕಾರಿ ಶುಶ್ರೂಷಾ ಅಧಿಕಾರಿಗಳ ಸಂಘ ಹಾಗೂ ಸರಕಾರಿ ವೈದ್ಯಕೀಯ ಶಿಕ್ಷಣ ಶುಶ್ರೂಷಾ ಅಧಿಕಾರಿಗಳ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಜಿಮ್ಸ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ Dr ಉಮೇಶ್ ಎಸ್. ಆರ್. ಇವರು ಮಾತನಾಡಿ ಶುಶ್ರೂಷಾ ವೃತ್ತಿ ವಿಶ್ವದ ಪ್ರತಿಷ್ಠಿತ ನೊಬೆಲ್ ವೃತ್ತಿಯಾಗಿದ್ದು, ತಾವು ಹೃದಯ ತುಂಬಿ ಮನ ತುಂಬಿ ನೀಡಿದ ಸೇವೆಯಿಂದ ಮಾತ್ರ ಈ ವೃತ್ತಿಗೆ ನೊಬೆಲ್ ವೃತ್ತಿ ಎಂದು ವಿಶ್ವ ಗುರುತಿಸಿದೆ. ಕಳೆದ ಕೋವಿಡ್ ಅವಧಿಯಲ್ಲಿ ತಮ್ಮ ಸೇವೆ ವಿಶ್ವವೇ ಮೆಚ್ಚಿಕೊಂಡಿದೆ ಎಂದರು.
ಮುಖ್ಯ ಅತಿಥಿಗಳದ ಜಿಮ್ ವೈದ್ಯಕೀಯ ಅಧೀಕ್ಷಕರಾದ Dr. ಮೊಹಮ್ಮದ್ ಶಫಿಯುದ್ದಿನ್ ಮಾತನಾಡಿ ನೈಟಿಂಗೇಲ್ ತೋರಿಸಿದ ತತ್ವದಲ್ಲಿ ಮಾರ್ಗದಲ್ಲಿ ನಡೆದರೆ ನಿಮ್ಮ ಸೇವೆ ಸಾರ್ಥಕ ಆಗುತ್ತದೆ ಎಂದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು Dr. ಏ. ಎಸ್. ರುದ್ರವಾಡಿ ಮಾತನಾಡಿ. ಆಸ್ಪತ್ರೆಯಲ್ಲಿ ಶುಶ್ರೂಷಾ ಅಧಿಕಾರಿಗಳು ಮಾಡುವ ಸೇವೆಯಿಂದಲೆ ಆಸ್ಪತ್ರೆಗೆ ಒಳ್ಳೆಯ ಹೆಸರು ಬರುತ್ತದೆ. ವೈದ್ಯರಾದವರು ರೋಗಿಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವಂತೆ ಸಲಹೆ ಕೊಡುತ್ತಾರೆ ಆದರೆ ನೀವುಗಳು ರೋಗಿಯ ಹತ್ತಿರ 24 ಗಂಟೆ ಇದ್ದು ಅವರ ಸೇವೆಗೆ ಮುಂಡಾಗುತ್ತೀರಿ ಇದು ವೈದ್ಯರಿಗಿಂತಲೂ ಹೆಚ್ಚು ಸೇವೆ ನಿಮ್ಮದಾಗುತ್ತದೆ ಎಂದರು… ಶುಶ್ರೂಷಾ ಅಧಿಕಾರಿಗಳಿಗೆ ಸಿಗಬೇಕಾದ ಸೌಲಭ್ಯಗಳು ಸರಕಾರದಿಂದ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಾವು ಮಾಡುತ್ತೇವೆ ಎಂದರು.
RMO Dr ರಾಜಶೇಖರ ಮಾಲಿ ಮಾತನಾಡಿದರು, ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ನಾಗರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನರ್ಸಿಂಗ್ ಶಾಲೆಯ ಪ್ರಾಂಶುಪಾಲರಾದ ವಸಂತಮ್ಮ ಇವರು ನೈಟಿಂಗೇಲ್ ಪ್ಲೆಡ್ಜ್ ಹೇಳಿದರು. ಸಭೆಯಲ್ಲಿದ್ದ ಸಭಿಕರೆಲ್ಲರೋ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷತೆ ಶುಶ್ರೂಷಾ ಅಧೀಕ್ಷರಾದ ಈಶ್ವರಿಬಾಯಿ ವಹಿಸಿದ್ದರು, ಅಶೋಕ ಗುತ್ತೇದಾರ್, ಚಂಪಾಬಾಯಿ, ಶ್ರೀಪಾದ ವೇದಿಕೆ ಮೇಲಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಕಾಂತ ಫುಲಾರಿ ಇವರು ನಡೆಸಿಕೊಟ್ಟರು.
ಪ್ರಾರ್ಥನೆ ಮಿಲಿಂಡಕುಮಾರ ಇವರು ನಡೆಸಿಕೊಟ್ಟರು ಆನಂದಕುಮಾರ್ ದುಮ್ಮನಸೂರ್ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸುಭದ್ರಮ್ಮ, ಈರಮ್ಮ ಶಿಂದೆ, ಮೋಹಿನಿ, ಪ್ರತಿಮಾ, ರವೀಂದ್ರನಾಥ್, ಮೌಲಾಸಾಬ್, ಸ್ವರೂಪರಾನಿ, ಫಕೀರಪ್ಪ, ಮೊಹಮ್ಮದ್ ಖಾಜಾ, ಸಂಕೇತ್ ಸೂರ್ಯವಂಶಿ, ದಿವ್ಯಾ ಈ, ಶಿವಕುಮಾರ ಕಲ್ಲೂರ ಮುಂತಾದ ಪದಾಧಿಕಾರಿಗಳು ಹಾಜರಿದ್ದರು.