ಓಡನಾಡಿ ಸೇವಾ ಸಂಸ್ಥೆ ( ಒಡನಾಡಿ ಸೇವಾ ಟ್ರಸ್ಟ್ ) ಮೈಸೂರು ಮೂಲದ ಸಾಮಾಜಿಕ, ಸರ್ಕಾರೇತರ ಸಂಸ್ಥೆಯಾಗಿದ್ದಾಗಿದೆ. ‘ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆ’ಗೆ ಒಳಗಾದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ಪುನರ್ವಸತಿ, ಮರುಸಂಘಟನೆ ಮತ್ತು ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ.
1984 ರಲ್ಲಿ ಕೆ.ವಿ.ಸ್ಟಾನ್ಲಿ ಮತ್ತು ಎಂ.ಎಲ್.ಪರಶುರಾಮ್ ಈ ಸಂಘಟನೆಯನ್ನು ಸ್ಥಾಪಿಸಿದರು. ಅಲ್ಲದೇ ಮತ್ತು 1993 ರಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡರು. ಅವರ ರಕ್ಷಣಾ ಕಾರ್ಯಾಚರಣೆಗಳು ದಕ್ಷಿಣ ಭಾರತವನ್ನು ಒಳಗೊಂಡಿದೆ.
ಪುನರ್ವಸತಿ ಕೇಂದ್ರವನ್ನು ಕರ್ನಾಟಕದ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ..!
ಸ್ಟಾನ್ಲಿ ಮತ್ತು ಪರಶುರಾಮ ಅವರು ಜನಪ್ರಿಯವಾಗಿ ತಿಳಿದಿರುವಂತೆ, ಸರ್ಕಾರಿ ಅಧಿಕಾರಿಗಳು ಮತ್ತು ಸಂಪೂರ್ಣ ಸಾಕ್ಷರತಾ ಯೋಜನೆಯ ಜಿಲ್ಲಾ ಸಂಯೋಜಕರಾಗಿದ್ದವರು, ಅವರು ಮೈಸೂರು ಜಿಲ್ಲೆಯ ಗ್ರಾಮಸ್ಥರೊಂದಿಗೆ ಸಂವಾದ ನಡೆಸುವಾಗ, ಲೈಂಗಿಕ ಕಾರ್ಯಕರ್ತೆಯರಾದ ಕಾರಣ ನಿರ್ಲಕ್ಷಿಸಲ್ಪಟ್ಟ ಮತ್ತು ದೂರವಿಡಲ್ಪಟ್ಟ ಮಹಿಳೆಯರನ್ನು ಕಂಡರು ಅವರು. ಇದರಿಂದ ಕೆಲಸ ಬಿಟ್ಟು ‘ಒಡನಾಡಿ ಸೇವಾ ಸಂಸ್ಥೆ’ ಕಟ್ಟಿದರು.
ಅದರ ಸ್ಥಾಪನೆಯ ನಂತರ, ‘ಒಡನಾಡಿ ಸೇವಾ ಸಮಸ್ಥೆ’ಯು ಹತ್ತಾರು ರಕ್ಷಣಾ ಕಾರ್ಯಾಚರಣೆಗಳನ್ನು ಆಯೋಜಿಸಿದೆ ಇಲ್ಲಿಯವರೆಗೆ. ಮತ್ತು ಕೈಗೊಳ್ಳುತ್ತಿದೆ,ಇದು ಲೈಂಗಿಕ ಕಾರ್ಯಕರ್ತರ ಸಕ್ರಿಯ ಒಳಗೊಳ್ಳುವಿಕೆಯಿಂದ ಪ್ರೇರೇಪಿಸಲ್ಪಟ್ಟಿದೆ. ಕರ್ನಾಟಕ ರಾಜ್ಯ ಮತ್ತು ಸುತ್ತಮುತ್ತಲಿನ ಈ ವರೆಗೂ 400 ಕ್ಕೂ ಹೆಚ್ಚು ಹುಡುಗಿಯರನ್ನು ರಕ್ಷಿಸಲಾಗಿದೆ, ಅಲ್ಲದೇ ಮತ್ತು ಈ ದಟ್ಟಣೆಯ ದುಷ್ಕರ್ಮಿಗಳನ್ನು ಕಾನೂನು ಕ್ರಮಕ್ಕೆ ತರಲಾಗಿದೆ.
ಒಡನಾಡಿ ಟ್ರಸ್ಟ್ ಪ್ರಸ್ತುತವಾಗಿ ನೂರಾರು ರಕ್ಷಿಸಲ್ಪಟ್ಟ ಮಕ್ಕಳನ್ನು ಹೊಂದಿದೆ. ಲೈಂಗಿಕ-ವ್ಯಾಪಾರದ ಹಿಡಿತದಿಂದ ಅವರನ್ನು ರಕ್ಷಿಸುವ ಉದ್ದೇಶದಿಂದ.
ಒಂದು ಕಾಲದಲ್ಲಿ ವ್ಯಾಪಾರದ ಭಾಗವಾಗಿದ್ದ (22 ಕ್ಕಿಂತ ಹೆಚ್ಚು) ಮಹಿಳೆಯರನ್ನು ಹೊಂದುವಲ್ಲಿ ಅವರು ಯಶಸ್ವಿಯಾಗಿದ್ದಾರೆ, ಮದುವೆಯಾಗಿ ನೆಲೆಸಿದ್ದಾರೆ ಕೂಡ ಈಗ..!
ಕಾರ್ಯಕ್ರಮದ ಗುರಿಗಳು ಅದರ ನಿವಾಸಿಗಳಿಗೆ ಆಶ್ರಯ, ಆಹಾರ, ಶಿಕ್ಷಣ, ವೃತ್ತಿಪರ ತರಬೇತಿ, ಆರೋಗ್ಯ ರಕ್ಷಣೆ ಮತ್ತು ಸಮಾಲೋಚನೆಗಳನ್ನು ಒದಗಿಸುವುದು ಮತ್ತು ಕಳ್ಳಸಾಗಣೆ –ವಿರೋಧಿಗೆ ಸಂಬಂಧಿಸಿದ ನೀತಿ ರಚನೆಯ ಮೇಲೆ ಜಾಗೃತಿ ಮೂಡಿಸುವುದು ಮತ್ತು ಪ್ರಭಾವ ಬೀರುವುದು.
ಸಂಸ್ಥಾಪಕರು ಮತ್ತು ಅವರ ತಂಡವು ಮಾಂಸದ ವ್ಯಾಪಾರದ ಮಹಿಳೆಯರಿಗೆ ಸಂಬಂಧಿಸಿದ ಕಳಂಕವನ್ನು ನಿರ್ಮೂಲನೆ ಮಾಡಲು ವಿನ್ಯಾಸಗೊಳಿಸಲಾದ ಜಾಗೃತಿ ಕಾರ್ಯಕ್ರಮಗಳನ್ನೂ ಸಹ ಹೊಂದಿದೆ. ಟ್ರಸ್ಟ್ ತನ್ನ ನಿವಾಸಿಗಳಿಗೆ ಸಾಂಸ್ಕೃತಿಕ ಕ್ಯಾಪ್ಸುಲ್‌ಗಳು, ಧ್ಯಾನ, ಮನರಂಜನೆ, ಗುಂಪು ಚಟುವಟಿಕೆಗಳು ಮತ್ತು ತರಬೇತಿ ಸೇರಿದಂತೆ ‘ನೈತಿಕ’ ಮೂಲಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹಲವಾರು ಚಟುವಟಿಕೆಗಳನ್ನು ನಡೆಸುತ್ತದೆ..!
‘ಒಡನಾಡಿ ಸೇವಾ ಸಂಸ್ಥೆಯು’ ಸಮಸ್ಥೆಯ ಚಟುವಟಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗುರುತಿಸಿವೆ.
ವೇಶ್ಯಾವಾಟಿಕೆಯಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಪುನರ್ವಸತಿಗಾಗಿ ಕರ್ನಾಟಕ ಸರ್ಕಾರವು ಮೈಸೂರಿನಲ್ಲಿ ಎರಡು ನಿವೇಶನಗಳನ್ನು ಮಂಜೂರು ಮಾಡಿದೆ. ಇತರ ರಾಜ್ಯ ಸರ್ಕಾರಗಳು ( ಮಹಾರಾಷ್ಟ್ರ, ದೆಹಲಿ , ಪಶ್ಚಿಮ ಬಂಗಾಳ ) ರಕ್ಷಿಸಲ್ಪಟ್ಟ ಹುಡುಗಿಯರನ್ನು ಅವರ ಪುನರ್ವಸತಿಗೆ ಅನುಕೂಲವಾಗುವಂತೆ ‘ಓಡನಾಡಿ’ಗೆ ಕಳುಹಿಸುತ್ತಿವೆ.
ಒಡನಾಡಿಯು ಎನ್.ಜಿ.ಓ.ಗಳು ಮತ್ತು ಎ.ಐ.ಡಿ. (ಅಸೋಸಿಯೇಷನ್ ಫಾರ್ ಇಂಡಿಯಾಸ್ ಡೆವಲಪ್‌ಮೆಂಟ್), ಆಶಾ ಫಾರ್ ಎಜುಕೇಶನ್ ಮತ್ತು ಪ್ರಥಮನಂತಹ ಲಾಭೋದ್ದೇಶವಿಲ್ಲದ ಸಂಸ್ಥೆಗಳಿಂದ ಸತತವಾಗಿ ಬೆಂಬಲವನ್ನು ಪಡೆದಿದೆ.
ಆಶಾ ಫಾರ್ ಎಜುಕೇಶನ್ ‘ಸಪೋರ್ಟ್ ಎ ಚೈಲ್ಡ್’ ಎಂಬ ಶೀರ್ಷಿಕೆಯ ಕಾರ್ಯಕ್ರಮವನ್ನು ನಡೆಸುತ್ತದೆ. ಅಲ್ಲಿ ದಾನಿಗಳು ಮಗುವನ್ನು ಬೆಂಬಲಿಸಲು ಆಯ್ಕೆ ಮಾಡುತ್ತಾರೆ. ಆ ಮಗುವಿನ ಪ್ರಗತಿಯನ್ನು ಟ್ರ್ಯಾಕ್ ಮಾಡುತ್ತಾರೆ ಮತ್ತು ಪತ್ರಗಳ ಮೂಲಕ ಸಂವಹನ ನಡೆಸುತ್ತಾರೆ. ಈ ಕಾರ್ಯಕ್ರಮಕ್ಕೆ ‘ಒಡನಾಡಿ’ ಮಕ್ಕಳಿಗೆ ಸಾಕಷ್ಟು ಬೆಂಬಲ ಸಿಕ್ಕಿದ್ದೆ. ಮತ್ತೂ ಸಿಕ್ಕುತ್ತಿದೆ.
ಒಕ್ಕಲಿಗರ ಸಹಭಾಗಿತ್ವದಲ್ಲಿ ಮುಂದುವರಿದಿದೆ. ಸೋಮವಾರಪೇಟೆಯ ಸಂದೀಪನಿ ವಿದ್ಯಾ ಪೀಠದ ಜೊತೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುವಲ್ಲಿ ಟ್ರಸ್ಟ್ ಭಾಗವಹಿಸಿದೆ..!
# ‘ಬಯಲಾಗುವ ಮನುಷ್ಯತ್ವದ ಬಂಡವಾಳ’ವೂ ಆಗಿದೆ ಈ ಕೃತಿಯೂ..! —
ಬಯಲಾಗುವ ಮನುಷ್ಯತ್ವದ ಬಂಡವಾಳ
‘ಒಡನಾಡಿಯ ಒಡಲಾಳ’ ಎಂಬುದು ಮನುಷ್ಯತ್ವದ ಬಂಡವಾಳ ಬಯಲು ಮಾಡುವ ಕೃತಿ.
ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ–ಪರಶುರಾಮ್ ಅವರ ಹೋರಾಟದ ಕತೆಗಳು ಇದರಲ್ಲಿ ಇವೆ. ಹಣ ಗಳಿಸುವುದಕ್ಕಾಗಿ ಮನುಷ್ಯ ಯಾವ ಮಟ್ಟಕ್ಕೂ ಇಳಿಯುತ್ತಾನೆ ಎನ್ನುವುದನ್ನು ಪುರಾವೆ ಸಹಿತ ಈ ಕೃತಿ ಬಹಿರಂಗಪಡಿಸುತ್ತದೆ. ಒಂದೊಂದು ಕತೆಯನ್ನು ಓದಿ ಮುಗಿಸಿದ ನಂತರವೂ ಸಾಮಾಜಿಕ ವ್ಯವಸ್ಥೆಯ ಬಗೆಗೆ, ಪುರುಷನ ಕ್ರೌರ್ಯದ ಬಗ್ಗೆ ಸಿಟ್ಟು ಉಕ್ಕುತ್ತದೆ.
ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿ ಇರುವಂತೆ ಕಾಣುವ ಸಮಾಜ ತೆರೆಯ ಹಿಂದೆಯೇ ಎಷ್ಟೊಂದು ಹುಳುಕುಗಳನ್ನು ಹೊತ್ತುಕೊಂಡಿದೆ, ಭೀಕರವಾಗಿದೆ, ಅಮಾನವೀಯವಾಗಿದೆ ಎನ್ನುವುದನ್ನು ಕೃತಿ ಹಂತಹಂತವಾಗಿ ಬಿಚ್ಚಿಡುತ್ತದೆ. ಬೆಚ್ಚಿ ಬೀಳಿಸುತ್ತದೆ.
ಮೇರೆಮೀರಿದ ಪುರುಷನ ಕ್ರೌರ್ಯ, ಹೆಣ್ಣಿನ ಅಸಹಾಯಕತೆ, ಗಂಡಸಿನ ಕಾಮದ ಹಸಿವು, ಹೆಣ್ಣಿನ ಹೊಟ್ಟೆಯ ಹಸಿವು ಎಲ್ಲವೂ ಇಲ್ಲಿ ಬಯಲಾಗುತ್ತವೆ. ಪುಸ್ತಕವನ್ನು ಓದಿ ಮುಗಿಸಿದಾಗ ಎಲ್ಲ ಪುರುಷರೂ ಬೆತ್ತಲಾದ ಅನುಭವವೂ ಆಗಿದೆ..!
ಲೈಂಗಿಕ ಕಾರ್ಯಕರ್ತೆಯರ ಆತ್ಮಕತೆಗಳೂ ಕನ್ನಡದಲ್ಲಿ ಬಂದಿವೆ. ಆದರೆ ಇದು ಇಂತಹ ಹಲವಾರು ಹತಭಾಗ್ಯೆಯರ ಕತೆ. ಕತ್ತಲ ಕೂಪಕ್ಕೆ ಅವರನ್ನು ತಳ್ಳಿದ ಕತೆ. ಅಲ್ಲಿಂದ ಅವರನ್ನು ಬಿಡಿಸಲು ಸ್ಟ್ಯಾನ್ಲಿ–ಪರಶುರಾಮ ನಡೆಸಿದ ಹೋರಾಟದ ಕತೆ ಇದು.
ಈ ಹೋರಾಟದಲ್ಲಿ ಸೋಲು ಗೆಲುವು ಎರಡೂ ಇವೆ. ಎಲ್ಲವನ್ನೂ ಅವರು ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ವೇಶ್ಯಾವಾಟಿಕೆ ಎನ್ನುವುದು ಪುರಾತನ ಉದ್ಯೋಗ, ಎಲ್ಲ ಸಮಾಜಗಳಲ್ಲಿಯೂ ಎಲ್ಲ ದೇಶಗಳಲ್ಲಿಯೂ ಅದು ಮಾಮೂಲು ಎಂದು ಹೇಳುತ್ತಾ ಅದನ್ನು ಸಮರ್ಥಿಸಿಕೊಳ್ಳುತ್ತಾ ಬಂದಿರುವ ಸಮಾಜ ಕಾನೂನು ಬಾಹಿರ, ಅನೈತಿಕ ಮತ್ತು ಹಿಂಸಾತ್ಮಕ ಉದ್ಯಮವನ್ನು ಹೇಗೆ ಬೆಳೆಸುತ್ತಿದೆ ಎನ್ನುವುದರ ಮೇಲೆಯೂ ಈ ಪುಸ್ತಕ ಬೆಳಕು ಚೆಲ್ಲುತ್ತದೆ..!
ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಮಾನಸಿಕ ಸ್ಥಿತಿ, ಮಹಿಳೆಯರನ್ನು ಇಂತಹ ಕೂಪಕ್ಕೆ ಕೆಡವಲು ಪ್ರಯತ್ನಿಸುವ ವ್ಯಕ್ತಿಗಳ ಮಾನಸಿಕ ಸ್ಥಿತಿ, ದಂಧೆಯ ವಿವಿಧ ಮುಖಗಳು, ತಂದೆ ತಾಯಿಯ ಸಂಕಟ ಎಲ್ಲವೂ ಇಲ್ಲಿ ದಾಖಲಾಗಿವೆ. ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಮೈಸೂರಿನ ಇನ್ನೊಂದು ಮುಖ ಇಲ್ಲಿ ಕಾಣ ಸಿಗುತ್ತದೆ. ಅದೇ ರೀತಿ ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಶ್ಯಾವಾಟಿಕೆ ಉದ್ಯಮವಾಗಿ ಬೆಳೆದ ಬಗೆ ಹಾಗೂ ಅದರ ಪರಿಣಾಮಗಳ ಬಗ್ಗೆಯೂ ತಿಳಿವಳಿಕೆ ನೀಡುತ್ತದೆ. ಈ ಎಲ್ಲ ಅಂಶಗಳ ಬಗ್ಗೆ ಇನ್ನಷ್ಟು ಗಂಭೀರವಾಗಿ ಚಿಂತಿಸುವಂತೆಯೂ ಮಾಡುತ್ತದೆ..!
ಯಾವ ಮರ್ಯಾದಾ ಪುರುಷರೂ ಮಾಡಲು ಬಯಸದೇ ಇರುವ ಈ ಸೇವಾ ಕಾರ್ಯದಲ್ಲಿ ಸ್ಟ್ಯಾನ್ಲಿ–ಪರಶುರಾಮ ಕಳೆದ ಮೂರ್ನಾಲ್ಕು ದಶಕಗಳಿಂದ ತಮ್ಮನ್ನು ಈ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂತಹ ಎಲ್ಲ ರೀತಿಯ ಅವಮಾನ, ಅವಹೇಳನ, ಸನ್ಮಾನಗಳನ್ನೂ ಪಡೆದಿದ್ದಾರೆ. ಒಡನಾಡಿಯ ಸೋಲು ಗೆಲುವಿನ ಜೊತೆಗೆ ಸಮಾಜದ ಸೋಲು ಗೆಲುವುಗಳೂ ಇಲ್ಲಿವೆ. ಹಲವು ಬಾರಿ ‘ಒಡನಾಡಿ’ ಗೆದ್ದಿದೆ.
ಆದರೆ ಸಮಾಜ ಎಲ್ಲ ಬಾರಿಯೂ ಸೋತಿದೆ. ಒಮ್ಮೆ ಓದಿ ಕೆಳಗಿಡುವ ಪುಸ್ತಕ ಇದಲ್ಲ. ಓದಿದ ಮೇಲೆ ನಮ್ಮೊಳಗೂ ತಳಮಳ ಉಂಟಾದರೆ ಅದೇ ಅದರ ಯಶಸ್ಸೂ ಆಗಿದೆ ಎಂದೇ ನನ್ನ ಅಭಿಪ್ರಾಯವು ಆಗಿದೆ..!
- # ಕೆ.ಶಿವು.ಲಕ್ಕಣ್ಣವರ