ಹೈದರಾಬಾದ್ ಕರ್ನಾಟಕ

‘ಬುದ್ಧ ಪೂರ್ಣಿಮೆ ದಿನದಂದು ಕಾವ್ಯ ಪೂರ್ಣಿಮೆ’

ಕಲಬುರಗಿ: ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸಿ ಎಲ್ಲರೂ ಸೌಹಾರ್ದತೆಯಿಂದ ಬದುಕು ಸಾಗಿಸಲು ಭಗವಾನ ಗೌತಮ ಬುದ್ಧರು ಶಾಂತಿಯ ಸಂದೇಶಗಳನ್ನು ನೀಡಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಬೇಕಿವೆ ಎಂದು ಹಿರಿಯ ಪತ್ರಕರ್ತ ಸ.ದಾ.ಜೋಶಿ ಹೇಳಿದರು.

ಇದನ್ನೂ ಓದಿ: ಎನ್‍ಇಪಿ-2020ನ್ನು ತಿರಸ್ಕರಿಸಿ ದೇಶಾದಾದ್ಯಂತ 1 ಕೋಟಿ ಸಹಿ ಸಂಗ್ರಹಕ್ಕೆ ಎಐಡಿಎಸ್‍ಓ ಕರೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ‘ಬುದ್ಧ ಪೂರ್ಣಿಮೆ ದಿನದಂದು ಕಾವ್ಯ ಪೂರ್ಣಿಮೆ’ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿವಿಧ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬುದ್ಧನ ಶಾಂತಿಯ ಸಂದೇಶ ಮತ್ತು ವಿಶ್ವಗುರು ಬಸವಣ್ಣನ ಸಮಾಜ ಸುಧಾರಣೆಯ ತತ್ವಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಕಳೆದ ಐದಾರು ತಿಂಗಳುಗಳಲ್ಲೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮಗಳಿಂದ ಸಾಹಿತ್ಯಾಸಕ್ತರ ಮನ ಗೆದ್ದಿದೆ ಎಂದು ಮನದುಂಬಿ ಮಾತನಾಡಿದರು.

ಇದನ್ನೂ ಓದಿ: ರಾಜು ವಾಡೇಕರ್ ಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಕಟೀಲಗೆ ಮನವಿ

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವೈಚಾರಿಕ, ವೈಜ್ಞಾನಿಕ ತಳಹದಿ ಮೇಲೆ ನಿಂತಿರುವ ಬೌದ್ಧ ಧರ್ಮದಲ್ಲಿ ಸ್ವತಂತ್ರ ವಿವೇಚನೆಗೆ ತುಂಬಾ ಮಹತ್ವವಿದೆ. ಸರಳತೆ, ಸಹಜತೆಯಿಂದ ಕೂಡಿದ ಬೌದ್ಧ ಧರ್ಮ ಮಾನವೀಯ ಮೌಲ್ಯಗಳ ಗಣಿಯಾಗಿದೆ. ಕವಿಗಳು ಸಮಾಜಮುಖಿಯಾಗಿ ಬರೆಯಬೇಕು. ಕಾವ್ಯ ಸಮಾಜದ ಸಮಸ್ಯೆಗೆ ಸ್ಪಂದಿಸುವಂತಿರಬೇಕೆಂದು ಹೇಳಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶರಣಪ್ಪ ಮಾಳಗೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ  ಡಾ. ಶರಣಬಸಪ್ಪ ಗಣಜಲಖೇಡ, ಎಂ.ಆರ.ಎಂ.ಸಿ. ಕಾಲೇಜಿನ ಪ್ರಾಧ್ಯಾಪಕ ಡಾ. ವಿ.ಬಿ.ನಂದ್ಯಾಳ, ಹಿರಿಯ ಸಂಗೀತ ಕಲಾವಿದೆ ಗಿರೀಜಾ ಕರ್ಪೂರ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಡಾ.ಕೆ.ಗಿರಿಮಲ್ಲ, ಧರ್ಮಣ್ಣ ಧನ್ನಿ, ಕಲ್ಯಾಣಕುಮಾರ ಶೀಲವಂತ, ನಾಗೇಂದ್ರಪ್ಪ ಮಾಡ್ಯಾಳೆ, ಸಂಗಪ್ಪ ಸೇದಿಮನಿ,  ಶರಣರಾಜ ಛಪ್ಪರಬಂದಿ ಮಾತನಾಡಿದರು.

ಇದನ್ನೂ ಓದಿ: ಸರಕಾರಕ್ಕೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಶಿಫಾರಸ್ಸಿಗೆ ಕಟೀಲಗೆ ಮನವಿ

ಮಣ್ಣಲ್ಲಿ ಮಣ್ಣಾಗುವ ಮನುಷ್ಯನ ಈ ಅಮೂಲ್ಯ ದೇಹದಿಂದ ಹಲವರ ಜೀವ ಉಳಿಸುವ ಮಹತ್ವಾರ್ಯಕ್ಕೆ ಕೈ ಜೋಡಿಸಿ ಸತ್ತ ಮೇಲೂ ಸಮಾಜಸೇವೆ ಮಾಡುವ ಉದ್ದೇಶದಿಂದ ಜಿಲ್ಲಾ ಕಸಾಪ ದ ಪದಾಧಿಕಾರಿ ದಂಪತಿಗಳಾದ ಶಿವಲೀಲಾ ಮತ್ತು ರಾಜೇಂದ್ರ ಮಾಡಬೂಳ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲು ಒಪ್ಪಿಗೆ ಪತ್ರವನ್ನು ಇದೇ ಸಂದರ್ಭದಲ್ಲಿ ನೀಡಿ ಪರೋಪಕಾರದರಿವೇ ಪರಮಸೇವೆ ಎಂಬ ತತ್ವ ಸಾರಿದರು.

ಗಮನ ಸೆಳೆದ ಕವಿಗೋಷ್ಠಿ : ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕವಿಗಳಾದ ಕವಿತಾ ಕಾವಳೆ, ಹಣಮಂತರಾಯ ಘಂಟೇಕರ್, ನರಸಿಂಗರಾವ ಹೇಮನೂರ, ಸಾಗರ ವಾಗ್ಮೋರೆ, ಎಸ್.ಎಂ.ಪಟ್ಟಣಕರ್, ರೇಣುಕಾ ಎನ್. ಸೇರಿ ಅನೇಕರು ಸಮಾಜದ ಪ್ರಚಲಿತ ವಿದ್ಯಮಾನಗಳ ಕುರಿತು ಕವನ ವಾಚಿಸಿ ಪ್ರೇಕ್ಷಕರ ಗಮನ ಸೆಳೆದು ಕಾವ್ಯ ಪೂರ್ಣಿಮೆಗೆ ವಿಶೇಷ ಮೆರಗು ತಂದುಕೊಟ್ಟರು.

ಇದನ್ನೂ ಓದಿ: ಕ್ರೀಡಾ ಸಾಮಾಗ್ರಿ ವಿತರಣೆಯಲ್ಲಿ ವಿಳಂಬ: ಜೈಕನ್ನಡಿಗರ ಸೇನೆ ಪ್ರತಿಭಟನೆ

ಈಗಾಗಲೇ ದೇಹದಾನ ಮಾಡಲು ಒಪ್ಪಿಗೆ ಪತ್ರವನ್ನು ನೀಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರದ ಸಾಧಕರಾದ ಶಿವಾನಂದ ಹೂಗಾರ, ಪ್ರಭುಲಿಂಗ ಮಹಾಗಾಂವಕರ್, ರವಿಕುಮಾರ ಹರಗಿ ಸೇರಿದಂತೆ ಅನೇಕರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.

ಪ್ರಮುಖರಾದ ಸಂತೋಷ ಕುಡಳ್ಳಿ, ಕಲ್ಪನಾ ಗೋಲ್ಡಸ್ಮಿತ್, ವೈಶಾಲಿ ಪಾಟೀಲ, ಭಾರತಿ ವಾಡಿ, ಶಿವಲೀಲಾ ವಿ.ಪಾಟೀಲ ತೇಗಲತಿಪ್ಪಿ,  ರೇಖಾ ಎಸ್.ಅಂಡಗಿ, ಕವಿತಾ ದೇಗಾಂವ, ಜ್ಯೋತಿ ಕೋಟನೂರ, ವಿಜಯಲಕ್ಷ್ಮೀ ಹಿರೇಮಠ, ವೀರೇಂದ್ರ ಕೊಲ್ಲೂರ, ಪ್ರಭುಲಿಂಗ ಮೂಲಗೆ, ಮಂಜುನಾಥ ಕಂಬಾಳಿಮಠ,  ಆರ್.ಹೆಚ್.ಪಾಟೀಲ, ಸಿದ್ಧಾರಾಮ ಹಂಚನಾಳ, ಮಂಜುಳಾ ನಾಗೂರ, ಲಕ್ಷ್ಮಣರಾವ ಕಡಬೂರ, ದಿನೇಶ, ಶಿವಕುಮಾರ ಸಿ.ಎಚ್., ಶಿವಶರಣಪ್ಪ ಹಡಪದ, ಜಗದೀಶ ಮರಪಳ್ಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

1 hour ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

1 hour ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago