ಕಲಬುರಗಿ: ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ಮತ್ತು ಹೊಸ ಶಿಕ್ಷಣ ನೀತಿ ಎನ್‍ಇಪಿ-2020ರ ಅನುμÁ್ಠನದ ವಿರುದ್ಧ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಮೇ 1 ವಿಶ್ವ ಕಾರ್ಮಿಕರ ದಿನದಿಂದ ಸೆಪ್ಟಂಬರ್ 28 ಭಗತ್ ಸಿಂಗ್ ರ ಜನ್ಮ ದಿನದವರೆಗೆ, ಒಟ್ಟು 150 ದಿನಗಳಲ್ಲಿ ದೇಶಾದಾದ್ಯಂತ 1 ಕೋಟಿ ಸಹಿ ಸಂಗ್ರಹಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಶಿಕ್ಷಣದ ಮಾರಾಟವನ್ನು ತಡೆಗಟ್ಟಲು, ಅತ್ಯಂತ ಶಿಕ್ಷಣ ವಿರೋಧಿ ಎನ್‍ಇಪಿ-2020ನ್ನು ಹಿಮ್ಮೆಟ್ಟಿಸಲು ಕಲಬುರಗಿಯ ವಿದ್ಯಾರ್ಥಿ-ಯುವಜನತೆ ಮತ್ತು ಶಿಕ್ಷಣ ಪ್ರೇಮಿ ಜನತೆ ಸಜ್ಜಾಗಲು ಎಐಡಿಎಸ್‍ಓ ನ ಅಖಿಲ ಭಾರತ ಅದ್ಯಕ್ಷರಾದ ವಿ.ಎನ್.ರಾಜಶೇಖರ್ ಮತ್ತು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಸೌರವ್ ಘೋμï ರವರು ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಅಧ್ಯಕ್ಷರಾದ ವಿ.ಎನ್.ರಾಜಶೇಖರ್ ರವರು.., “ಶಿಕ್ಷಣ ದುಬಾರಿಯಾಗುತ್ತಿರುವುದು ಮತ್ತು ವ್ಯಾಪಾರೀಕರಣದ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ, ಶಿಕ್ಷಣವನ್ನು ಇನ್ನಷ್ಟು ದುಬಾರಿಗೊಳಿಸುವ, ವ್ಯಾಪಾರೀಕರಣಗೊಳಿಸುವಂತಹ ಸಲಹೆಗಳನ್ನು ನೀಡಿದೆ ಮತ್ತು ಎನ್‍ಇಪಿ-2020 ಇದು ಜಾರಿಯಾದರೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಲ್ಲಿದ್ದಾರೆ, ವೈಜ್ಞಾನಿಕ ಶಿಕ್ಷಣ ಚಿಂತನೆ, ವಿಜ್ಞಾನದ ಬೆಳವಣಿಗೆ, ಸಂಶೋಧನೆ ಕುಂಟಿತವಾಗಲಿದೆÉ, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸರ್ವನಾಶವಾಗಲಿದೆ.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ನಮ್ಮ ಆತಂಕ, ಈಗ ನಮಗೆ ಸಿಗುತ್ತಿರುವ ಶಿಕ್ಷಣವು ಮುಂದಿನ ಪೀಳಿಗೆಗಳಿಗೆ ಸಿಗದಂತೆ ಆಗುತ್ತದೆ, ಶೈಕ್ಷಣಿಕ ವಲಯವು ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಂಪೂರ್ಣ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರವಾಗುತ್ತದೆ. ದೇಶದ ನವೋದಯ ಚಿಂತಕರಾದ ರಾಜಾರಾಂ ಮೋಹನ್‍ರಾಯ್, ಈಶ್ವರಚಂದ್ರ ವಿದ್ಯಾಸಾಗರ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿ ಮುಂತಾದವರು ಕನಸು ಕಂಡಿದ್ದ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣದ ಆಶಯಕ್ಕೆ ವಿರುದ್ಧವಾಗಿದೆ. ಈ ಎಲ್ಲ ಕಾರಣಗಳಿಂದ, ಶಿಕ್ಷಣದ ‘ವ್ಯಾಪಾರೀಕರಣ-ಕೇಂದ್ರೀಕರಣ-ಕೋಮುವಾದೀಕರಣ-ಫ್ಯಾಸೀವಾದೀಕರಣ’ದ ನೀಲಿನಕ್ಷೆಯಾಗಿರುವ ಎನ್‍ಇಪಿ-2020ಯ ಸಂಕೋಲೆಗಳಿಂದ ಶಿಕ್ಷಣವನ್ನು ರಕ್ಷಿಸಲು ಶಿಕ್ಷಣಪ್ರೇಮಿ ಜನತೆ ಹಾಗೂ ಬಹುಮುಖ್ಯವಾಗಿ ವಿದ್ಯಾರ್ಥಿಗಳು ಪ್ರಬಲ ಹೋರಾಟಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಸೌರವ್ ಘೋμï ರವರು ಮಾತನಾಡುತ್ತಾ.., “ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ದೇಶವ್ಯಾಪಿ ಬೃಹತ್ ಹೋರಾಟದ ಭಾಗವಾಗಿರುವ 1ಕೋಟಿ ಸಹಿ ಸಂಗ್ರಹ ಅಭಿಯಾನಕ್ಕೆ ಶಿಕ್ಷಣ ಪ್ರೇಮಿ ಜನತೆ, ವಿದ್ಯಾರ್ಥಿ-ಯುವಜನರು, ಪೆÇೀಷಕರು, ಶಿಕ್ಷಕರು ಮತ್ತು ಉಪನ್ಯಾಸಕರು ದೇಶದಾದ್ಯಂತ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ಹಲವಾರು ಶಿಕ್ಷಣ ತಜ್ಞರು, ನಿವೃತ್ತ ಉಪನ್ಯಾಸಕರು, ಶಿಕ್ಷಕರು, ಪ್ರಾಂಶುಪಾಲರು, ಕುಲಪತಿಗಳು ಮೇ 1 ರಂದು ದೇಶದ್ಯಂತ 1 ಕೋಟಿ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: ಹತ್ತಿಗುಡೂರ ಗ್ರಾಮದಲ್ಲಿ ಕುಡಿಯುವ ನೀರಿಗೆ ಪರದಾಟ: ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ
ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿರುವ ಶಿಕ್ಷಣವನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ..! ಶಿಕ್ಷಣವನ್ನು ಮತ್ತಷ್ಟು ವ್ಯಾಪಾರ ಮಾಡಲು ನಾವು ಬಿಡುವುದಿಲ್ಲ..! ಎಂದು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಯುವಜನರು ಸಹಿ ಸಂಗ್ರಹ ಅಭಿಯಾನಗಳಲ್ಲಿ ದೇಶವ್ಯಾಪಿ ತೊಡಗುತ್ತಿದ್ದಾರೆ. ಇದು ಸಾರ್ವಜನಿಕ ಶಿಕ್ಷಣವನ್ನು ಉಳಿಸುವ ನಮ್ಮ ಹೋರಾಟವನ್ನು ಮತ್ತಷ್ಟು ಪುಷ್ಠಿಗೊಳಿಸಿದೆ” ಎಂದರು.
ಎಐಡಿಎಸ್‍ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ರವರು ಮಾತನಾಡುತ್ತಾ.., “ಹೊಸ ಶಿಕ್ಷಣ ನೀತಿ ಎನ್‍ಇಪಿ-2020ರ ಅನುμÁ್ಠನದ ವಿರುದ್ಧ ದೇಶಾದಾದ್ಯಂತ ಎಲ್ಲೆಡೆ ವಿದ್ಯಾರ್ಥಿಗಳು ಮತ್ತು ಹಲವು ಶಿಕ್ಷಣ ತಜ್ಞರು, ಉಪನ್ಯಾಸಕರು ಹಾಗೂ ಪೆÇೀಷಕರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೂ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಎನ್‍ಇಪಿ-2020ಅನ್ನು ಅನುμÁ್ಠನಗೊಳಿಸಿದ್ದಾರೆ.
ಯಾವುದೇ ನೂತನ ಶಿಕ್ಷಣ ನೀತಿ ಜಾರಿ ಆದಾಗ, ಅದರ ಆಧಾರದ ಮೇಲೆ ಶಿಕ್ಷಣ ತಜ್ಞರು, ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ, ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಟ ಒಂದೆರಡು ವರ್ಷಗಳು ಬೇಕಾಗುತ್ತದೆ. ಆದರೆ, ಎನ್‍ಇಪಿ-2020 ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ತಾನೇ ಮೊದಲು ಅನುμÁ್ಠನಕ್ಕೆ ತಂದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯ ಸರ್ಕಾರವು, ಕೇವಲ 15-20 ದಿನಗಳ ತಯಾರಿಯಲ್ಲಿ ನೀತಿಯನ್ನು ಜಾರಿ ಮಾಡಿ, ವಿದ್ಯಾರ್ಥಿಗಳಲ್ಲಿ ಮತ್ತು ಪೆÇೀಷಕರಲ್ಲಿ ಗೊಂದಲ ಹಾಗೂ ಸಮಸ್ಯೆಗಳನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಸಂಭ್ರಮದಿಂದ ಜರುಗಿದ ಸೋನ್ನ ರಥೋತ್ಸವ
ಗುಲ್ಬರ್ಗಾ ವಿಶ್ವವಿದ್ಯಾಲಯವು ಸಹ ಪೂರ್ವ ತಯಾರಿ ಇಲ್ಲದೆ, ಎನ್‍ಇಪಿ 2020 ಜಾರಿಮಾಡಿz.É ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಸದೇ ಅನಿರ್ಧಿಷ್ಟವಾಗಿ ಮುಂದುಡುತ್ತಾ ಬರುತ್ತಿದೆÉ. ಇನ್ನು ಒಂದು ತಿಂಗಳು ಕಳೆದರೆ ಇನ್ನು ಒಂದು ಹೊಸ ಬ್ಯಾಚ್ ಪದವಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ. ಸರ್ಕಾರದ ಇಂತಹ ಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತಿದೆ” ಎಂದರು.
ಈ ಪತ್ರಿಕಾ ಗೋಷ್ಠಿಯನ್ನು ಎಐಡಿಎಸ್‍ಓ ನ ಜಿಲ್ಲಾ ಅಧ್ಯಕ್ಷರಾದ ಹಣಮಂತ ಎಸ್ ಎಚ್ ರವರು ನಡಸಿಕೊಟ್ಟರು. ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿಗಳಾದ ತುಳಜರಾಮ ಎನ್ ಕೆ, ಉಪಾಧ್ಯಕ್ಷರಾದ ಸ್ನೇಹ ಕಟ್ಟಿಮನಿ ಸದಸ್ಯರಾದ ಅರುಣ, ನಾಗರಾಜ ಹಾಗೂ ಇತರ ಸದಸ್ಯರಿದ್ದರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮಹಿಳಾ ವಕೀಲರ ಮೇಲೆ ಹಲ್ಲೆಗೆ ಜೇವರ್ಗಿಯಲ್ಲಿ ಪ್ರತಿಭಟನೆ