ಸರಕಾರಕ್ಕೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಶಿಫಾರಸ್ಸಿಗೆ ಕಟೀಲಗೆ ಮನವಿ

0
28

ಕಲಬುರಗಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾ ಮಾದಿಗ ಸಮಾಜದ ಯುವ ಹೋರಾಟಗಾರರ ವತಿಯಿಂದ  ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ೨೦೧೯ ರಲ್ಲಿ ಶಿರಾ ವಿಧಾನಸಭಾ ಉಪ ಚುನಾವಣೆಯ ಪ್ರಚಾರ ಸಮಯದಲ್ಲಿ ತಾವು ಈ ಭೂಮಿ ಮೇಲೆ ಮಾತು ತಪ್ಪಲಾರದ ಸಮುದಾಯ ಯಾವುದಾದರೆ ಇದ್ದರ ಅದು ಮಾದಿಗ ಸಮಾಜ ಎಂದು ಹೊಗಳಿಕೆ ಮಾತ್ರ ತೋರಿಸಿಕೊಡು ಬರುತ್ತಿದೆ.

Contact Your\'s Advertisement; 9902492681

ಇದನ್ನೂ ಓದಿ: ಕ್ರೀಡಾ ಸಾಮಾಗ್ರಿ ವಿತರಣೆಯಲ್ಲಿ ವಿಳಂಬ: ಜೈಕನ್ನಡಿಗರ ಸೇನೆ ಪ್ರತಿಭಟನೆ

ರಾಜ್ಯದಲ್ಲಿ ಮಾತು ತಪ್ಪಲಾರದ ಪಕ್ಷ ಯಾವುದಾದರೆ ಇದ್ದರೆ ಅದು ಬಿ.ಜೆ.ಪಿ. ಎಂದು ತಿಳಿದಿದ್ದೇವೆ. ತಾವು ಕೂಡ ನುಡಿದಂತೆ ನಡೆದುಕೊಂಡರು ಮಾತ್ರ ಈ ರಾಜ್ಯದಲ್ಲಿ ಬಿ.ಜೆ.ಪಿ. ಪಕ್ಷಕ್ಕೆ ಉಳಿಗಾಲವಿದೆ. ಇಲ್ಲ ಅಂದರೆ ಮತ್ತೆ ಮಾದಿಗ ಸಮುದಾಯ ರಾಜ್ಯದಂತಹ ಮತದಾನ ಬಿ.ಜೆ.ಪಿ. ವಿರೋಧ ಮಾಡುವುದು ಅನಿವಾರ್ಯವಾಗುತ್ತದೆ ಅದಕ್ಕೆ ಆಸ್ಪದನೆ ಮಾಡಿಕೊಡಬಾರದೆಂದು ಈ ಮನವಿ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.

೨೦೧೭-೧೮ರಲ್ಲಿ ವಿಧಾನ ಸಭಾ ಹಾಗೂ ಲೋಕಸಭಾ  ಚುನಾವಣೆಯಲ್ಲಿ ಮಾದಿಗ ಸಮಾಜದ ಬಿ.ಜೆ.ಪಿ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮಹತ್ವದ ಪಾತ್ರವಹಿಸಿ ಬಹಿರಂಗವಾಗಿ ಬಿ.ಜೆ.ಪಿ. ಪಕ್ಷದ ಪರವಾಗಿ ಚುನಾವಣೆಯಲ್ಲಿ ಮತದಾನ ಮಾಡಿಸಿರುತ್ತೇವೆ. ಅದನ್ನು ಅರಿತುಕೊಂಡು ಕಲಬುರಗಿ ಜಿಲ್ಲೆಯಿಂದ ಮಾದಿಗ ಸಮಾಜದ  ಮುಖಂಡರಿಗೆ ಅಥವಾ ಕಾರ್ಯಕರ್ತರಿಗೆ ಒಬ್ಬರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೆಕೇಂದು ಮನವಿ ಪತ್ರದಲ್ಲಿ ತಿಳಸಿದ್ದಾರೆ.

ಇದನ್ನೂ ಓದಿ: ಸಿ.ಟಿ ರವಿಗೆ ಹೂ ಗುಚ್ಚು ನೀಡಿ ಸ್ವಾಗತಿಸಿದ ನರಸಿಂಹ ಮೆಂಡನ್

ಈ ಸಂದರ್ಭದಲ್ಲಿ ಜಿಲ್ಲಾ ಮಾದಿಗ ಸಮಾಜದ ಯುವ ಹೋರಾಟಗಾರರ ಅಧ್ಯಕ್ಷ ರಾಜು ಎಸ್.ಕಟ್ಟಿಮನಿ, ಮುಖಂಡರಾದ ರಮೇಶ ವಾಡೇಕರ್, ಮಲ್ಲಿಕಾರ್ಜುನ ಸರಡಗಿ, ವೆಂಕಟೇಶ ನಾಟಿಕಾರ, ಮಹೇಶ ಮೂಲಿಮನಿ, ಚಂದಪ್ಪ ಕಟ್ಟಿಮನಿ, ಸಚೀನ್ ಕಟ್ಟಮನಿ, ಸಂಜೀವ ಕಟ್ಟಮನಿ, ಅಮೃತ ಸಾಗರ, ರಂಜೀತಕುಮಾರ ಮೂಲಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here