ರಾಜು ವಾಡೇಕರ್ ಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಕಟೀಲಗೆ ಮನವಿ

0
41

ಕಲಬುರಗಿ:  ಸತತವಾಗಿ ಮೂರು ದಶಕಗಳಿಂದ ಅವಿರತವಾಗಿ ಭಾರತೀಯ ಜನತಾ ಪಕ್ಷದ ಏಳಿಗೆಗೆ ಶ್ರಮಿಸುತ್ತಿರುವ ರಾಜು ವಾಡೇಕರ್ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಜಿಲ್ಲಾ ಮಾದಿಗ ಸಮನ್ವಯ ಸಮಿತಿ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರಿಗೆ ಮನವಿ ಸಲ್ಲಿಸಿದರು.

ಮಾದಿಗ ಸಮಾಜದಿಂದ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಳೆದ ಇಪ್ಪತ್ತೆಂಟು ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಕೆಳ ಮಟ್ಟದಿಂದಲೂ ಪಕ್ಷದ ಸಂಘಟನೆ ನಡೆಸುತ್ತಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಯಾವುದೇ ಅಪೇಕ್ಷೆ ಇಲ್ಲದೇ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಎರಡು ಬಾರಿ ಪೇರೆಂಟ್ ಬಾಡಿಯಲ್ಲಿ ಎರಡು ಬಾರಿ ಉಪಾಧ್ಯಕ್ಷನಾಗಿ, ಎರಡು ಬಾರಿ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಬಾರಿ ಎಸ್ಸಿ ಮೋರ್ಚಾದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಸರಕಾರಕ್ಕೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಶಿಫಾರಸ್ಸಿಗೆ ಕಟೀಲಗೆ ಮನವಿ

ಬಾರಿ ಲೋಕಸಭೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳು ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಅಹರ್ನಿಶಿ ಪಕ್ಷಕ್ಕಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ವಿರುದ್ಧ ನೀಡಿದ ಪ್ರತಿಭಟನೆ, ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಒಂದೆರಡು ಬಾರಿ ಬಂಧನಕ್ಕೂ ಒಳಗಾಗಿದ್ದಾರೆ. ಇರುವಾಗ ಕಳೆದ ಪಕ್ಷ ಅಧಿಕಾರದಲ್ಲಿದ್ದಾಗಲೂ ಯಾವುದೇ ನಾಮನಿರ್ದೇಶನ ನೀಡಿಲ್ಲ. ಅಲ್ಲದೇ , ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಚರಿಸಿ ದಲಿತ, ಹಿಂದುಳಿದ ಮತಗಳನ್ನು ಕೂಡಿಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಎಂದು ತಮ್ಮಲ್ಲಿ ಆದ್ದರಿಂದ, ವಿಧಾನ ಪರಿಷತ್ತಿಗೆ ಈಗ ನಡೆಯಲಿರುವ ನಾಮನಿರ್ದೇಶನದಲ್ಲಿ ರಾಜು ವಾಡೇಕರ್ ಅವರ ಹೆಸರನ್ನು ಪರಿಗಣಿಸಿ, ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ವಿನಮ್ರಪೂರ್ವಕವಾಗಿ ಮನವಿ ಮಾಡಿದರು.

ಇದನ್ನೂ ಓದಿ: ಕ್ರೀಡಾ ಸಾಮಾಗ್ರಿ ವಿತರಣೆಯಲ್ಲಿ ವಿಳಂಬ: ಜೈಕನ್ನಡಿಗರ ಸೇನೆ ಪ್ರತಿಭಟನೆ

ಈ ಸಂದರ್ಭದಲ್ಲಿ  ಸಮಾಜದ ಮುಕಂಡರಾದ  ಸುಶೀಲ ಎಮ್. ಕಾಂಬಳ, ರಾಜು ಕಟ್ಟಿಮನಿ, ಮಲ್ಲು ಜಿನಕೇರಿ, ರಮೇಶ ವಾಡೇಕರ್, ಅನೀಲ ಡೊಂಗರಗಾಂವ, ಮಂಜು ನಾಲವಾರಕರ,  ಗೋಪಾಲ ನಾಟಕರ, ಮನೋಹರ ಬಿರನೂರ, ಪ್ರದೀಪ ಬಾಚನಾಳಕರ್, ಪ್ರಹ್ಲಾದ್ ಹಡಗಿಲಕರ್, ದತ್ತು ಬಾಸಗಿ, ರಂಜೀತ ಮೂಲಿಮನಿ, ಪ್ರೇಮ ಹಿಪ್ಪರಗಿ, ಬಂಡೇಶ ತಾರಫೈಲ್, ಸಚೀನ ಕಟ್ಟಿಮನಿ, ಶಿವಪುತ್ರ ನಾಗನಳ್ಳಿ, ಅಮೃತ ಸಾಗರ, ಮಧುಕರ ಕಾಂಬಳೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here