ಪಾಳಾದಲ್ಲಿ ಜುಲೈ 28 ರಂದು ಅಂಧ ಮತ್ತು ನಿರ್ಗತಿಕ ಮಕ್ಕಳ ಆಶ್ರಮ ಉದ್ಘಾಟನೆ

0
92

ಕಲಬುರಗಿ:  ತಾಲ್ಲೂಕಿನ ಪಾಳಾದಲ್ಲಿ ಅಂಧ ಮತ್ತು ನಿರ್ಗತಿಕ ಮಕ್ಕಳ ಆಶ್ರಮ ಉದ್ಘಾಟನೆ, ಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜುಲೈ ೨೮ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜರುಗಲಿದೆ ಎಂದು ಸಾಹಿತಿ ಶಿವರಾಜ್ ಪಾಟೀಲ್ ಅವರು ಇಲ್ಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಅಡಿಯಲ್ಲಿ ಕಾರ್ಯಕ್ರಮ ಜರುಗಲಿವೆ. ಲಿಂ. ಸುಭಾಶ್ಚಂದ್ರ ಪಾಟೀಲ್ ಅವರ ೩೦ನೇ ಪುಣ್ಯಸ್ಮರಣೆ ಪ್ರಯುಕ್ತ ಮೂರನೇ ವರ್ಷದ ಕಾರ್ಯಕ್ರಮ ಇದಾಗಿದೆ ಎಂದರು.

Contact Your\'s Advertisement; 9902492681

ಟ್ರಸ್ಟ್ ಅಧ್ಯಕ್ಷ ಶರಣಗೌಡ ಎಸ್. ಪಾಟೀಲ್ ಅವರು ಪಾಳಾ ಗ್ರಾಮದಲ್ಲಿ ಜಮೀನು ಹೊಂದಿದ್ದು, ತಮ್ಮ ತಂದೆಯವರ ಸ್ಮರಣಾರ್ಥ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬದಲ್ಲಿನ ಮೂವರು ಮಕ್ಕಳೊಂದಿಗೆ ಅಂಧ ಹಾಗೂ ನಿರ್ಗತಿಕ ಮಕ್ಕಳಿಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಜಮೀನಿನಲ್ಲಿಯೇ ಒಂದು ಪ್ರತ್ಯೇಕ ಆಶ್ರಮವನ್ನು ನಿರ್ಮಿಸಿದ್ದಾರೆ. ಅಂಧ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಆಶ್ರಮಕ್ಕೆ ಪ್ರವೇಶ ಪಡೆದು ಅವರಿಗೆ ಊಟ, ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಈ ಬಾರಿಯ ಗೌಡ ಪ್ರಶಸ್ತಿಗೆ ಅಖಿಲ ಭಾರತ್ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಗೋ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಚಿನ್ನದ ಪದಕವನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಸೊಲ್ಲಾಪೂರದ ಶ್ರೀಮತಿ ಮಧುಮಾಲಾ ಲಿಗಾಡೆ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ್ ಬಿ. ಪಾಟೀಲ್ ಧರ್ಮಾಪೂರ್, ಪತ್ರಕರ್ತರಾದ ದೇವಯ್ಯಾ ಗುತ್ತೇದಾರ್, ಡಿ. ಶಿವಲಿಂಗಪ್ಪ, ಪ್ರಗತಿಪರ ರೈತ ಬಸವಣ್ಣೆಪ್ಪ ಎಲ್. ಅಷ್ಟಗಿ, ಬಂಧು ಪ್ರಿಂಟರ್ಸ್ ಮಾಲಿಕ ರಮೇಶ್ ತಿಪನೂರ್, ಸೇಡಂ ಪ್ರಾಧ್ಯಾಪಕ ಡಾ. ಶ್ರೀಶೈಲ್ ಬಿರಾದಾರ್, ಕೋಟನೂರ್ (ಡಿ)ಯ ಶಿವಶಂಕರ್ ಬಿರಾದಾರ್, ಬೆಂಗಳೂರು ಸಿಬಿಐ ಇಲಾಖೆಯ ಶ್ರೀಮಂತರಾವ್ ರಾಜಾಪೂರ್, ಪ್ರಿನ್ಸಿಪಾಲ್ ಡಾ. ರಜಿಯಾ ಖಾನಮ್ ಅವರಿಗೆ ಗೌಡ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.

ಟ್ರಸ್ಟ್ ಅಧ್ಯಕ್ಷ ಶರಣಗೌಡ ಎಸ್. ಪಾಟೀಲ್ ಅವರು ಮಾತನಾಡಿ, ಅಂಧ ಹಾಗೂ ನಿರ್ಗತಿಕ ಮಕ್ಕಳ ಆಶ್ರಮಕ್ಕೆ ಸುತ್ತಮುತ್ತಲಿನ ಸುಮಾರು ೧೨ ಮಕ್ಕಳು ಈಗಾಗಲೇ ಸೇರಲು ಗುರುತಿಸಲಾಗಿದೆ. ೨೫ ಮಕ್ಕಳಿಗೆ ಆಶ್ರಮದಲ್ಲಿ ಈ ಬಾರಿ ಉಚಿತ ಪ್ರವೇಶಕ್ಕೆ ಉದ್ದೇಶ ಹೊಂದಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ್ ತೇಗಲತಿಪ್ಪಿ, ಬಸವಣ್ಣಪ್ಪಗೌಡ ಪಾಟೀಲ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here