ಪಠ್ಯದಲ್ಲಿ ಕೇಸರಿಕರಣ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

0
72

ಕಲಬುರಗಿ: ಸಾಹಿತಿಗಳಿಗೆ ಬರುತ್ತಿರುವ ಬೆದರಿಕೆ ಪತ್ರಗಳ ಸಮಗ್ರ ತನಿಖೆ ಒತ್ತಾಯಿಸಿ ಪಠ್ಯದಲ್ಲಿ ಕೆಸರಿಕರಣ ವಿರೋಧಿಸಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಬಂಡಾಯ ಸಾಹಿತಿ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಸಂಘಟನೆಯಿಂದ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರಬುದ್ಧ ಭಾರತ ಸಂಘರ್ಷ ಸಮಿತಿಯ ಸಂಚಾಲಕರಾದ ಅಶ್ವಿನಿ ಮದನಕರ ಮಾತನಾಡಿ ಭಾರತ ಬಹುತ್ವದ ನಾಡು, ವಿವಿಧತೆಯಲ್ಲಿ ಏಕತೆಯನ್ನು ಕ೦ಡ ನಾಡು.ಉಡುಪು, ವೇಷ-ಭೂಷಣವಿರುವ ಸರ್ವಜನಾಂಗದ ಶಾಂತಿಯ ತೋಟ. ಬುದ್ಧನ ನಾಡು ಶರಣರ ಬೀಡು. ಇಂತಹಸಾಂಸ್ಕೃತಿಕ ಪರಂಪರೆಯಲ್ಲಿ ರೋಹಿತ ಚಕ್ರತೀರ್ಥರ ಅಧ್ಯಕ್ಷತೆಯಲ್ಲಿ ಕೆವಲ ಒಂದುವರೆ ತಿಂಗಳಲ್ಲಿ ಎಂಟು ಜನರನ್ನು ಒಳಗೊಂಡ ಪಠ್ಯ ಪರಿಷ್ಕರಣ ಸಮಿತಿಯಿಂದ ತಯ್ಯಾರಾದ ಹೊಸ ಪಠ್ಯಕ್ರಮದ ಸೇರ್ಪಡೆಯು ಮಕ್ಕಳನ್ನು ಬೌದ್ಧಿಕ ಶಿಕ್ಷಣದಿಂದ ದೂರ ಸರಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಮಿತಿಯ ಅಧ್ಯಕ್ಷರಾದಿಯಾಗಿರುವರು ಮೇಲ್ವರ್ಗದ ಮತ್ತು ಬೆಂಗಳೂರಿನವರೆ ಆಗಿರುವುದರಿಂದ ಕರ್ನಾಟಕದ ಉಳಿದ ಭಾಗಗಳ್ಳಾದ ಕಲ್ಯಾಣ ಕರ್ನಾಟಕ, ಮದ್ಯ ಕರ್ನಾಟಕ ಭಾಗದ ಜನರನ್ನು ಒಳಗೊಳ್ಳದೆ ಇರುವುದು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತ ತಳಸಮುದಾಯ, ಅಲೆಮಾರಿ ಸಮುದಾಯಗಳ ಪ್ರಾದೇಶಿಕ ಪ್ರಾತಿನಿದ್ಯತೆಗೆ ಅವಕಾಶ ನೀಡದೆ ಅವರನ್ನು ನೇರವಾಗಿ ಶಿಕ್ಷಣದಿ೦ದ ವಂಚಿಸುವ ಹುನ್ನಾರವೇ ಈ ಪಠ್ಯಮರುಪರಿಷ್ಠರಣ ಸಮಿತಿಯ ಉದ್ಭೇಶವಿದೆ ಎಂದು ತಿಳಿಸಿದರು.

ಈಗಾಗಲ್ಲೇ ‘ಚಾಪ್ತಿಂಯಲ್ಲಿದ್ದ ಪಠ್ಯಗಳು ‘ಬುದ್ಧನ. ಕುರೆತ, ಪದ್ಯ ರಂಜಾನ್‌ ಸುರುಕುಂಬ ಮತ್ತು ಸಂಬ್ರಮದ ಜೋಕಾಲಿ, ಸ್ವಾಮಿ ವಿಭೇಕಾನಂದರ- ವಿಚಾರಗಳು, ಭಗತ್‌ ಸಿಂಗ್‌ ಪದ್ಯ, ಪೇರಿಯಾರ್‌, ಸುಕುಮಾರ ಸ್ವಾಮಿ ಕಥೆಗಳು ಹೀಗೆ ಭಾರತದ ಚರಿತ್ರೆಗೆ ಅಪಾರ -ಕೊಡುಗೆ ‘ನೀಡಿದ ಮಹಾನ ನೇತಾರರನ್ನು ಪಠ್ಯದಿಂದ ಕೈಬಿಟ್ಟು ಚರಿತ್ರೆಗೆ ಶ್ಯೂನ್ಯ ಕೊಡುಗೆ ನೀಡಿದ ಮತ್ತು ಸದಾ ಕೋಮುದ್ವೇಷ ಬಿತ್ತುವ ವ್ಯಕ್ತಿಗಳಿಂದ ಮಕ್ಕಳ ಭೌದ್ಧಿಕ ಮಟ್ಟ ಸುಧಾರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ನಾಡಿನ ಹೆಸರಾಂತ ಸಾಹಿತಿಗಳಾ ನಾಡೋಜ ಬರಗೂರು ರಾಮಚಂದ್ರಪ್ಪ, ಕುಂ.ವಿ, ಹೀಗೆ 60 ಜನರಿಗೆ ಜೀವ ಬೇದರಿಕೆಯ ಪತ್ರಗಳು ಬರುತ್ತಿದ್ದು ಈ ಕುರಿತು ಸರ್ಕಾರ ಗಂಭೀರ ತನಿಖೆ ನಡೆಸಬೇಕು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ಅರ್ಜುನ ಭದ್ರೆ, ರಿಪಬ್ಲಿಕನ್ ಯೂತ್ ಫೆಡರೇಶನನ ಸಂತೋಷ ಮೇಲ್ಮನಿ, ಹಣಮಂತ ಇಟಗಿ, ಭವಾನಿಪ್ರಸಾದ, ಹೆಸರು ಪ್ರಬುದ್ಧ ಭಾರತ ಸಂಘರ್ಷ ಸಮಿತಿಯ ಪೂಜಾ ಸಿಂಗೆ, ಸವಿತಾ ಕಾಂಬ್ಳೆ, ಹಣಮಂತ ಗಂಠೆಕರ್, ನಾಗೇಶ, ಸಾಜಿದ್ ಅಲಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here