ಕಲಬುರಗಿ : ನಗರದ ಮೊಮಿನಪುರ ದಲ್ಲಿರುವ ಅಲ್ ಖುರೇಷಿ ಪಬ್ಲಿಕ್ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಭೂಮಿಯನ್ನು ಕೆಲವು ವ್ಯಕ್ತಿಗಳು ಒತ್ತಾಯಪೂರ್ವಕವಾಗಿ ಕಬ್ಜೆ ಮಾಡಿಕೊಳ್ಳಲು ಮುಂದಾಗಿದ್ದು, ಕೂಡಲೇ ಆ ವ್ಯಕ್ತಿಗಳ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಮಿಯತೂಲ್ ಖೂರೇಶ್ ಸದಸ್ಯರು ಡಿಸಿಗೆ ಮನವಿ ಸಲ್ಲಿಸಿದರು.
ಸರ್ವೇ ನಂ. ೯೨.೧ ರಲ್ಲಿರುವ ೨ ಎಕರೆ ೮ ಗುಂಟೆ ಜಾಗೆ ೨೦೧೨ ರಲ್ಲಿ ನಮ್ಮ ಶಾಲೆಯ ಆಡಳಿತ ಮಂಡಳಿಗೆ ಲೀಜ್ ಆಧಾರದಲ್ಲಿ ಮಂಜೂರು ಆಗಿದೆ. ಈ ಕರಾರು ೨೦೪೨ ರ ವರೆಗೂ ಇದೆ. ಇಲ್ಲಿ ಶಾಲೆ ನಡೆಯುತ್ತಿದೆ. ಮಕ್ಕಳು ಆಟವಾಡಲು ಈ ಜಾಗೆಯನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ಕೆಲವು ಅಪರಾಧಿಕ ಹಿನ್ನೆಲೆ ಇರುವ ವ್ಯಕ್ತಿಗಳು ಜಾಗೆ ಕಬ್ಜೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ದೂರು ನೀಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದರು.
ಜಮಿಯತೂಲ್ ಖೂರೇಶ್‌ಯ ಜಿಲ್ಲಾಧ್ಯಕ್ಷ ಅಬ್ದುಲ ಸತ್ತಾರ ಸಿಂಗ್ಯಾಯ, ಉಪಾಧ್ಯಕ್ಷ ಹಾಜಿ ಅಹ್ಮದ ಬಡೇಖಾನ, ಕಾರ್ಯದರ್ಶಿ ರಸೀದ ಖಾನ್, ಜಂಟಿ ಕಾರ್ಯದರ್ಶಿ ಲತೀಫ್ ಖಾನ್, ಖಜಾಂಚಿ ಅಬ್ದುಲ ರಸೀದ ಟ್ವೆಂಟೆ, ಮಹ್ಮದ ನಿಜಾಮೋದ್ದಿನ ನವಾಡೆ, ರಫೀಕ್ ಬಡೆಖಾನ್, ಅಬ್ಬುಲ್ ಸಲ್ಲಾಂ ನವಾಡೆ, ಶಿರಾಜ ವಾಗೆಯಾ, ಗುಲಜಾರ್ ಖಾನ್ ಇದ್ದರು.