೨೦೨೧-೨೨ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶದ ಕರಪತ್ರ ಬಿಡುಗಡೆ

0
26

ಭಾಲಿ: ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ೨೦೨೧-೨೨ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶದ ಕರಪತ್ರವನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಿಡುಗಡೆ ಮಾಡಿದರು.

ಗಡಿಭಾಗದ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ನೋಡಿ ಅಪಾರ ಸಂತೋಷವಾಗುತ್ತದೆ. ಪ್ರತಿಯೊಬ್ಬ ಮಗುವಿನಲ್ಲಿಯೂ ಪ್ರತಿಭೆ ಇರುತ್ತದೆ. ಅದಕ್ಕೆ ಸೂಕ್ತ ವೇದಿಕೆ ಸಿಕ್ಕಾಗ ಆ ಪ್ರತಿಭೆಯ ಸುಗಂಧವನ್ನು ಎಲ್ಲಾ ಕಡೆ ಹರಡುತ್ತದೆ. ನಮ್ಮ ಸಂಸ್ಥೆ ಇಂತಹ ಮಕ್ಕಳಿಗೆ ಸೂಕ್ತ ವೇದಿಕೆಯಾಗಿರುವುದು ನಮಗೆ ತೃಪ್ತಿದಾಯಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಲಿತ ಮಕ್ಕಳಾದ ಸುಮಿತ ಈಶ್ವರ ಎಂಬ ವಿದ್ಯಾರ್ಥಿ ೬೨೪ ಅಂಕಗಳನ್ನು ಹಾಗೂ ಗುರುಬಸವ ಮತ್ತು ವಿಜಯಲಕ್ಷ್ಮಿ ಎಂಬ ಎರಡು ಮಕ್ಕಳು ೬೨೩ ಅಂಕಗಳನ್ನು ಪಡೆದು ರಾಜ್ಯಕ್ಕೆ ೨ನೇ ರ‍್ಯಾಂಕ್, ೩ನೇ ರ‍್ಯಾಂಕ್ ಬಂದಿರುವುದು ನಿಜಕ್ಕೂ ಸಂತೋಷದ ಸಂಗತಿ. ಹಾಗೆಯೇ ೨೩೪ ವಿದ್ಯಾರ್ಥಿಗಳ ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಪೂಜ್ಯರು ಸಂತೋಷವನ್ನು ವ್ಯಕ್ತಪಡಿಸಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.

Contact Your\'s Advertisement; 9902492681

ಅಕ್ಷರ ದಾಸೋಹ ಯೋಜನೆ ಅಧಿಕಾರಿಗಳಾದ ಗೀತಾ ಶಿವಕುಮಾರ ಗಡ್ಡೆ ಅವರಿಂದ ಕರಪತ್ರ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಬಸವರಾಜ ಮೊಳಕೇರೆ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಬಸವರಾಜ, ಇಂಜನೀಯರ್ ಸಿದ್ಧಯ್ಯ ಕಾವಡಿಮಠ, ಲಕ್ಷ್ಮಣ ಮೇತ್ರೆ, ಜಯಕ್ಕ ಗಾಂವಕರ, ಅನೀಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here