ಕಲಬುರಗಿ: ತಾಲೂಕಿನ ಕಡಣಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಈ ಬಾರಿ ಶೇ. ೯೨ ರಷ್ಟು ಅತ್ಯುತ್ತಮ ಫಲಿತಾಂಶ ಬಂದಿದೆ ಎಂದು ಶಾಲೆಯ ಮುಖ್ಯಗುರು ಪದ್ಮಜಾ ಮಳಖೇಡಕರ್ ತಿಳಿಸಿದ್ದಾರೆ.
ಒಟ್ಟು ೭೫ ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೧೮ ಜನ ಡಿಸ್ಟಿಂಕನ್ನಲ್ಲಿ ಪಾಸಾದರೆ, ೪೦ ಜನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೦೯ ಜನ ದ್ವಿತೀಯ ಶ್ರೇಣಿ ಮತ್ತು ೦೨ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶೇ. ೯೩. ೬೦ ಅಂಕ ಪಡೆದ ವಿದ್ಯಾರ್ಥಿನಿ ಅಕ್ಸನಾಜ ಹುಸೇನ್ ಪಟೇಲ್ ಶಾಲೆಗೆ ಟಾಪರ್ ವಿದ್ಯಾರ್ಥಿ ಆಗಿದ್ದಾಳೆ. ವಿದ್ಯಾರ್ಥಿಗಳ ಸಾಧನೆಗೆ ಎಸ್ಡಿಎಂಸಿ ಅಧ್ಯಕ್ಷರು, ಗ್ರಾಪಂ ಅಧ್ಯಕ್ಷರು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.