ಕಲಬುರಗಿ ; ರೌಡಿಶೀಟರ್‌ಗಳು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಕಂಡು ಬಂದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿಪಾರು ಆದೇಶಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನಗರದ ಉತ್ತರ ವಿಭಾಗದ ಎ.ಸಿ.ಪಿ ದೀಪನ್ ಎಮ್ ಎನ್ ರವರು ಎಚ್ಚರಿಕೆ ನೀಡಿದರು.
ನಗರದ ಎ.ಸಿ.ಪಿ ಉತ್ತರ ವಿಭಾಗದ ಕಛೇರಿಯಲ್ಲಿ ನಡೆದ ರೌಡಿ ಪರೇಡ್‌ನಲ್ಲಿ ಅವರು ರೌಡಿಶೀಟರ್‌ಗಳಿಗೆ ಈ ಖಡಕ್ಕಾದ ಎಚ್ಚರಿಕೆಯನ್ನು ನೀಡಿದರು. ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗದಂತೆ ಮತ್ತು ಬಡ್ಡಿ ವ್ಯವಹಾರ, ಲ್ಯಾಂಡ್ ಮಾಫಿಯಾ, ಹಪ್ತಾ ವಸೂಲಿ ಮಾಡದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದರು.
ಒಂದು ವೇಳೆ ಇಂತಹ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿಪಾರು ಆದೇಶಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.
ಈ ಪರೇಡ್‌ನಲ್ಲಿ ಠಾಣಾ ವ್ಯಾಪ್ತಿಯ ೧೭೫ ಜನ ರೌಡಿಶೀಟರ್‌ಗಳ ಪೈಕಿ ೮೯ ಜನ ರೌಡಿಶೀಟರ್‌ಗಳು ಭಾಗವಹಿಸಿದ್ದರು. ಪರೇಡ್‌ಗೆ ಗೈರು ಹಾಜರಾದ ರೌಡಿಶೀಟರ್‌ಗಳ ಮೇಲೆ ನಿಗಾ ಇರಿಸಲಾಗಿದ್ದು, ಅವರು ಪ್ರತಿ ತಿಂಗಳು ರೌಡಿ ಪರೇಡ್‌ಗೆ ಹಾಜರಾಗಬೇಕು ಎಂದು ಸೂಚಿಸಿದರು.