ಶಾಂತರಸರು ಅಪ್ಪಟ ಸಾಹಿತ್ಯ ಪ್ರೇಮಿ: ಅಜೀಂ ಪಾಷಾ

0
36

ಕಲಬುರಗಿ: ಉರ್ದುವಿನಲ್ಲಿ ಓದಿದ್ದ ನಾಡೋಜ ಶಾಂತರಸರು ಕನ್ನಡ ಸಾಹಿತ್ಯದ ಅಪ್ಪಟ ಪ್ರೇಮಿಯಾಗಿದ್ದರು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಅಜೀಂ ಪಾಷಾ ಅಭಿಮತ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ವಚನ ಸಂಜೀವಿನಿ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ, ಜಿಲ್ಲಾ ಕಸಾಪ ಹಾಗೂ ರಂಗ ಸಂಗಮ ಕಲಾ ವೇದಿಕೆಯಿಂದ ನಾಡೋಜ ಶಾಂತರಸ ಹೆಂಬೆರಾಳು ಮತ್ತು ಲಕ್ಷ್ಮಿದೇವಿ ಶಾಂತರಸ ಹೆಂಬೆರಾಳು ಪುಣ್ಯಸ್ಮರಣೆ ನಿಮಿತ್ತ ಗುರುವಾರ ಸಂಜೆ ಆಯೋಜಿಸಿದ್ದ ಯುವ ಕಲಾವಿದರಾದ ನೌಶಾದ್ ಹರ್ಲಾಪುರ ಮತ್ತು ನಿಶಾದ್ ಹರ್ಲಾಪುರ ಅವರ ಹಿಂದೂಸ್ತಾನಿ ಜುಗಲ್ಬಂದಿ ಗಾಯನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶಾಂತರಸರು ಬರೆದ ಸಾಹಿತ್ಯ ಮನುಷ್ಯರನ್ನು ಪರಿವರ್ತಿಸುವದಿದೆ. ಕ್ರಾಂತಿಯ ರಸ ಶಾಂತರಸರು. ಅವರದು ಹೋರಾಟದ ಬದುಕು, ಜೀವನವೇ ಪಣಕ್ಕಿಟ್ಟು ಸಮಾಜಕ್ಕಾಗಿ ಶ್ರಮಿಸಿದ್ದಾರೆ.

Contact Your\'s Advertisement; 9902492681

ಎಂಥ ಕಷ್ಟ ಬಂದರೂ ಸಮಾಜವನ್ನು, ತಾವು ನಂಬಿರುವ ತತ್ವವನ್ನು ಬಿಡಲಿಲ್ಲ. ಅವರ ವ್ಯಕ್ತಿತ್ವ ಅದ್ಭುತವಾಗಿತ್ತು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಸಾಮರಸ್ಯದ ಬದುಕು ನಿರೂಪಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಮಾತನಾಡಿದರು. ವಚನ ಸಂಜೀವಿನಿ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ ಶಂಕ್ರಪ್ಪ ಹೂಗಾರ ಪ್ರಾಸ್ತಾವಿಕ ಮಾತನಾಡಿದರು.

ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಎಚ್.ಎಸ್. ಬಸವಪ್ರಭು, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಂಜಯ್ ರೆಡ್ಡಿ, ಡಾ. ಸುಭಾಷ್‌ಚಂದ್ರ, ರಂಗ ಸಂಗಮ ಕಲಾ ಸಂಘದ ಜಂಗಮಶೆಟ್ಟಿ, ಕಾರ್ಯದರ್ಶಿ ಡಾ. ಸುಜಾತಾ ವಿಜಯಕುಮಾರ, ರವೀಂದ್ರ ಕುಲಕರ್ಣಿ ಉಪಸ್ಥಿತರಿದ್ದರು. ಯುವ ಕಲಾವಿದರಾದ ನೌಶಾದ್ ಹರ್ಲಾಪುರ ಮತ್ತು ನಿಶಾದ್ ಹರ್ಲಾಪುರ ಅವರ ಹಿಂದೂಸ್ತಾನಿ ಜುಗಲ್ಬಂದಿ ಗಾಯನ ಪೇಕ್ಷರನ್ನು ಆಕರ್ಷಿಸಿತು. ಜಡೇಶ ಹೂಗಾರ ತಬಲಾ, ರೇವಯ್ಯ ವಸ್ತ್ರದ ಮಠ ಹಾರ್ಮೋನಿಯಂ ಸಾಥ ಹಾಗೂ ಸುಧೀಂದ್ರ ತಾಳ ಸಾಥ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here